ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಏರ್ ಶೋ ನಡೆಸಲು ಕೇಂದ್ರ ರಕ್ಷಣಾ ಇಲಾಖೆ ಅನುಮತಿ ನೀಡಿತ್ತು. ಈ ಬೆನ್ನಲ್ಲೇ ಯಾವ ದಿನದಂದು ಮೈಸೂರ ದಸರಾ ಸಂದರ್ಭದಲ್ಲಿ ಏರ್ ಶೋ ನಡೆಯಲಿದೆ ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಉದ್ಘಾಟಕರ ಆಯ್ಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿಯಲ್ಲಿ ನನಗೆ ಅಧಿಕಾರ ನೀಡಲಾಗಿತ್ತು. ನಾನು ಬುಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡಬೇಕೆಂದು ತೀರ್ಮಾನಿಸಲಾಯಿತು. ಹಿಂದೆಯೂ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದ್ದಾರೆ ಎಂದರು.
ದಸರಾ ನಾಡ ಹಬ್ಬ, ಸಾಂಸ್ಕೃತಿಕ ಆಚರಣೆಯಾಗಿದೆ. ನಾಡ ಹಬ್ಬವನ್ನು ಇಂಥ ಧರ್ಮದವರೇ ಉದ್ಘಾಟಿಸಬೇಕೆಂದು ಇಲ್ಲ. ನಾಡ ಹಬ್ಬ ಎಲ್ಲರಿಗೂ ಹಬ್ಬವೇ. ಹಿಂದೂ, ಕ್ರಿಶ್ಚಿಯನ್, ಬೌದ್ಧ, ಜೈನರಿಗೆ ಹಬ್ಬ. ಮಹಾರಾಜರ ಆಡಳಿತ ಇಲ್ಲದಿರುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸುತ್ತಿದ್ದರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ದಸರಾ ಆಚರಿಸಿದ್ದಾರೆ. ಇದೊಂದು ಧರ್ಮಾತೀತ, ಜಾತ್ಯಾತೀತ ಹಬ್ಬ. ಕರ್ನಾಟಕದಲ್ಲಿ ಬುಕರ್ ಪ್ರಶಸ್ತಿ ಪಡೆದ ಸಾಹಿತಿಗಳು ಬಹಳ ಕಡಿಮೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವ ಬಗ್ಗೆ ಧರ್ಮ ಧರ್ಮಾಂಧರು ಮಾತ್ರ ಮಾತನಾಡುತ್ತಾರೆ. ಅವರಿಗೆ ಇತಿಹಾಸ ತಿಳಿದಿಲ್ಲ, ಇತಿಹಾಸವನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂಬುದಾಗಿ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಏರ್ ಶೋ ಯಾವಾಗ ನಡೆಯಲಿದೆ ಎಂಬುದಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದಂತ ಅವರು, ದಸರಾ ಏರ್ ಶೋ ವಿಜಯದಶಮಿ ದಿನವೇ ನಡೆಯಲಿದೆ ಎಂದರು.
ಮೈಸೂರು ದಸರಾ ಧರ್ಮಾತೀತ, ಜಾತ್ಯಾತೀತ ಹಬ್ಬ: ಬಾನು ಮುಷ್ತಾಕ್ ಅವರೇ ಉದ್ಘಾಟನೆ- ಸಿಎಂ ಸಿದ್ಧರಾಮಯ್ಯ
ಧರ್ಮ, ಪೂಜೆ ಹಾಗೂ ಭಕ್ತಿ ಪ್ರದರ್ಶನಕ್ಕೆ ಇರುವುದಲ್ಲ, ಆತ್ಮವಿಶ್ವಾಸಕ್ಕೆ ಹುಟ್ಟಿದ ದಾರಿಗಳು: ಡಿಕೆಶಿ