ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ವೀರೇಂದ್ರ ಹೆಗಡೆ ಅವರೇ ಎಸ್ಐಟಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೇ ಬಿಜೆಪಿಗರು ಮಾತ್ರ ಧರ್ಮಸ್ಥಳ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಇಂದು ವಿಧಾನಸಭೆಯಲ್ಲಿ ಮಾತನಾಡಿದಂತ ಅವರು, ಧರ್ಮಸ್ಥಳದ ಹೆಗಡೆಯವರೇ ಎಸ್ಐಟಿ ನಿರ್ಧಾರ ಸ್ವಾಗತಿಸಿದ್ದಾರೆ. ಇವರು ಹಿಡ್ಕೊಂಡು ಅಲ್ಲಾಡಿಸುತ್ತಿದ್ದಾರೆ. ಎಸ್ಐಟಿ ರಚನೆ ಮಾಡಿದಾಗ ಬಿಜೆಪಿಯವರು ಮಾತಾಡೇ ಇರಲಿಲ್ಲ ಎಂದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ವೇಳೆ ಒಂದು ಕಡೆ ಅಸ್ಥಿಪಂಜರ, ಮೂಳೆ ಪತ್ತೆಯಾಯ್ತು. ಅದಾದ ಮೇಲೆ ಗುಂಡಿಗಳಲ್ಲಿ ಏನೂ ಸಿಗದಿದ್ದಾಗ ಇವರು ಶುರು ಮಾಡ್ತಾರೆ ಎಂಬುದಾಗಿ ಬಿಜೆಪಿಯ ಧರ್ಮಸ್ಥಳ ಚಳುವಳಿಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದರು.
SHOCKING: 8ನೇ ತರಗತಿ ವಿದ್ಯಾರ್ಥಿಯಿಂದ ಸಹಪಾಠಿಗೆ ಚಾಕುವಿನಿಂದ ಇರಿದು ಗಾಯ
ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ : ಬ್ಯಾಂಕಿಂಗ್, ಹಣಕಾಸು ಕ್ಷೇತ್ರದಲ್ಲಿ 2.5 ಲಕ್ಷ ಹೊಸ ಉದ್ಯೋಗಗಳು ಲಭ್ಯ