ಶಿವಮೊಗ್ಗ : ಮುಂದಿನ ದಿನಗಳಲ್ಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯನ್ನು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನ ಎಂದು ಕರೆಯಲಾಗುತ್ತಿದ್ದು, ಸದಸ್ಯರು ನಮ್ಮ ಮೇಲೆ ವಿಶ್ವಾಸ ಇರಿಸಿ ನೀಡಿದ ಅಧಿಕಾರಕ್ಕೆ ತಕ್ಕಂತೆ ದೇವಸ್ಥಾನದ ಅಭಿವೃದ್ದಿ ಮತ್ತು ಲೋಪದೋಷದಿಂದ ಕೂಡಿದ ಲೆಕ್ಕಪತ್ರವನ್ನು ಸರಿಪಡಿಸಿ ಅವ್ಯವಸ್ಥೆಯನ್ನು ಸರಿದಾರಿಗೆ ತರಲಾಗಿದೆ. ನಮ್ಮ ಸಮಿತಿಯು ಇದರ ವಿರುದ್ದ ಕಾನೂನು ಹೋರಾಟ ನಡೆಸಿ ದೇವಸ್ಥಾನವನ್ನು ಸಾರ್ವಜನಿಕರ ಕೈನಲ್ಲಿಯೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಬಿ. ಗಿರಿಧರ ರಾವ್ ಎಂದು ಹೇಳಿದರು.
ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2014ರ ಸರ್ವಸದಸ್ಯರ ಸಭೆಯಲ್ಲಿ ನಮಗೆ ಅಧಿಕಾರ ನೀಡಲಾಯಿತು. ಅಧಿಕಾರ ನೀಡುವ ಜೊತೆಗೆ ಲೆಕ್ಕಪತ್ರ ಸರಿಪಡಿಸುವ, ದೇವಸ್ಥಾನವನ್ನು ಕಾನೂನು ಚೌಕಟ್ಟಿನಲ್ಲಿ ತರಲು ಟ್ರಸ್ಟ್ ರಚಿಸುವ ಸೇರಿ ಹಲವು ಹೊಣೆಯನ್ನು ನೀಡಲಾಗಿತ್ತು. ಇದೀಗ ಟ್ರಸ್ಟ್ ರಚನೆಗೆ ನ್ಯಾಯಾಲಯ ಆದೇಶ ನೀಡಿದೆ ಎಂದರು.
2007 ರಿಂದ 2003 ರವರೆಗೆ ಆಡಳಿತ ನಡೆಸಿದ ಸಮಿತಿ ಲೆಕ್ಕಪತ್ರ ನೀಡದೆ ದೇವಸ್ಥಾನ ವ್ಯವಸ್ಥೆಯನ್ನೆ ಹಾಳು ಮಾಡಿತ್ತು. ನಾವು ಬಂದ ಮೇಲೆ ಲೆಕ್ಕಪತ್ರ ಸರಿಪಡಿಸಿ ದೇವಸ್ಥಾನವನ್ನು ಸಂಪೂರ್ಣ ಅಭಿವೃದ್ದಿ ಮಾಡಿದ್ದೇವೆ. ದೇವಸ್ಥಾನದ ಆದಾಯ ಮೂಲವನ್ನು ಹೆಚ್ಚಿಸಿದ್ದೇವೆ. ಕಾಲ¯ಕಾಲಕ್ಕೆ ಸರ್ವಸದಸ್ಯರ ಸಭೆ ಕರೆದು ಸದಸ್ಯರಿಗೆ ಲೆಕ್ಕಪತ್ರ ಸೇರಿದಂತೆ ದೇವಸ್ಥಾನದ ಸ್ಥಿತಿಗತಿ ತಿಳಿಸುವ ಪ್ರಯತ್ನ ನಡೆಸಿದ್ದೇವೆ. 2006ರಲ್ಲಿ ದೇವಸ್ಥಾನವನ್ನು ಮುಜರಾಯಿಗೆ ತೆಗೆದುಕೊಳ್ಳಲು ಅಂತಿಮ ಸಿದ್ದತೆ ನಡೆದಿತ್ತು ಎಂದರು.
ಹಿಂದಿನ ಸಮಿತಿಯಲ್ಲಿದ್ದು ದೇವಸ್ಥಾನದ ಅಧಿಕಾರ ಅನುಭವಿಸಿದವರು ಮುಜರಾಯಿಗೆ ಹೋಗುತ್ತಿದ್ದಾಗ್ಯೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಮತ್ತೊಮ್ಮೆ ಅಧಿಕಾರ ಅನುಭವಿಸಲು ಸಿದ್ದರಾಗುತ್ತಿದ್ದಾರೆ. ಟ್ರಸ್ಟ್ ಮಾಡಲು ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದವರಿಗೆ ಈಗ ಮುಖಭಂಗವಾಗಿದೆ. ನ್ಯಾಯಾಲಯ ಟ್ರಸ್ಟ್ ರಚಿಸಲು, ಚುನಾವಣೆ ಮೂಲಕ ನೂತನ ಆಡಳಿತ ಮಂಡಳಿ ರಚಿಸಲು ಅನುಮತಿ ನೀಡಿದೆ. ಸಮಿತಿ ವಿರುದ್ದ ಅನಗತ್ಯವಾಗಿ ಕೆಲವರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅವರ ವಿರುದ್ದ ಕಾನೂನು ಹೋರಾಟ ನಡೆಸಲಾಗುತ್ತದೆ. ಜಿಲ್ಲಾ ನ್ಯಾಯಾಲಯ ಚುನಾವಣೆ ನಡೆಸಿ ಮೂರು ತಿಂಗಳಿನೊಳಗೆ ವರದಿ ನೀಡಲು ತಿಳಿಸಿದ್ದು ಅದನ್ನು ಪಾಲಿಸಲಾಗುತ್ತದೆ ಎಂದು ಹೇಳಿದರು.
ಟ್ರಸ್ಟ್ ಖಜಾಂಚಿ ನಾಗೇಂದ್ರ ಕುಮಟಾ ಮಾತನಾಡಿ, ದೇವಸ್ಥಾನದ ಜಾಗದ ದಾಖಲೆ ಸರಿಪಡಿಸಿದೆ. ರುದ್ರಭೂಮಿ ನವೀಕರಣ, ರಥಧ ಮನೆ ನಿರ್ಮಾಣ, ಮುಕ್ತಿವಾಹಿನಿ ಶೆಡ್ ನಿರ್ಮಾಣ, ರುದ್ರಭೂಮಿಗೆ ಕಟ್ಟಿಗೆ ಒಡೆಯುವ ಮಿಷನ್, ದೇವಸ್ಥಾನದ ಲೆಕ್ಕಪತ್ರ ಸಮರ್ಪಕ ನಿರ್ವಹಣೆ, ಜಾತ್ರೆ ಸಂದರ್ಭದಲ್ಲಿ ಆದಾಯ ಹೆಚ್ಚಿಸಿದ್ದು, ಗಂಡನ ಮನೆ ದೇವಸ್ಥಾನಕ್ಕೆ ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಮುಖಮಂಟಪ, ತವರುಮನೆ ದೇವಸ್ಥಾನಕ್ಕೆ ಬೆಳ್ಳಿ ಪ್ರಭಾವಳಿ, ಬೆಳ್ಳಿ ದ್ವಾರ ನಿರ್ಮಿಸಲಾಗಿದೆ. ಅತಿವೃಷ್ಟಿ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು, ಕೊರೋನಾ ಸಂದರ್ಭದಲ್ಲಿ ಆಹಾರ ವ್ಯವಸ್ಥೆ, ನವರಾತ್ರಿ ಉತ್ಸವಕ್ಕೆ ಮೆರಗು ನೀಡಿದ್ದು, ಸರ್ಕಾರಿ ಆಸ್ಪತ್ರೆಯ ಬಡರೋಗಿಗಳ ಅನುಕೂಲಕ್ಕೆ ಡಯಾಲಿಸಿಸ್ ಯಂತ್ರ ನೀಡಿದ್ದು ಸೇರಿ ಅನೇಕ ಚಟುವಟಿಕೆ ಕೈಗೊಂಡಿದ್ದೇವೆ. ದೇವಸ್ಥಾನದ ಆಸ್ತಿಯ ಇಂದಿನ ಮೌಲ್ಯ ಸುಮಾರು ೪೫ ಕೋಟಿ ರೂ.ಗೂ ಹೆಚ್ಚಿದೆ. ಎಲ್ಲರ ಸಹಕಾರದಿಂದ ನಾವು ದೇವಸ್ಥಾನವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗಿದ್ದೇವೆ ಎಂದು ತಿಳಿಸಿದರು.
ಈ ಸುದ್ದಿ ಗೋಷ್ಟಿಯಲ್ಲಿ ಟ್ರಸ್ಟ್ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಮುಖರಾದ ಸುಂದರ ಸಿಂಗ್, ಚಂದ್ರು, ಬಸವರಾಜ್, ಜಯರಾಮ್, ತಾರಾಮೂರ್ತಿ, ಗಂಗಾಧರ ಜಂಬಿಗೆ, ನಾರಾಯಣ, ವಿರೇಶ್, ಮೋಹಿನಿ, ನಾಗರಾಜ್, ಗಣೇಶ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
BIG NEWS: ಸಾಗರ ತಾಲ್ಲೂಕಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಬಂಪರ್ ಗಿಫ್ಟ್: 50 ಕೋಟಿ ಅನುದಾನ ಮಂಜೂರು