Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ನಿಧನಕ್ಕೆ ‘ಪ್ರಧಾನಿ ಮೋದಿ’ ಸಂತಾಪ, ಕುಟುಂಬಸ್ಥರ ಭೇಟಿ

13/06/2025 3:16 PM

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

13/06/2025 3:15 PM

BREAKING : ಏರ್ ಇಂಡಿಯಾ ವಿಮಾನ ದುರಂತ ; ಸಂತ್ರಸ್ತರಿಗೆ ‘ಕ್ಲೈಮ್ ಇತ್ಯರ್ಥ’ದಲ್ಲಿ ಸಡಿಲಿಕೆ ಘೋಷಿಸಿದ ‘LIC’

13/06/2025 3:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ವೇಳಾಪಟ್ಟಿ ಪ್ರಕಟ
Uncategorized

ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ವೇಳಾಪಟ್ಟಿ ಪ್ರಕಟ

By kannadanewsnow0723/10/2024 8:31 AM

ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೂ ಉಪಚುನಾವಣೆ ಪ್ರಕಟಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ನವೆಂಬರ್ 4 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 11 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ನವೆಂಬರ್ 12 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನವೆಂಬರ್ 14 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನವೆಂಬರ್ 23 ರಂದು ಮತದಾನ ನಡೆಯಲಿದ್ದು, ಅಗತ್ಯ ವೆನಿಸಿದರೆ ನವೆಂಬರ್ 25ರಂದು ಮರು ಮತದಾನ ನಡೆಯಲಿದೆ. ನವೆಂಬರ್ 26ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ನವೆಂಬರ್ 4 ರಿಂದ 26 ರವರೆಗೆ ಜಾರಿಯಲ್ಲಿರುತ್ತದೆ.

ಅರ್ಹ ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಯಾವೊಬ್ಬ ಅಭ್ಯರ್ಥಿಯ ಪರವಾಗಿ ತನ್ನ ಮತವನ್ನು ಚಲಾಯಿಸಲು ಇಚ್ಛಿಸದಿರುವ ಸಂದರ್ಭದಲ್ಲಿ ಆತನು “None of the above (NOTA)”(ಮೇಲಿನ ಯಾರೊಬ್ಬರಿಗೂ ಇಲ್ಲ) ಎಂದು ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಭಾವಚಿತ್ರವಿರುವ ಮತಪತ್ರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದೇ ವಾರ್ಡಿನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವುದರಿಂದ, ಅಭ್ಯರ್ಥಿಗಳನ್ನು ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ಅವರ ವೃತ್ತಿ ಅಥವಾ ವಿಳಾಸ ಇತ್ಯಾದಿಗಳನ್ನು ತೋರಿಸಲಾಗುತ್ತದೆ. ಆದರೂ ಸಹ ಮತದಾರನಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗಿದೆ.

ಘೋಷಣಾ ಪತ್ರ / ಪ್ರಮಾಣ ಪತ್ರ: ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು, ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ, ತನ್ನ ಹಿನ್ನೆಲೆ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳು, ತನ್ನ ಸ್ವ-ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪರಿಷ್ಕøತ ನಮೂನೆಯಲ್ಲಿ ಘೋಷಣಾ ಪತ್ರ / ಪ್ರಮಾಣ ಪತ್ರ ಸಲ್ಲಿಸಬೇಕಾಗಿರುತ್ತದೆ.

ದಿನಾಂಕ: 19/11/2024 ರ ಎರಡನೇ ಶನಿವಾರವು ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ ಆಕ್ಟ್ ಅಡಿ ಸಾರ್ವತ್ರಿಕ ರಜಾದಿನವೆಂದು ಘೋಷಿಸಲ್ಪಟ್ಟಿದ್ದು, ಸದರಿ ದಿನದಂದು ಯಾವುದೇ ನಾಮಪತ್ರವನ್ನು ಸ್ವೀಕರಿಸುವಂತಿಲ್ಲ. ಚುನಾವಣಾ ಅಧಿಸೂಚನೆ: ಜಿಲ್ಲಾಧಿಕಾರಿಗಳು, ಆಯೋಗವು ಆದೇಶಿಸಿದ ಚುನಾವಣಾ ವೇಳಾಪಟ್ಟಿಯನ್ನು ಅನುಸರಿಸಿ, ಚುನಾವಣಾ ಅಧಿಸೂಚನೆಯನ್ನು ಹೊರಡಿಸುವರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳ ಉಪ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡುವಂತೆ ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

The schedule for by-elections to the seats lying vacant due to various reasons in urban local bodies has been announced.
Share. Facebook Twitter LinkedIn WhatsApp Email

Related Posts

ಶೀಘ್ರದಲ್ಲೇ ನೇರ ವಿಮಾನ ಹಾರಾಟ ಪುನರಾರಂಭಿಸಲು ಭಾರತ-ಚೀನಾ ಒಪ್ಪಿಗೆ

13/06/2025 1:10 PM1 Min Read

BREAKING : ಮಂಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಘೋರ ದುರಂತ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು | WATCH VIDEO

30/05/2025 11:53 AM1 Min Read

Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ಪಟ್ಟಿ..!

27/05/2025 7:00 PM2 Mins Read
Recent News

ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ನಿಧನಕ್ಕೆ ‘ಪ್ರಧಾನಿ ಮೋದಿ’ ಸಂತಾಪ, ಕುಟುಂಬಸ್ಥರ ಭೇಟಿ

13/06/2025 3:16 PM

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

13/06/2025 3:15 PM

BREAKING : ಏರ್ ಇಂಡಿಯಾ ವಿಮಾನ ದುರಂತ ; ಸಂತ್ರಸ್ತರಿಗೆ ‘ಕ್ಲೈಮ್ ಇತ್ಯರ್ಥ’ದಲ್ಲಿ ಸಡಿಲಿಕೆ ಘೋಷಿಸಿದ ‘LIC’

13/06/2025 3:06 PM

ಅಹ್ಮದಾಬಾದ್ ವಿಮಾನ ಪತನ : ತಕ್ಷಣ ವಿಮಾನಯಾನ ಸಚಿವರು ರಾಜೀನಾಮೆ ಕೊಡಲಿ : ಈಶ್ವರ್ ಖಂಡ್ರೆ ಆಗ್ರಹ

13/06/2025 3:05 PM
State News
KARNATAKA

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

By kannadanewsnow0913/06/2025 3:15 PM KARNATAKA 2 Mins Read

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟರ್ಸ್ ಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ…

ಅಹ್ಮದಾಬಾದ್ ವಿಮಾನ ಪತನ : ತಕ್ಷಣ ವಿಮಾನಯಾನ ಸಚಿವರು ರಾಜೀನಾಮೆ ಕೊಡಲಿ : ಈಶ್ವರ್ ಖಂಡ್ರೆ ಆಗ್ರಹ

13/06/2025 3:05 PM

ಜೈನ ಬಸದಿಗಳ ಅರ್ಚಕರಿಗೆ ಗುಡ್ ನ್ಯೂಸ್: ಮಾಸಿಕ ಗೌರವಧನಕ್ಕೆ ಅರ್ಜಿ ಆಹ್ವಾನ

13/06/2025 2:53 PM

BREAKING : ಬೆಂಗಳೂರಿನ ಹೋಟೆಲ್ ನಲ್ಲಿ ‘ಖೋಟಾ ನೋಟ್’ ಪ್ರಿಂಟ್ ಮಾಡ್ತಿದ್ದ ಯುವಕ ಅರೆಸ್ಟ್

13/06/2025 2:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.