ಬೆಂಗಳೂರು: ನಗರದ ಪೂರ್ವ ವಿಭಾಗದ ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಶ್ರೀ ಮುತ್ಯಾಲಮ್ಮ ದೇವಾಲಯದ ರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವದ ಪ್ರಯುಕ್ತ ಮೇ.22ರ ಬೆಳಿಗ್ಗೆ 6ರಿಂದ ಮೇ.23ರ ಸಂಜೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದು, ಪ್ರಸ್ತಾವನೆಯಲ್ಲಿ ದಿನಾಂಕ: 21-05-2024 ರಿಂದ 23-05-2024 ರವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪೂರ್ವ ವಿಭಾಗದ ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯಲಿರುವ ಶ್ರೀ ಮುತ್ಯಾಲಯಮ್ಮ ದೇವಿಯರ ಜಾತ್ರ ಮಹೋತ್ಸವ ಪ್ರಯುಕ್ತ ದಿನಾಂಕ: 21-05- 2024 ರಂದು ದೀಪೋತ್ಸವ, ದಿನಾಂಕ: 22-05-2024 ರ ಹಗಲಿನಲ್ಲಿ ರಥೋತ್ಸವ ಹಾಗೂ ರಾತ್ರಿಯಲ್ಲಿ ಹೂವಿನ ಪಲ್ಲಕ್ಕಿ ನಡೆಯಲಿವೆ ಎಂದಿದ್ದಾರೆ.
ಈ ಉತ್ಸವದಲ್ಲಿ ಸುಮಾರು 60 ರಿಂದ 65 ವಿವಿಧ ದೇವರುಗಳ ಪಲ್ಲಕ್ಕಿಗಳು ಮತ್ತು ಲಕ್ಷಾಂತರ ಜನರು ಭಾಗವಹಿಸಲಿದ್ದು, ದೇವರುಗಳ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವಗಳು ನಡೆಯುವ ಸಮಯದಲ್ಲಿ ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನುಬಾಹಿರ ಕೃತಗಳನ್ನೆಸಗಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗವನ್ನುಂಟುಮಾಡುವ ಸಂಭವವಿರುವುದಾಗಿ ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ದಿನಾಂಕ: 21-05-2024 ರಂದು ಬೆಳಿಗ್ಗೆ 6-00 ಗಂಟೆಯಿಂದ ದಿನಾಂಕ: 23-05-2024 ರಂದು ಸಂಜೆ 6-00 ಗಂಟೆಯವರೆಗೆ ಪೂರ್ವ ವಿಭಾಗದ ಪುಲಕೇಶಿ ನಗರ, ಭಾರತೀನಗರ, ಶಿವಾಜಿನಗರ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬರುವ (ಸ್ಟಾರ್ ಹೋಟೆಲ್ ಮತ್ತು ಕ್ಲಬ್‌ಗಳನ್ನು ಹೊರತುಪಡಿಸಿ ಎಲ್ಲಾ ಮದ್ಯದಂಗಡಿ, ಬಾರ್ & ರೆಸ್ಟೋರೆಂಟ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವಂತೆ ಉಪ ಪೊಲೀಸ್ ಆಯುಕ್ತರು, ಪೂರ್ವ ವಿಭಾಗ ರವರು ಉಲ್ಲೇಖಿತ ಪತ್ರದಲ್ಲಿ ಕೋರಿರುತ್ತಾರೆ ಎಂದು ತಿಳಿಸಿದ್ದಾರೆ.
ಮೇಲ್ಕಂಡ ವಿಷಯದ ಬಗ್ಗೆ ನಾನು ಸ್ವತಃ ಪರಿಶೀಲಿಸಲಾಗಿ ಹಾಗೂ ಗುಪ್ತವಾರ್ತಾ ಮಾಹಿತಿಯಿಂದ ಸಾಕಷ್ಟು ಸತ್ಯಾಂಶವಿದೆಯೆಂದು ತಿಳಿದುಬಂದಿರುವುದರಿಂದ ಪಲ್ಲಕ್ಕಿಗಳ ಉತ್ಸವದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವುಂಟಾಗದಂತೆ ಹಾಗೂ ಅಹಿತಕರ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದ ಪೂರ್ವ ವಿಭಾಗದ ಪುಲಕೇಶಿ ನಗರ, ಭಾರತೀನಗರ, ಶಿವಾಜಿನಗರ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟವನ್ನು ನಿಷೇದಿಸುವುದು ಸೂಕ್ತವೆಂದು ಮನಗಂಡಿರುತ್ತೇನೆ ಎಂದಿದ್ದಾರೆ.
ಈ ದಿಸೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರತೀಯ ದಂಡ ಪ್ರಕ್ರಿಯ ಸಂಹಿತೆಯ ಕಲಂ 144 ರ ಉಪ ಕಲಂ (1) ಮತ್ತು (3) ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಿ.ದಯಾನಂದ, ಭಾ.ಪೊ.ಸೇ. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ ನಾನು ದಿ: 21-05-2024 ರಂದು ಬೆಳಿಗ್ಗೆ 6-00 ಗಂಟೆಯಿಂದ ದಿನಾಂಕ: 23-05-2024 ರಂದು ಸಂಜೆ 6-00 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪೂರ್ವ ವಿಭಾಗದ ಪುಲಕೇಶಿ ನಗರ, ಭಾರತೀನಗರ, ಶಿವಾಜಿನಗರ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಎಲ್ಲಾ ರೀತಿಯ ಬಾರ್‌ಗಳು, ವೈನ್‌ಶಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು (CL-4 & CL-6A ಪರವಾನಗಿಗಳನ್ನು ಹೊರತುಪಡಿಸಿ) ಮುಚ್ಚಲು ಹಾಗೂ ಮಾರಾಟವನ್ನು ಮಾಡದಿರಲು ನಿಷೇಧಾಜ್ಞೆಯನ್ನು ವಿಧಿಸಿರುತ್ತೇನೆ ಎಂದಿದ್ದಾರೆ.
ನೈರುತ್ಯ ಶಿಕ್ಷಕರ, ಪದವೀಧರರ ಕ್ಷೇತ್ರದ ಚುನಾವಣೆಗೆ ವೀಕ್ಷಕರಾಗಿ ‘IAS ಅಧಿಕಾರಿ’ಗಳ ನೇಮಕ
BREAKING: ರಾಜ್ಯ ಸರ್ಕಾರದಿಂದ ‘ಅಭಿವೃದ್ಧಿ ಕಾಮಗಾರಿ’ಗಳಿಗೆ ‘ಮಾದರಿ ನೀತಿ ಸಂಹಿತೆ’ಯಿಂದ ವಿನಾಯ್ತಿ ನೀಡಿ ಆದೇಶ