ಮಂಡ್ಯ : ಮದ್ದೂರು ತಾಲೂಕಿನ ಆತಗೂರು ಹೋಬಳಿಯ ದೊಡ್ಡ ಅಂಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ( ನವೆಂಬರ್ 7 ರಿಂದ 10 ವರೆಗೆ ) ದಿಂದ ಹುಚ್ಚಮ್ಮ ದೇವಿ ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ ಮತ್ತು ಕುಂಭಾಭಿಷೇಕ ಹಾಗೂ ಜಾತ್ರ ಮಹೋತ್ಸವ ಅದ್ದೂರಿಯಾಗಿ ನೆರವೇರಲಿದೆ.
ನವಂಬರ್ 07 ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಅಮ್ಮನವರ ಬಾಲಾಲಯದ ಸನ್ನಿಧಾನದಲ್ಲಿ ಶ್ರೀ ಮಹಾ ಗಣಪತಿಪೂಜೆ, ಶುದ್ದಿಪುಣ್ಯಾಹ, ಪಂಚಗವ್ಯಸಾಧನೇ, ತೀರ್ಥಪ್ರೋಕ್ಷಣೆ ಮೂಲಕ ಯಾಗಾಶಾಲಾ ಪೂರ್ವಸಿದ್ಧತೆ ಮಾಡುವುದು.
ನ.8 ರಂದು ಬೆಳಿಗ್ಗೆ 7.50 ಕ್ಕೆ ಅನುಜ್ಞೆ, ಸುವಾಸಿನಿ, ಸವತ್ತಧೇನು ಸಮೇತ, ಅಕ್ರೋಧಕ ತೀರ್ಥಸಂಗ್ರಹ, ಪ್ರವೇಶಬಲಿ, ಯಾಗಾಶಾಲಾಪ್ರವೇಶ, ಶ್ರೀ ಮಹಾಗಣಪತಿ ಪೂಜೆ, ಶುಬ್ಧ ಪುಣ್ಯಾಹ, ಪಂಚಗವ್ಯ, ತೀರ್ಥಪ್ರೋಕ್ಷಣೆ, ಆಲಯಶುದ್ದಿ, ದೇವನಾಂಬ, ಪ್ರತಿಮಾಸ್ವೀಕಾರ, ಮೃತ್ಸಂಗ್ರಹಣ, ಅಂಕುರಾರ್ಪಣೆ, ರಕ್ಷಾಬಂಧನ, ಗುತ್ತಿಗ್ಧರಣ, ಜಲಾಧಿವಾಸ, ವಾಸ್ತುರಾಷ್ಟ್ರೀಘ್ರಪೂಜೆ, ಕಳಸಾಭಿವಾಸ, ಪ್ರತಿಮಾಶೋಧನೆ, ದಶದಿಕ್ಷಾಲಕ ಕಳಸಾರಾಧನೆ, ಮೃತ್ಯಂಜಯಸಮೇತ, ನವಗ್ರಹರಾಧನೆ, ಧಾನ್ಯಾಧಿವಾಸ, ಸಿದ್ಧಿವಲ್ಲಭಸಮೇತ, ಗಣಪತಿಪೂಜೆ, ವಲ್ಲದೇವಸೇನಾಸಮೇತ, ಶ್ರೀ ಸುಬ್ಬಮಣ್ಯಸ್ವಾಮಿ, ಕಳಶಾರಾಧನೆ, ಗಣಹೋಮ, ವಾಸ್ತುರಾಕ್ಷೆಘ್ನಹೋಮ, ಪರ್ಯಗ್ನಿಕರಣ, ಶೆಯ್ಯಾಭಿವಾಸ, ಮಹಾ ಮ0ಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ.
ನ. 09 ರಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತ 5 ರಿಂದ 6 ವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಪೀಠಪೂಜೆ, ಯಂತ್ರನ್ಯಾಸ, ರತ್ನನ್ಯಾಸ, ನೂತನ ಐಗ್ರಹ ಪ್ರತಿಷ್ಠೆ. ಅಷ್ಠಬ0ಧ, ಮಂತ್ರನ್ಯಾಸ, ಪ್ರಾಣಪ್ರತಿಷ್ಠೆ, ಪ್ರಧಾನಹೋಮ, ಮಹಾಹವೀರ್ ನೈವೇದ್ಯ, ಮಹಾ ಪೂರ್ಣಾಹುತಿ ಕಳಸೋದ್ವಾಸನ, ಯಾತ್ರಾದಾನೋತ್ಸವ, ದುರ್ಗಾಭಿಷೇಕ, ಕುಂಭಾಭಿಷೇಕ, ಅಲಂಕಾರ ಮಹಾನೈವೇದ್ಯ, ನೇತ್ರೋನ್ನಿಲನ, ನಿರೀಕ್ಷಣೆ, ಕುಶ್ಮಾಂಡ ಕದಳಿ ಛೇದನ, ಅಷ್ಟಾವಧಾನಸೇವೆ, ರಾಜೋಪಚಾರ, ಮಧ್ಯಾಹ್ನ 12 ರಿಂದ 12.25 ರೊಳಗೆ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ಮಹಾಮಂಗಳಾರತಿ, ರಾಷ್ಟ್ರಾಶೀವರ್ದ, ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಮತ್ತು ರಾತ್ರಿ 10 ಗಂಟೆಗೆ ಹೂ ಹೊಂಬಾಳಿ ಸಮೇತ ಶಿಂಷಾ ಹೊಳೆಯಿ0ದ ಅಮ್ಮನನ್ನು ಕರೆತತರಲಾಗುವುದು.
ನ.10 ರಂದು ಪಾತಃಕಾಲಪೂಜೆ ನಂತರ ಬೆಳಗ್ಗೆ 12 ಘಂಟೆಗೆ ಸಹಸ್ರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ಶ್ರೀ ಹುಚ್ಚಮ್ಮದೇವಿ ದೇಸ್ಥಾನ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಯಜಮಾನರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಕ್ಷೇತ್ರ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ತುಮಕೂರು ಸಿದ್ದಗಂಗಾ ಮಠದ ಶ್ರೀ ಶ್ರೀಸಿದ್ದಲಿಂಗಸ್ವಾಮಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ನಿಶ್ಚಲಾನಂದ ಸ್ವಾಮಿಜಿ, ಸ್ಪಟಿಕಪುರಿ ಮಹಾ ಸಂಸ್ಥಾನ ಶ್ರೀ ಗುರುಗುಂಡ ಬ್ರಹ್ಮಶ್ವರಸ್ವಾಮಿ ಮಠದ ಪೀಠಾಧಿಪತಿ ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ಕದಂಬ ಜಂಗದ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಗೌಡಗೆರೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಧರ್ಮಾಧಿಕಾರಿ ಶ್ರೀ ಮಲ್ಲೇಶ್, ಶ್ರೀ ಅಂಕನಾಥೇಶ್ವರಸ್ವಾಮಿ ದೇವಸ್ಥಾನದ ಅರ್ಚಕ ಪ್ರಕಾಶ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಇದರ ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಸಮಾಜ ಸೇವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲಾಗದ ಸಿಎಂ ಸಿದ್ಧರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ: HDK
BREAKING: ಅಕ್ರಮ ಅದಿರು ಸಾಗಾಟ ಕೇಸ್: ಶಾಸಕ ಸತೀಶ್ ಸೈಲ್ ಗೆ ನೀಡಿದ್ದ ಮಧ್ಯಂತರ ಜಾಮೀನು ರದ್ದು








