Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ

09/03/2026 8:24 PM

ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು

09/03/2026 8:19 PM

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

09/03/2026 8:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು
KARNATAKA

ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು

By kannadanewsnow0909/03/2026 8:19 PM

ತುಮಕೂರು: ರಾಜ್ಯದಲ್ಲಿ ಒಳಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸರ್ಕಾರಕ್ಕೆ ಈಗ ಪ್ರಶಸ್ತಿ ವಾಪಸಾತಿಯ ಬಿಸಿ ತಟ್ಟಲಾರಂಭಿಸಿದೆ. ಒಳಮೀಸಲಾತಿ ಅನುಷ್ಠಾನಕ್ಕೆ ತರದಿದ್ದಲ್ಲಿ ತಮಗೆ ನೀಡಲಾದ *‘ಬಾಬು ಜಗಜೀವನ ರಾಮ್ ರಾಜ್ಯ ಪ್ರಶಸ್ತಿ’*ಯನ್ನು ಸರ್ಕಾರಕ್ಕೆ ಹಿಂತಿರುಗಿಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಡಿಎಸ್ಎಸ್) ತುಮಕೂರು ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?:

ಕುಂದೂರು ತಿಮ್ಮಯ್ಯ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2023ನೇ ಸಾಲಿನಲ್ಲಿ ಈ ಗೌರವವನ್ನು ನೀಡಿತ್ತು. ಆದರೆ, ಸರ್ಕಾರದ ಇತ್ತೀಚಿನ ಧೋರಣೆಯಿಂದ ಬೇಸತ್ತಿರುವ ಅವರು ತಮ್ಮ ಪತ್ರದಲ್ಲಿ ಈ ಕೆಳಗಿನ ಆಕ್ರೋಶಗಳನ್ನು ಹೊರಹಾಕಿದ್ದಾರೆ:

ಭರವಸೆ ಈಡೇರದ ನೋವು: “ಪ್ರಶಸ್ತಿ ನೀಡುವ ಸಂದರ್ಭದಲ್ಲಿ ತಾವು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವುದಾಗಿ ಮತ್ತು ಒಳಮೀಸಲಾತಿ ಜಾರಿಗೊಳಿಸುವುದಾಗಿ ನೀಡಿದ್ದ ಭರವಸೆ ಇಂದಿಗೂ ಕಿವಿಯಲ್ಲಿ ಮೊಳಗುತ್ತಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪು ಮತ್ತು ನಾಗಮೋಹನ್ ದಾಸ್ ಸಮಿತಿ ವರದಿ ಬಂದ ನಂತರವೂ ಸರ್ಕಾರ ಕಾಲಹರಣ ಮಾಡುತ್ತಿರುವುದು ಖಂಡನೀಯ” ಎಂದು ಅವರು ಹೇಳಿದ್ದಾರೆ.

ನೇಮಕಾತಿ ಪ್ರಕ್ರಿಯೆಗೆ ಆಕ್ಷೇಪ: ಹಳೆಯ ಮೀಸಲಾತಿ ನಿಯಮದಂತೆ 56,000 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿರುವುದು ಅಲೆಮಾರಿ ಮತ್ತು ಮಾದಿಗ ಸಮುದಾಯಕ್ಕೆ ಬಗೆದ ದ್ರೋಹ ಎಂದು ಅವರು ಕಿಡಿಕಾರಿದ್ದಾರೆ.

ಗಡುವು ನಿಗದಿ: “ವೈಜ್ಞಾನಿಕ ಅಂಕಿ-ಅಂಶಗಳ ಪ್ರಕಾರ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸದೆ ನೇಮಕಾತಿ ಮುಂದುವರಿಸಿದರೆ, ಈ ಪ್ರಶಸ್ತಿಯನ್ನು ಧರಿಸಿಕೊಂಡು ತಿರುಗಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಸಮುದಾಯದ ಹಿತವೇ ನನಗೆ ಮುಖ್ಯ” ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 12ರ ಹೋರಾಟದ ಎಚ್ಚರಿಕೆ:

ಇದೇ ಮಾರ್ಚ್ 12ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಯಲಿದ್ದು, ಅಂದೇ ಸಚಿವ ಸಂಪುಟ ಸಭೆಯೂ ನಿಗದಿಯಾಗಿದೆ. ಈ ಸಭೆಯಲ್ಲಿ ಒಳಮೀಸಲಾತಿ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಪ್ರಶಸ್ತಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಅವರು ಎಚ್ಚರಿಸಿದ್ದಾರೆ.

ಈ ಬಹಿರಂಗ ಪತ್ರವು ಈಗಿನ ಒಳಮೀಸಲಾತಿ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದ್ದು, ಸರ್ಕಾರದ ಮುಂದಿನ ನಡೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11 ರಿಂದ `OPD’ ಸೇವೆ ಬಂದ್: ರೋಗಿಗಳಿಗೆ ಸಂಕಷ್ಟದ ಭೀತಿ

ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11 ರಿಂದ `OPD’ ಸೇವೆ ಬಂದ್: ರೋಗಿಗಳಿಗೆ ಸಂಕಷ್ಟದ ಭೀತಿ

Share. Facebook Twitter LinkedIn WhatsApp Email

Related Posts

BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ

09/03/2026 8:24 PM2 Mins Read

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

09/03/2026 8:14 PM1 Min Read

BREAKING: ರಾಜ್ಯದಲ್ಲಿ ‘ಪ್ರಥಮ PUC’ಗೂ ಕನಿಷ್ಠ ಉತ್ತೀರ್ಣತಾ ಪ್ರಮಾಣ ನಿಗದಿ: ಶೇ.33ರಷ್ಟು ಅಂಕ ಬಂದ್ರೆ ಪಾಸ್

09/03/2026 8:10 PM2 Mins Read
Recent News

BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ

09/03/2026 8:24 PM

ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು

09/03/2026 8:19 PM

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

09/03/2026 8:14 PM

BREAKING: ರಾಜ್ಯದಲ್ಲಿ ‘ಪ್ರಥಮ PUC’ಗೂ ಕನಿಷ್ಠ ಉತ್ತೀರ್ಣತಾ ಪ್ರಮಾಣ ನಿಗದಿ: ಶೇ.33ರಷ್ಟು ಅಂಕ ಬಂದ್ರೆ ಪಾಸ್

09/03/2026 8:10 PM
State News
KARNATAKA

BIG NEWS: ಇನ್ಮುಂದೆ ಶೇ.33ರಷ್ಟು ಅಂಕ ಪಡೆದ್ರೆ ಪ್ರಥಮ ಪಿಯುಸಿ ಪಾಸ್: ಶಾಲಾ ಶಿಕ್ಷಣ ಇಲಾಖೆ ಆದೇಶ

By kannadanewsnow0909/03/2026 8:24 PM KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ದ್ವಿತೀಯ ಪಿಯುಸಿ ಉತ್ತೀರ್ಣಕ್ಕೆ ಶೇಕಡಾ ಪ್ರಮಾಣವನ್ನು ನಿಗದಿ ಪಡಿಸಲಾಗಿದೆ. ಇದೀಗ ಮುಂದುವರೆದು ಪ್ರಥಮ ಪಿಯುಸಿಗೂ…

ರಾಜ್ಯ ಸರ್ಕಾರಕ್ಕೂ ಶುರುವಾಯ್ತು ಪ್ರಶಸ್ತಿ ವಾಪ್ಸಿ ತಲೆ ನೋವು

09/03/2026 8:19 PM

BIG NEWS: ರಾಜ್ಯದಲ್ಲಿ ಟ್ರಾಕ್ಟರ್‌ ಗಳಲ್ಲಿ ಅಬ್ಬರಿಸುವ ‘ಡಿಜೆ ಸೌಂಡ್’ಗೆ ಬ್ರೇಕ್: ‘ಸಿಸ್ಟಂ ತೆರವಿ’ಗೆ ಸರ್ಕಾರ ಆದೇಶ

09/03/2026 8:14 PM

BREAKING: ರಾಜ್ಯದಲ್ಲಿ ‘ಪ್ರಥಮ PUC’ಗೂ ಕನಿಷ್ಠ ಉತ್ತೀರ್ಣತಾ ಪ್ರಮಾಣ ನಿಗದಿ: ಶೇ.33ರಷ್ಟು ಅಂಕ ಬಂದ್ರೆ ಪಾಸ್

09/03/2026 8:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.