ನವದೆಹಲಿ : ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಖ್ಯ ಮಾಹಿತಿ ಇದ್ದು, UIDAI ನಿಂದ ವಿಶೇಷ ನವೀಕರಣವನ್ನ ಬಿಡುಗಡೆ ಮಾಡಲಾಗಿದೆ. ಇದು ದೇಶಾದ್ಯಂತ ಆಧಾರ್ ಕಾರ್ಡ್ ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ. ಅದ್ರಂತೆ, ನಿಮ್ಮ ಆಧಾರ್ ದುರ್ಬಳಕೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಯುಐಡಿಎಐ ಹೊಸ ಆದೇಶದಂತೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ತೆಗೆದುಕೊಳ್ಳುವಾಗ ಅದನ್ನ ಪರಿಶೀಲಿಸಲು ರಾಜ್ಯ ಸರ್ಕಾರಗಳು ಮತ್ತು ಘಟಕಗಳಿಗೆ ಸೂಚಿಸಿದೆ. ಇನ್ನು ಈ ಕುರಿತು ಯುಐಡಿಎಐ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಆಧಾರ್ ದುರ್ಬಳಕೆ ತಡೆಯಲು ಯೋಜನೆ ರೂಪಿಸಲಾಗಿದೆ ಎಂದು ಯುಐಡಿಎಐ ಹೇಳಿದ್ದು, ಆಧಾರ್ ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಸ್ವೀಕರಿಸುವ ಮೊದಲು, ಅದನ್ನ ಪರಿಶೀಲಿಸಬೇಕು ಅಗತ್ಯ ಎಂದಿದೆ.

ಮಾಹಿತಿ ನೀಡಿದ ಪ್ರಾಧಿಕಾರವು ಆಧಾರ್ ಕಾರ್ಡ್ ಹೊಂದಿರುವವರ ಒಪ್ಪಿಗೆಯ ನಂತ್ರ ಆಧಾರ್ ಪತ್ರ, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್ ಮತ್ತು ಎಂ-ಆಧಾರ್ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ.

ಇನ್ನು ಆಧಾರ್ ಬಳಸುವ ಮೊದಲು ಪರಿಶೀಲನೆಯ ಅಗತ್ಯವನ್ನ ಒತ್ತಿ ಹೇಳಿದ್ದು, ಅಗತ್ಯ ಮಾರ್ಗಸೂಚಿಗಳನ್ನು ನೀಡುವಂತೆ ಯುಐಡಿಎಐ ರಾಜ್ಯ ಸರ್ಕಾರಗಳನ್ನ ಒತ್ತಾಯಿಸಿದೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಅದ್ರಂತೆ, ಯುಐಡಿಎಐ ಪರಿಶೀಲನೆಯ ಅಗತ್ಯತೆ ಮತ್ತು ಅನುಸರಿಸಬೇಕಾದ ಪ್ರೋಟೋಕಾಲ್ಗಳನ್ನ ಒತ್ತಿಹೇಳುವ ಸುತ್ತೋಲೆಯನ್ನ ಸಹ ಹೊರಡಿಸಿದೆ. ಇನ್ನು QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಆಧಾರ್ ಪರಿಶೀಲಿಸಬಹುದು.

ಇನ್ನು ಇದಕ್ಕೂ ಮೊದ್ಲು ಯುಐಡಿಎಐ ಮಕ್ಕಳ ಬಾಲ ಆಧಾರ್ ಕಾರ್ಡ್ ನವೀಕರಿಸುವಂತೆ ಪೋಷಕರಿಗೆ ಸೂಚಿಸಿತ್ತು.

 

BIG NEWS: ಎನ್ಐಎ ತನಿಖೆಗೆ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ವಹಿಸಲು ನಿರ್ಧಾರ – ಗೃಹ ಸಚಿವ ಅರಗ ಜ್ಞಾನೇಂದ್ರ

BREAKING NEWS : ಪ್ರಧಾನಿ ಗುಜರಾತ್ ರ್ಯಾಲಿ ವೇಳೆ ‘ಭದ್ರತಾ ಲೋಪ’ ; ಮೋದಿ ಬಳಿ ಸುಳಿದಾಡಿದ ‘ಡ್ರೋನ್’ |PM Modi security breach

Lip Care tips: ಚಳಿಗಾಲದಲ್ಲಿ ಬಿರಿಯುವ ತುಟಿಗಳ ಆರೈಕೆಗೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು

Share.
Exit mobile version