ಬೆಂಗಳೂರು: ನಗರ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಮಂಜುನಾಥ್ ವಿರುದ್ಧ ರಾಜ್ಯ ಸರ್ಕಾರದ ಕೆಂಗಣ್ಣು ಬೀರಿದೆ ಎನ್ನುವಂತೆ ಹೇಳಲಾಗುತ್ತಿದೆ. ಇದೀಗ ಅವರ ಅವಧಿಯಲ್ಲಿನ ವಿವಿಧ ನೇಮಕಾತಿ, ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಸೋದಕ್ಕೆ ಸರ್ಕಾರ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.
ಹಲವು ವರ್ಷಗಳ ಅವಧಿಯ ವರೆಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಡಾ.ಮಂಜುನಾಥ್ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗಷ್ಟೇ ಅವರು ನಿರ್ದೇಶಕರ ಹುದ್ದೆಯಿಂದ ನಿವೃತ್ತರಾಗಿದ್ದರು. ಈ ಬೆನ್ನಲ್ಲೇ ಅವರ ಅವಧಿಯಲ್ಲಿ ನಡೆದ ನೇಮಕಾತಿ,ಮೈಸೂರು ಸೇರಿದಂತೆ ವಿವಿದೆಡೆ ನಿರ್ಮಿಸಲಾದ ಕಟ್ಟಡ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಜ್ಜಾಗುತ್ತಿದೆ ಎನ್ನಲಾಗುತ್ತಿದೆ.
ಒಂದೆರಡು ದಿನಗಳಲ್ಲಿ ತನಿಖೆಗೆ ಆದೇಶ
ಇತ್ತೀಚೆಗಷ್ಟೇ ಜಯದೇವ ಹೃದ್ರೋಗ ಸಂಸ್ಥೆಯ ಸೇವೆಯಿಂದ ಡಾ.ಮಂಜುನಾಥ್ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಸಂಸತ್ ಚುನಾವಣೆಗೆ ಸ್ಪರ್ಧಿಸಲು ಮಂಜುನಾಥ್ ಸಜ್ಜಾಗುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯಗಳಲ್ಲಿ ಹಬ್ಬಿರುವ ಕಾಲದಲ್ಲೇ ತನಿಖೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧದ ಕಡತಗಳನ್ನು ಹಗಲಿರುಳು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಹೇಗಿದೆ ನೋಡಿ ಮೊದಲ ‘ಚಾಲಕ ರಹಿತ’ ನಮ್ಮ ಮೆಟ್ರೋ ರೈಲು : ಫೋಟೋ ರಿವಿಲ್ ಮಾಡಿದ ಬಿಎಂಆರ್‌ಸಿಎಲ್
ಬಿಜೆಪಿ ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು- ಸಿಎಂ ಸಿದ್ದರಾಮಯ್ಯ