ಮಂಡ್ಯ : ರಾಜ್ಯದಲ್ಲಿ ರಸಗೊಬ್ಬರ ಕೊರತೆಯಾಗಿದೆ ರೈತರು ತೊಂದರೆಗೀಡಾಗಿದ್ದರೆ ಆದ್ರೆ, ಕೃಷಿ ಸಚಿವರು ಕುಂಭಕರ್ಣ ನಿದ್ರೆಯಲ್ಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.
ಈ ವಿಚಾರವಾಗಿ ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ನಿಖಿಲ್ ಕುಮಾರಸ್ವಾಮಿ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ
ಮದ್ದೂರು ವಿಧಾನಸಭಾ ಕ್ಷೇತ್ರದ ಆತಗೂರು ಹೋಬಳಿಯ ಹೊಸಹಳ್ಳಿ, ವಳಗೆರೆದೊಡ್ಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾರಾದ್ರೂ ಅನುಭವಸ್ತರು, ತಿಳುವಳಿಕೆ ಇರೋರು ಮಾತನಾಡಿದ್ರೆ ಅದನ್ನ ಗಂಭೀರವಾಗಿ ತೆಗೆದುಕೊಂಡು ಯೋಚನೆ ಮಾಡಬೇಕಾಗುತ್ತೆ. ಅದು ಬಿಟ್ಟು ನಿಖಿಲ್ ಗೆ ಜೆಡಿಎಸ್ ಪಕ್ಷದಿಂದ ಒಂದು ವರ್ಷನೋ, ಆರು ತಿಂಗಳೋ ಟ್ರೈನಿಂಗ್ ಕೊಟ್ಟು ರಾಜ್ಯಾದ್ಯಂತ ಪ್ರವಾಸ ಮಾಡೋಕೆ ಕಳಿಸಿದ್ದಾರೆ.
ಹೋದ ಕಡೆಯೆಲ್ಲಾ ಯಾರಂದ್ರೆ ಅವರನ್ನ ವಿರೋಧ ಮಾಡೋದು, ಟೀಕೆ ಮಾಡೋದು ಅದ್ರಿಂದ ನಾನು ಲೀಡರ್ ಆಗ್ತಿನಿ ಅಂತ ಭ್ರಮೆಲಿ ಹುಡುಗ ಒಡಾಡ್ತಿದ್ದಾನೆ. ಪಾಪ ಆ ಹುಡುಗನನ್ನ ರಾಜ್ಯದ ಜನರು ಕಾಮಿಡಿ ಪೀಸ್ ತರ ರೀತಿ ನೋಡ್ತಿದ್ದಾರೆ ಅಂತ ವ್ಯಂಗ್ಯವಾಡಿದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಅತ್ಯಾಚಾರ ಕೇಸಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ