Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಾಸನದಲ್ಲಿ ಭೀಕರ ಅಪಘಾತ : ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು, ಐವರಿಗೆ ಗಾಯ!

19/02/2026 1:02 PM

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

19/02/2026 1:02 PM

ಬಿ.ಪಿ, ಡಯಾಬಿಟಿಸ್ ರೋಗಿಗಳಿಗೆ ಗುಡ್ ನ್ಯೂಸ್ : ಈ `ಅಕ್ಕಿ’ ತಿಂದ್ರೆ ಶುಗರ್ ಎಂದಿಗೂ ಹೆಚ್ಚಾಗಲ್ಲ !

19/02/2026 12:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿಸಿ ಆದೇಶ
KARNATAKA

ಮಂಡ್ಯದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿಸಿ ಆದೇಶ

By kannadanewsnow0918/06/2025 5:50 PM

ಬೆಂಗಳೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿಸಿ ಆದೇಶಿಸಿದೆ.

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, 2024-25ನೇ ಸಾಲಿನ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸಲು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಲು 2024-25ನೇ ಸಾಲಿನ ಕ್ರಿಯಾಯೋಜನೆ ಲೆಕ್ಕಶೀರ್ಷಿಕ: 2205-00-102-4-22 ಕನ್ನಡ ಸಾಹಿತ್ಯ ಪರಿಷತ್‌ಗೆ ಸಹಾಯಾನುದಾನ 103 ಸಹಾಯಾನುದಾನ-ಸಾಮಾನ್ಯ ರಡಿ ರೂ.10.00 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿರುತ್ತದೆ ಎಂದಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚುವರಿಯಾಗಿ ರೂ.15.00 ಕೋಟಿ ಅನುದಾನ ಮಂಜೂರು ಮಾಡಲಾಗಿರುತ್ತದೆ. 2024-25ನೇ ಸಾಲಿನ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ ರೂ.5.00 ಕೋಟಿ ಅನುದಾನ ಮಂಜೂರು ಮಾಡಲಾಗಿರುತ್ತದೆ ಎಂದು ಹೇಳಿದ್ದಾರೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಹೊರತುಪಡಿಸಿದಂತೆ, ಮಳಿಗೆಗಳು, ಪ್ರತಿನಿಧಿಗಳ ನೋಂದಣಿ ಶುಲ್ಕ ಹಾಗೂ ಹೆಚ್.ಆರ್.ಎಂ.ಎಸ್ ನೌಕರರನ್ನು ಹೊರತುಪಡಿಸಿ ನೌಕರರ ಒಂದು ದಿನದ ವೇತನದ ದೇಣಿಗೆ ಹಾಗೂ ಇತರ ದೇಣಿಗೆಗಳಿಂದ ಸಂಗ್ರಹಿಸಲಾದ ಬಳಕೆಯಾಗದೆ ಇರುವ ರೂ.2,18,68,392/- ಗಳನ್ನು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಕನ್ನಡ ಭವನ ನಿರ್ಮಾಣ ಯೋಜನಗೆ ಬಳಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ ಮಂಡ್ಯ ಇವರಿಗೆ ಅನುಮತಿ ನೀಡುವಂತೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿವಿಧ ಮೂಲಗಳಿಂದ ಸಂಗ್ರಹ ಮಾಡಿಕೊಂಡು ಬಳಕೆಯಾಗದೆ ಇರುವ ರೂ.2,18,68,392/- ಗಳನ್ನು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣ ಯೋಜನೆಗೆ ಬಳಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ ಇವರಿಗೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಸರ್ಕಾರದ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.

ಷರತ್ತುಗಳು:-

1. ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಬಳಕಗೆ ಅನುಮತಿ ನೀಡಿದ್ದು, ಅದೇ ಉದ್ದೇಶಕ್ಕೆ ಬಳಸತಕ್ಕದ್ದು.

2. ಅಂದಾಜು ವೆಚ್ಚ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
3. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999, ನಿಯಮ- 2000 ಮತ್ತು ಸರ್ಕಾರ ಆಗಿಂದಾಗ ಹೊರಡಿಸಿದ ಸುತ್ತೋಲೆಗಳಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
4. ಕಾಮಗಾರಿಯನ್ನು ಅನುದಾನದ ಮಿತಿಯಲ್ಲಿಯೇ ಅನುಷ್ಠಾನಗೊಳಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 2025, ದಿನಾಂಕ: 02.04.2025ರಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಲಾಗಿದೆ.

ವರದಿ: ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

ಹಾಸನದಲ್ಲಿ ಭೀಕರ ಅಪಘಾತ : ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು, ಐವರಿಗೆ ಗಾಯ!

19/02/2026 1:02 PM1 Min Read

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

19/02/2026 1:02 PM1 Min Read

ಬಿ.ಪಿ, ಡಯಾಬಿಟಿಸ್ ರೋಗಿಗಳಿಗೆ ಗುಡ್ ನ್ಯೂಸ್ : ಈ `ಅಕ್ಕಿ’ ತಿಂದ್ರೆ ಶುಗರ್ ಎಂದಿಗೂ ಹೆಚ್ಚಾಗಲ್ಲ !

19/02/2026 12:53 PM1 Min Read
Recent News

ಹಾಸನದಲ್ಲಿ ಭೀಕರ ಅಪಘಾತ : ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು, ಐವರಿಗೆ ಗಾಯ!

19/02/2026 1:02 PM

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

19/02/2026 1:02 PM

ಬಿ.ಪಿ, ಡಯಾಬಿಟಿಸ್ ರೋಗಿಗಳಿಗೆ ಗುಡ್ ನ್ಯೂಸ್ : ಈ `ಅಕ್ಕಿ’ ತಿಂದ್ರೆ ಶುಗರ್ ಎಂದಿಗೂ ಹೆಚ್ಚಾಗಲ್ಲ !

19/02/2026 12:53 PM

ಉದಯೋನ್ಮುಖ ಕಲಾವಿದರಿಗಾಗಿ ‘ಪರಮ್ ವಿಹಾರ’: ಫೆ.22ರಂದು ಬಸವನಗುಡಿಯಲ್ಲಿ ಸಂಗೀತ-ನೃತ್ಯದ ಸಾಂಸ್ಕೃತಿಕ ಸಂಜೆ

19/02/2026 12:46 PM
State News
KARNATAKA

ಹಾಸನದಲ್ಲಿ ಭೀಕರ ಅಪಘಾತ : ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು, ಐವರಿಗೆ ಗಾಯ!

By kannadanewsnow0519/02/2026 1:02 PM KARNATAKA 1 Min Read

ಹಾಸನ : ಹಾಸನದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಫಾರ್ಚುನರ್ ಕಾರು ರಸ್ತೆ ಬದಿಯ ಮನೆಗೆ ನುಗ್ಗಿದ…

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

19/02/2026 1:02 PM

ಬಿ.ಪಿ, ಡಯಾಬಿಟಿಸ್ ರೋಗಿಗಳಿಗೆ ಗುಡ್ ನ್ಯೂಸ್ : ಈ `ಅಕ್ಕಿ’ ತಿಂದ್ರೆ ಶುಗರ್ ಎಂದಿಗೂ ಹೆಚ್ಚಾಗಲ್ಲ !

19/02/2026 12:53 PM

ಉದಯೋನ್ಮುಖ ಕಲಾವಿದರಿಗಾಗಿ ‘ಪರಮ್ ವಿಹಾರ’: ಫೆ.22ರಂದು ಬಸವನಗುಡಿಯಲ್ಲಿ ಸಂಗೀತ-ನೃತ್ಯದ ಸಾಂಸ್ಕೃತಿಕ ಸಂಜೆ

19/02/2026 12:46 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.