ಹಾಸನ: ಈ ದೇಶ ಉಳಿಸುವ ಒಬ್ಬರೇ ಒಬ್ಬ ವ್ಯಕ್ತಿ ಅದು ನರೇಂದ್ರ ಮೋದಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Devegowda) ಅವರು ಹೇಳಿದ್ದಾರೆ.
ಅವರು ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವರಹಳ್ಳಿಯಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.
ಇದೇ ವೇಳೆ ಅವರು ಮಾತನಾಡಿ, ರಾಜ್ಯದಲ್ಲಿರುವುದು ಅತ್ಯಂತ ಕೆಟ್ಟ ಹಾಗೂ ಭ್ರಷ್ಟ ಸರ್ಕಾರ. ಚುನಾವಣೆ ಮುಗಿದ ಬಳಿಕ ಇದನ್ನು ತೆಗೆಯಲೆಂದೇ ನಾವು ಒಂದಾಗಿದ್ದೇವೆ ಅಂಥ ಹೇಳಿದರು. ನಮ್ಮ ರಾಜ್ಯದ ಸಂಪತ್ತನ್ನು ಬೇರೆ ರಾಜ್ಯಗಳ ಚುನಾವಣೆಗಳಿಗೆ ಹಂಚುತ್ತಿದ್ದಾರೆ. ಇಂತಹ ಸರ್ಕಾರ ಇರಬಾರದು, ಚುನಾವಣೆ ಮುಗಿದ ಮೇಲೆ ಈ ಸರ್ಕಾರ ತೆಗಿಯಬೇಕು ಎಂಬ ಉದ್ದೇಶದಿಂದ ಒಂದಾಗಿದ್ದೇವೆ ಎಂದಿದ್ದಾರೆ.ಇನ್ನೂಇದೇ ವೇಳೆ ಅವರು ಮಾತನ್ನು ಮುಂದುವರೆಸಿ, . 28ಕ್ಕೆ 28 ಸ್ಥಾನ ಗೆಲ್ಲಿಸಿಕೊಡ್ತೀವಿ ಅಂತ ಪ್ರಧಾನಿಯವರಿಗೆ ಹೇಳಿದ್ದೇನೆ ನಾವು ಎಲ್ಲಾ ಸ್ಥಾನಗಳನ್ನು ಗೆಲ್ಲುತ್ತೇವೆ ಅಂತ ಹೇಳಿದರು.