ಬೆಂಗಳೂರು: ರಾಜ್ಯಾಧ್ಯಂತ ಆಸ್ಪತ್ರೆ ಒಳ ಹಾಗೂ ಹೊರ ಆವರಣದಲ್ಲಿ ಬೀದಿ ನಾಯಿಗಳು ಓಡಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಲ್ಲದೇ ಇವುಗಳ ನಿಯಂತ್ರಣಕ್ಕೆ ಮಹತ್ವದ ಆದೇಶವನ್ನು ಹೊರಡಿಸಿದೆ. ಜೊತೆಗೆ ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶದಲ್ಲಿ ಖಡಕ್ ಸೂಚನೆ ನೀಡಲಾಗಿದೆ.
ಇಂದು ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಎಲ್ಲಾ ಜಿಲ್ಲೆಯ ಡಿಹೆಚ್ಓ ಹಾಗು ಟಿಹೆಚ್ಓ ಹಾಗೂ ವೈದ್ಯಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ದಿನಪತ್ರಿಕೆಗಳಲ್ಲಿ ನಾಯಿಗಳು ಆಸ್ಪತ್ರೆಯ ಒಳ ಹಾಗೂ ಹೊರ ಆವರಣಗಳಲ್ಲಿ ಬೀದಿ ನಾಯಿಗಳು ಪುವೇಶ ಮಾಡಿ ಒಳರೋಗಿ, ಹೊರರೋಗಿ, ಗರ್ಭಿಣಿಯರು, ಹಾಗೂ ತಾಯಿ-ಮಕ್ಕಳಿಗೆ ಅಪಾಯ ಉಂಟುಮಾಡುವ ಸಂಭವದ ಬಗ್ಗೆ, ದಿನಪತ್ರಿಕೆಗಳು, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ವರದಿಗಳು ಪಕಟವಾಗುತ್ತಿರುವುದನ್ನು ಗಮನಿಸಲಾಗಿದೆ ಎಂದಿದ್ದಾರೆ.
ಆರೋಗ್ಯ ಸಂಸ್ಕೃಗಳಿಗೆ ಭೇಟಿ ನೀಡಿದ ಸಾರ್ವಜನಿಕರಿಗೆ ದಿನನಿತ್ಯ ತುರ್ತು ವಿಭಾಗ, ಹೊರ ಹಾಗೂ ಒಳರೋಗಿಗಳ ವಿಭಾಗ, ಗರ್ಭಿಣಿಯರು, ತಾಯಂದಿರು, ಹಾಗೂ ಮಕ್ಕಳಿಗೆ ಪ್ರಸೂತಿ ವಿಭಾಗದಲ್ಲಿ ಅವಶ್ಯ ವೈದ್ಯಕೀಯ ಸೇವೆಯನ್ನು ನಿರಂತರ ಒದಗಿಸಲಾಗುತ್ತಿರುತ್ತದೆ. ಆದುದರಿಂದ ಆರೋಗ್ಯ ಸಂಸ್ಥೆಗಳು ಅತ್ಯಂತ ಪುದೇಶವಾಗಿದ್ದು, ಆಸ್ಪತ್ರೆಯಲ್ಲಿ ಸೋಂಕು ತಡೆಗಟ್ಟಲು ಹಾಗೂ ಸಾರ್ವಜನಿಕರಿಗೆ ಉಂಟಾಗಬಹುದಾದ ಸಂಭವನೀಯ ಅಪಾಯಗಳನ್ನು ತಡೆಗಟ್ಟಲು ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಸಂಸ್ಥೆಗಳಿಗೆ ಯಾವುದೇ ತರಹದ ಜಾನುವಾರು ಹಾಗೂ ಸಾಕು ಪ್ರಾಣಿಗಳ ಪುವೇಶವನ್ನು ನಿರ್ಬಂದಿಸುವುದು ಅತ್ಯವಶ್ಯವಾಗಿರುತ್ತದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಜಾನುವಾರು ಹಾಗೂ ಬೀದಿ ನಾಯಿಗಳು ಪುವೇಶಿಸಿ, ಆಸ್ಪತ್ರೆಯ ಒಳ ಹಾಗೂ ಹೊರರೋಗಿಗಳಿಗೆ ಆತಂಕ ಉಂಟುಮಾಡುತ್ತಿರುವುದರ ಬಗ್ಗೆ ಮಾಧ್ಯಮಗಳಲ್ಲಿ ಆಗಿಂದಾಗ ವರದಿಗಳು ಆಗುತ್ತಿದ್ದು, ಆಸ್ಪತ್ರೆಗಳ ವೈದ್ಯಕೀಯ ತ್ಯಾಜ್ಯ ಹಾಗೂ ಆಹಾರ ಪದಾರ್ಥಗಳ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸದೇ ಇರುವುದು ಬೀದಿ ನಾಯಿಗಳು ಆಸ್ಪತ್ರೆಯ ಆವರಣವನ್ನು ಪ್ರವೇಶಿಸುತ್ತಿರುವುದಕ್ಕ ಪುಮುಖ ಕಾರಣವಾಗಿರುತ್ತದೆ. ಈ ಬಗ್ಗೆ ಆರೋಗ್ಯ ಸಂಸ್ಥೆಗಳ ಆಡಳಿತ ಮುಖ್ಯಸ್ಥರು ಅಗತ್ಯ ಕ್ರಮವಹಿಸದೇ ನಿರ್ಲಕ್ಷ್ಯವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದರಿ ಮಾಧ್ಯಮ ವರದಿಗಳಿಂದ ಸಾರ್ವಜನಿಕರಲ್ಲಿ ಇಲಾಖೆಯ ಆರೋಗ್ಯ ಸಂಸ್ಥೆಗಳ ಬಗ್ಗೆ ಋಣಾತ್ಮಕ ಅಭಿಪ್ರಾಯ ಮೂಡಲು ಕಾರಣವಾಗಿರುತ್ತದೆ. ಆದುದರಿಂದ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಆರೋಗ್ಯ ಸಂಸ್ಥೆಗಳ ಒಳ ಹಾಗೂ ಹೊರ ಆವರಣದಲ್ಲಿ ಯಾವುದೇ ಜಾನುವಾರು ಹಾಗೂ ಸಾಕು ಪ್ರಾಣಿಗಳು ಪುವೇಶಿಸದಂತೆ ಅಗತ್ಯ ಕ್ರಮಗಳನ್ನು ವಹಿಸಲು ಈ ಮೂಲಕ ತಿಳಿಸಿದ್ದಾರೆ.
ಈ ಸಂಬಂಧ ಆಗುವ ನಿರ್ಲಕ್ಷ್ಯತೆಯನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಸಂಸ್ಥೆಯ ಮುಖ್ಯಸ್ಮರ ಮೇಲೆ ಶಿಸ್ತು ಕ್ರಮವನ್ನು ಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸಿದೆ. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಯ ಮುಖ್ಯಸ್ಥರು ಈ ಸಂಬಂಧ ತೆಗೆದುಕೊಂಡಿರುವ ಮುಂಜಾಗೃತ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮೂಲಕ ಒಂದು ವಾರದೊಳಗಾಗಿ ವರದಿಯನ್ನು ಸಲ್ಲಿಸಲು ಸಹ ಸೂಚಿಸಿದ್ದಾರೆ.
ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಬಂದೋಬಸ್ತ್, ಎಲ್ಲೆಲ್ಲೂ ಕಟ್ಟೆಚ್ಚರ: ಎಸ್ಪಿ ಮಿಥುನ್ ಕುಮಾರ್