Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

VIDEO : ‘ಮಧ್ಯಸ್ಥಿಕೆಗಾಗಿ ಮೋದಿಗೆ ಕರೆ ಮಾಡಿ, ಅವ್ರಿಗೆ ಇರಾನ್ ಜೊತೆ ಉತ್ತಮ ಸಂಬಂಧವಿದೆ’ : ‘ಟ್ರಂಪ್’ಗೆ ಅಮೆರಿಕದ ಮಾಜಿ ಕರ್ನಲ್ ಸಲಹೆ

12/03/2026 10:20 PM

ಯುದ್ಧದಿಂದಾಗಿ ಜಗತ್ತು ತೀವ್ರ ಇಂಧನ ಬಿಕ್ಕಟ್ಟು ಎದುರಿಸ್ತಿದೆ, ಭಾರತ ಸಾಧ್ಯವಿರುವ ಎಲ್ಲವನ್ನೂ ಮಾಡ್ತಿದೆ : ಪ್ರಧಾನಿ ಮೋದಿ

12/03/2026 10:11 PM

ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ

12/03/2026 9:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `ಫೈರ್‌ ಮ್ಯಾನ್’ ಹುದ್ದೆ ಹೆಸರು ‘ಫೈರ್‌ ಫೈಟರ್’ ಎಂದು ಮರು ನಾಮಕರಣ : ಸರ್ಕಾರ ಮಹತ್ವದ ಆದೇಶ
KARNATAKA

ರಾಜ್ಯದಲ್ಲಿ `ಫೈರ್‌ ಮ್ಯಾನ್’ ಹುದ್ದೆ ಹೆಸರು ‘ಫೈರ್‌ ಫೈಟರ್’ ಎಂದು ಮರು ನಾಮಕರಣ : ಸರ್ಕಾರ ಮಹತ್ವದ ಆದೇಶ

By kannadanewsnow5717/02/2026 5:13 AM

ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಫೈರ್ ಮ್ಯಾನ್ ಹುದ್ದೆಯನ್ನು ‘ಫೈರ್‌ ಫೈಟರ್’ ಮತ್ತು ಲೀಡಿಂಗ್‌ ಫೈರ್‌ಮ್ಯಾನ್‌ ಹುದ್ದೆ ಯನ್ನು ‘ಲೀಡಿಂಗ್ ಫೈಯರ್ ಫೈಟರ್’ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ:(1) ರ ದಿನಾಂಕ:09-09-2024 ರ ಪತ್ರದಲ್ಲಿ ಕೇಂದ್ರ ಗೃಹ ಮಂತ್ರಾಲಯವು SFAC ಸಭೆಯಲ್ಲಿ ತೀರ್ಮಾನಿಸಲಾದಂತೆ, ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ Fireman ಹುದ್ದೆಯ ಹೆಸರನ್ನು Firefighter ಎಂದು ಬದಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿರುತ್ತದೆ.

09-01-2025, 04-03-2025 & 16-05-2025ರ ಪತ್ರಗಳಲ್ಲಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಇವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು 1964 ರಿಂದ ಜಾರಿಗೆ ಬಂದಿದ್ದು, ಅಗ್ನಿ ಅವಘಡ, ಪ್ರಕೃತಿ ವಿಕೋಪ, ನೆರೆ ಹಾವಳಿ, ಜಾನುವಾರುಗಳ ರಕ್ಷಣೆ, ವಿವಿಧ ಕಟ್ಟಡಗಳಲ್ಲಿ ಅಗ್ನಿಸುರಕ್ಷತೆ ಹಾಗೂ ಇತ್ಯಾದಿಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತ ಬಂದಿರುತ್ತದೆ. ಈ ಇಲಾಖೆಯಲ್ಲಿ ಪ್ರಸ್ತುತ ಒಟ್ಟು 7159 ವಿವಿಧ ಹುದ್ದೆಗಳು ಮಂಜೂರಾಗಿರುತ್ತದೆ. ಇದರಲ್ಲಿ ವಿವಿಧ ಹುದ್ದೆಗಳಲ್ಲಿ ಪ್ರಸ್ತುತ 5272 ಅಧಿಕಾರಿ /ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇವುಗಳ ಪೈಕಿ ‘ಅಗ್ನಿಶಾಮಕ’ ಮತ್ತು ‘ಅಗ್ನಿಶಾಮಕ ಠಾಣಾಧಿಕಾರಿ’ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಶೇ.10 ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲು ಕ್ರಮವಹಿಸಲಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು, 2013 Fireman & Leading Fireman ಹುದ್ದೆಗಳ ಪದನಾಮವಿರುತ್ತದೆ. ಈ ಹುದ್ದೆಗಳ ಪದನಾಮವನ್ನು ಅನುಕ್ರಮವಾಗಿ Fire Fighter and Leading Fire Fighter ಎಂದು ಆಂಗ್ಲ ಭಾಷೆಯಲ್ಲಿ ಪದನಾಮೀಕರಣಗೊಳಿಸಿ, ಆದೇಶವನ್ನು ಹೊರಡಿಸುವಂತೆ ಕೋರಿರುತ್ತಾರೆ.
ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರ್ದೇಶಕರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇವರ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಸರ್ಕಾರ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 22 ಎಸ್‌ಎಫ್‌ಬಿ 2025, ಬೆಂಗಳೂರು, ದಿನಾಂಕ: 12-02-2026.

ಗೃಹ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೇಂದ್ರ ಮಂತ್ರಾಲಯ(ಅಗ್ನಿಶಾಮಕ ವಿಭಾಗ)ದ ದಿನಾಂಕ:25 & 26ನೇ ಏಪ್ರಿಲ್, 2024 ರಂದು ನಡೆದ 44ನೇ Standing Fire Advisory Council ಸಭೆಯಲ್ಲಿ ತೀರ್ಮಾನಿಸಿರುವಂತೆ, ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು, 2013 ರಲ್ಲಿ ಅವಕಾಶ ಕಲ್ಪಿಸಿಕೊಂಡಿರುವ Fireman ಹುದ್ದೆಯನ್ನು “Fire Fighter” ಎಂದು ជា Leading Fireman “Leading Fire Fighter” 2 ง ಪದನಾಮೀಕರಿಸಲು ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 97 ಸೇನಿಡಿ 2004, ದಿನಾಂಕ:08-10-2004ರನ್ವಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸೇರ್ಪಡೆಗೊಳಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವುದು.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು, 2013 ಅನ್ನು ಸಮಗ್ರವಾಗಿ ಪರಿಷ್ಕರಿಸುವ ಸಂದರ್ಭದಲ್ಲಿ ಮೇಲ್ಕಂಡ ಮರುಪದನಾಮೀಕರಣವನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 329 ವೆಚ್ಚ-11/2025, ದಿನಾಂಕ:01-07-2025 ರಲ್ಲಿ ನೀಡಿರುವ ಸಹಮತಿಯನ್ವಯ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಟಿಪ್ಪಣಿ ಸಂಖ್ಯೆ: ಸಿಆಸುಇ 173 ಸೇನಿಡಿ 2025, ದಿನಾಂಕ: 18-08-2025 ರಲ್ಲಿ ನೀಡಿದ ಸಹಮತಿಯನ್ವಯ ಹೊರಡಿಸಲಾಗಿದೆ.

The post of 'Fireman' in the state has been renamed as 'Firefighter': Government issues important order
Share. Facebook Twitter LinkedIn WhatsApp Email

Related Posts

ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ

12/03/2026 9:44 PM2 Mins Read
vidhana soudha

ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲಿನಿಂದ 31 ಕೈದಿಗಳ ಬಿಡುಗಡೆಗೆ ಸರ್ಕಾರ ಆದೇಶ

12/03/2026 9:32 PM1 Min Read

ರಾಜ್ಯ ಸಚಿವ ಸಂಪುಟ ಸಭೆ: ಮೈಶುಗರ್ ಪುನಶ್ಚೇತನಕ್ಕೆ ₹60 ಕೋಟಿ, ಸೂರ್ಯನಗರದಲ್ಲಿ ಕ್ರೀಡಾಂಗಣಕ್ಕೆ ಅನುಮೋದನೆ

12/03/2026 9:30 PM1 Min Read
Recent News

VIDEO : ‘ಮಧ್ಯಸ್ಥಿಕೆಗಾಗಿ ಮೋದಿಗೆ ಕರೆ ಮಾಡಿ, ಅವ್ರಿಗೆ ಇರಾನ್ ಜೊತೆ ಉತ್ತಮ ಸಂಬಂಧವಿದೆ’ : ‘ಟ್ರಂಪ್’ಗೆ ಅಮೆರಿಕದ ಮಾಜಿ ಕರ್ನಲ್ ಸಲಹೆ

12/03/2026 10:20 PM

ಯುದ್ಧದಿಂದಾಗಿ ಜಗತ್ತು ತೀವ್ರ ಇಂಧನ ಬಿಕ್ಕಟ್ಟು ಎದುರಿಸ್ತಿದೆ, ಭಾರತ ಸಾಧ್ಯವಿರುವ ಎಲ್ಲವನ್ನೂ ಮಾಡ್ತಿದೆ : ಪ್ರಧಾನಿ ಮೋದಿ

12/03/2026 10:11 PM

ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ

12/03/2026 9:44 PM

BREAKING : ಮತ್ತೆ ಚಿನ್ನ ಗೆದ್ದ ‘ಸುಮಿತ್ ಆಂಟಿಲ್’! ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್’ನಲ್ಲಿ ಭಾರತ ಪ್ರಾಬಲ್ಯ

12/03/2026 9:40 PM
State News
KARNATAKA

ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು: ಸಾಗರ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ

By kannadanewsnow0912/03/2026 9:44 PM KARNATAKA 2 Mins Read

ಶಿವಮೊಗ್ಗ:  ಅವಕಾಶ ಸಿಕ್ಕಾಗ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಒಳ್ಳೆಯ ಕೆಲಸ ಡಂಗೂರ ಸಾರಿಕೊಂಡು ಹೋಗಲು ಬರುವುದಿಲ್ಲ. ಇಂತಹ ಮಾದರಿ…

vidhana soudha

ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲಿನಿಂದ 31 ಕೈದಿಗಳ ಬಿಡುಗಡೆಗೆ ಸರ್ಕಾರ ಆದೇಶ

12/03/2026 9:32 PM

ರಾಜ್ಯ ಸಚಿವ ಸಂಪುಟ ಸಭೆ: ಮೈಶುಗರ್ ಪುನಶ್ಚೇತನಕ್ಕೆ ₹60 ಕೋಟಿ, ಸೂರ್ಯನಗರದಲ್ಲಿ ಕ್ರೀಡಾಂಗಣಕ್ಕೆ ಅನುಮೋದನೆ

12/03/2026 9:30 PM

ಪುರುಷರು ಮಾಡುವ ಈ 5 ಸಣ್ಣ ತಪ್ಪುಗಳೇ `ವಿಚ್ಛೇದನಕ್ಕೆ’ ಕಾರಣವಾಗಬಹುದು!

12/03/2026 9:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.