ಮಂಡ್ಯ : ನಾಡಿನ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಬೇಕೆ ವಿನಃ ಅನಗತ್ಯವಾಗಿ ತಮ್ಮ ಸಮುದಾಯದ ವ್ಯಕ್ತಿಗಳನ್ನು ಓಲೈಕೆ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಗುರುವಾರ ಹೇಳಿದರು.
ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಇತ್ತಿಚೆಗೆ ಕೆಲವು ಮಠಾಧೀಶರು ತಮ್ಮ ತಮ್ಮ ಸಮುದಾಯದ ವ್ಯಕ್ತಿಗಳಿಗಾಗಿ ರಾಜಕಾರಣದಲ್ಲಿ ಓಲೈಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಈ ದೇಶದ ಸಂವಿಧಾನ ಪ್ರಕಾರ ರಾಷ್ಟ್ರಪತಿಗಳಿಗೂ ಒಂದೇ ಕಾನೂನು ಜನಸಾಮಾನ್ಯರಿಗೆ ಒಂದೇ ಕಾನೂನು ಹೀಗಾಗಿ ಮಠಾಧೀಶರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆ ವಿನಃ ರಾಜಕಾರಣದಲ್ಲಿ ತಮ್ಮ ಸಾಮರ್ಥ್ಯ ತೋರಿಸಬಾರದು.
ತಮ್ಮ ಸಮುದಾಯದ ವ್ಯಕ್ತಿಗಳ ಪರ ಓಲೈಕೆ ರಾಜಕಾರಣ ಹಾಗೂ ದ್ವೇಷ, ಅಸೂಯೆಯನ್ನು ಬದಿಗೊತ್ತಿ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕೆಂದರು.
ಇನ್ನು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯ ಸರ್ಕಾರ ಒಂದು ಕೈಲಿ ಉಚಿತವಾಗಿ ಕೊಟ್ಟು ಮತ್ತೋಂದು ಕಡೆಯಿಂದ ಜನರ ಬಳಿ ಸರ್ಕಾರ ಸುಲಿಗೆ ಮಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡಿ ಅಬಕಾರಿ, ಬಸ್ ಟಿಕೇಟ್, ನೋಂದಣಿ ಶುಲ್ಕ, ಆರ್ಟಿಓ ಶುಲ್ಕ, ನೀರಿನ ತೆರಿಗೆ, ಹಾಲಿನ ದರ ಹೆಚ್ಚಳ, ವಿದ್ಯುತ್ ಬಿಲ್ ಸೇರಿದಂತೆ ಹಲವಾರು ದರ ಏರಿಕೆ ಮಾಡಿ ಗ್ಯಾರಂಟಿ ಯೋಜನೆಯಿಂದ ಜನ ಸಾಮಾನ್ಯರ ಬದುಕಲ್ಲಿ ಬದಲಾವಣೆಯಾಗಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
ಆದರೆ, ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56 ಸಾವಿರ ಕೋಟಿ ಖರ್ಚಾಗುತ್ತಿದ್ದು, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವಿಲ್ಲ ಎಂದು ಸರ್ಕಾರದ ಕೆಲ ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ ಇದೇ ರೀತಿ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಿದರೆ ಮುಂದೊಂದು ದಿನ ಆರ್ಥಿಕ ಪರಿಸ್ಥಿತಿ ಎದುರಾಗಲಿದೆ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತೀವ್ರವಾಗಿ ವಿರೋಧಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮಂಗಳೂರಿನಲ್ಲಿ ‘ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟನೆ
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!