ಶಿವಮೊಗ್ಗ: ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣವಾಗಿದೆ. ಜನಪ್ರತಿನಿಧಿಗಳಾಗಿ ಬಯಸುವ ವ್ಯಕ್ತಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿ ಹೋಗುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಜ್ಞಾನೇಶ್ ಆರೋಪಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಬಿಜೆಪಿ ವತಿಯಿಂದ 2026ರ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಲ್ಲೂಕಿನ ಅಭಿವೃದ್ಧಿಗೆ ಗಮನ ನೀಡುವಲ್ಲಿ ಹಾಗೂ ಸರ್ವತೋಮುಖ ಬೆಳವಣಿಗೆಗೆ ಜನರ ಅಭಿಪ್ರಾಯ ಪಡೆಯುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವೆ. ನಾವು ಯಾವುದೇ ಕೆಲಸವನ್ನು ಪಕ್ಷದಲ್ಲಿ ಮಾಡಿದರೂ ನಮ್ಮ ಸ್ವಹಿತಾಸಕ್ತಿ ಅಡಗಿದೆ. ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕದಲ್ಲಿ ಸಾಮಾನ್ಯ ರೈತನ ಮಗನಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಕ್ಷೇತ್ರದ ಜನರು ಬೆಂಬಲಿಸಿದ್ದಾರೆ.ಇದೇ ರೀತಿ ಮುಂದಿನ ದಿನಗಳಲ್ಲೂ ಕ್ಷೇತ್ರದ ಜನರ ಸಲಹೆ,ಸಹಕಾರ ಬಯಸುವುದಾಗಿ ತಿಳಿಸಿದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಮಾತನಾಡಿ, ಪಕ್ಷದ ಪರವಾಗಿ ಡಾ.ಜ್ಞಾನೇಶ್ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಉತ್ಸಾಹಕ್ಕೆ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ ಎಂದರು.
ಹಿರಿಯ ಮುಖಂಡ ಪಾಣಿ ರಾಜಪ್ಪ ಮಾತನಾಡಿ, ಪಕ್ಷ ಅಧಿಕಾರದಲ್ಲಿದ್ದಾಗ ವಿಜಯಕ್ಕೆ ಎಲ್ಲರೂ ಪಾಲುದಾರರಾಗುತ್ತಾರೆ. ಆದರೆ ಸೋಲಿನಲ್ಲಿ ಯಾರೂ ಇರುವುದಿಲ್ಲ. ಸಂದಿಗ್ಧ ಸ್ಥಿತಿಯಲ್ಲಿ ಡಾ.ಜ್ಞಾನೇಶ್ ಪಕ್ಷ ಕಟ್ಟುವಲ್ಲಿ ಹಾಗೂ ಕಾರ್ಯಕರ್ತರ ಕಷ್ಟುಸುಖಗಳನ್ನು ಸಹೃದಯತೆಯಿಂದ ಆಲಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಉತ್ತಮ ಸ್ಥಾನಮಾನ ದೊರೆಯಲಿ ಎಂದು ಆಶಿಸಿದರು.
ಈ ವೇಳೆ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಯಲಸಿ ಜಾನಕಪ್ಪ ಒಡೆಯರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಉಪಾಧ್ಯಕ್ಷ ವಿಜಯೇಂದ್ರಗೌಡ, ಗುರುಮೂರ್ತಿ ಚಿಕ್ಕಶಕುನ, ಅರುಣಕುಮಾರ್, ಬೆನಕಪ್ಪ, ಶಿವರಾಜ್, ಅಂಕಿತಗೌಡ, ಶಿವಾನಂದ,ಶರತ್,ಸ್ವರೂಪ,ಸಂದೀಪ ಯಲವಳ್ಳಿ, ಕೃಷ್ಣಪ್ಪ ಓಟೂರು, ಮಹೇಶ್ ಹಿರೇಶಕುನ,ಓಂಕಾರಪ್ಪ, ಪರಶುರಾಮಪ್ಪ ಹಾಲಗಳಲೆ,ಯಶೋಧರ್ ಚಿತ್ರಟ್ಟೆಹಳ್ಳಿ ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ








