ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದ್ದಂತ ಪೊಲೀಸರು, ಅವರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇಂತಹ ಪೊಲೀಸ್ ತನಿಖಾ ತಂಡಕ್ಕೆ ಸರ್ಕಾರವು ಭರ್ಜರಿ ಬಹುಮಾನ ಘೋಷಿಸಿದೆ. ಅದೆಷ್ಟೆಂದರೇ ಬರೋಬ್ಬರಿ 25 ಲಕ್ಷವಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡುವ ಕುರಿತು ವಿವಿಧ ದರ್ಜೆಯ ಅಧಿಕಾರಿಗಳಿಗೆ ಈ ಹಿಂದೆ ನಿಗದಿಪಡಿಸಿದ ಆರ್ಥಿಕ ವಿತ್ತಾಧಿಕಾರವನ್ನು ಭಾಗಶ: ಮಾರ್ಪಡಿಸಿ ಆರ್ಥಿಕ ವಿತ್ತಾಧಿಕಾರವನ್ನು ಹೆಚ್ಚಿಸಿ ಆದೇಶಿಸಲಾಗಿದೆ ಎಂದಿದೆ.
ಹಾಸನ ಜಿಲ್ಲಾ ಮಾಜಿ ಸಂಸದ ಪುಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಪುಕರಣಗಳ ತನಿಖೆ ಕುರಿತು ರಚಿಸಿರುವ ವಿಶೇಷ ತನಿಖಾ ತಂಡವು ಸದರಿರವರುಗಳ ವಿರುದ್ಧ ಒಟ್ಟು 04 ಪಕರಣ ಮತ್ತು ಹೆಚ್.ಡಿ ರೇವಣ್ಣ ರವರ ವಿರುದ್ಧ ದಾಖಲಾಗಿರುವ ಒಟ್ಟು 01 ಪುಕರಣಗಳ ತನಿಖಾ ಕಾಲದಲ್ಲಿ ಸಮರ್ಪಕವಾಗಿ ತನಿಖೆ ಕೈಗೊಂಡು ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಒಟ್ಟು 05 ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿಯನ್ನು ಸಿದ್ಧಪಡಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ. ಸದರಿ ಪುಕರಣಗಳ ಪೈಕಿ ಸಿ.ಐ.ಡಿ. ಸೈಬರ್ ಕ್ರೈಂ ಪೊಲೀಸ್ ಠಾಣಾ ಮೊ.ಸಂ.02/2024ರ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆ ವಿಚಾರಣೆ ಪೂರ್ಣಗೊಂಡು ಪುಕರಣದ ಆರೋಪಿಯಾದ ಪ್ರಜ್ವಲ್ ರೇವಣ್ಯ, ತಂದ ಹೆಚ್.ಡಿ ರೇವಣ್ಯ, 33 ವರ್ಷ ರವರು ಮಾಡಿರುವ ಕೃತ್ಯ ಸಾಭೀತಾಗಿದ್ದರಿಂದ ಸದರಿ ಅಪರಾಧಿಗೆ ಅಜೀವ ಕಾರವಾಸ ಮತ್ತು ರೂ.11,60,000/- ದಂಡವನ್ನು ವಿಧಿಸಿ ದಂಡದ ಮೊತ್ತದಲ್ಲಿ ರೂ.11,25,000/-ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.
ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಿ, ಸದರಿ ಪುಸ್ತಾವನೆಯ ದಿನಾಂಕ: 24.07.2025 ರಲ್ಲಿ ಪ್ರಸ್ತುತ ದಾವಣಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣೆ ಗುನ್ನೆ ನಂ.229/2024 ಕಲಂ 305, 331(1), 331(4), 238, ಬಿಎನ್ಎಸ್ 2023 & ಕಲಂ 25(1)(ಎ) ಸಹಿತ 05 ಆರ್ಮ್ ಆಕ್ಟ್ 1959ರಲ್ಲಿ ಗುರುತರವಾದ ಬ್ಯಾಂಕ್ ಕನ್ನಕಳವು ಪ್ರಕರಣದಲ್ಲಿ ಕೃತ್ಯವೆಸಗಿದ ಆರೋಪಿಗಳನ್ನು ದಸ್ತಗಿರಿ ಮಾಡಿ ಹಾಗೂ ಕಳುವಾದ ಮಾಲನ್ನು ಪತ್ತೆ ಹಚ್ಚಲು ಶ್ರಮಿಸಿದ ಜಿಲ್ಲೆಯ ಈ ಕೆಳಕಂಡ ಒಟ್ಟು 83 ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ನಗದು ಬಹುಮಾನ ರೂ.10,02,500/- ಗಳನ್ನು ಮಂಜೂರು ಮಾಡಲು ಪೊಲೀಸ್ ಮಹಾ ನಿರೀಕ್ಷಕರು, ಪೂರ್ವ ವಲಯ, ದಾವಣಗೆರೆ ರವರು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಡಿಜಿ & ಐಜಿಪಿಯವರ ವಿತ್ತಾಧಿಕಾರವು ಮೀರಿರುವ ಹಿನ್ನಲೆಯಲ್ಲಿ ಸದರಿ ಪ್ರಕರಣವು ಒಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಶ್ಲಾಘನೀಯ ಕಾರ್ಯ ನಿರ್ವಹಿಸಿದ 83 ಅಧಿಕಾರಿ/ಸಿಬ್ಬಂದಿಗಳಿಗೆ ಒಟ್ಟು ರೂ.10,02,500/- ಗಳ ಬಹುಮಾನವನ್ನು ಮಂಜೂರು ಮಾಡುವಂತೆ ಕೋರಿರುತ್ತಾರೆ ಅದನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.









