ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾಡಿರುವಂತ ಟ್ವಿಟ್ ಸತ್ಯಕ್ಕೆ ದೂರವಾಗಿದ್ದು. ಇದು ಸುಳ್ಳು ಸುದ್ದಿಯಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರು ಜಲಮಂಡಳಿ ಯಾವುದೇ ಹೊಸ ಟ್ಯಾಂಕರ್‌ಗಳನ್ನು ಖರೀದಿಸಿಲ್ಲ. ಈಗಾಗಲೇ ಜಲಮಂಡಳಿಯಲ್ಲಿ ಇದ್ದಂತಹ 60 ಟ್ಯಾಂಕರ್‌ಗಳನ್ನು ಆರ್ಥಿಕ ಹೊರೆ ಮಾಡಿಕೊಳ್ಳದೇ ಬ್ರಾಂಡಿಂಗ್ ಮಾಡಲಾಗಿದೆ. ಉಳಿದಂತೆ ನೊಂದಣಿಯಾಗಿರುವಂತಹ 100 ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್‌ಗಳ ದುರುಪಯೋಗ ಆಗದೇ ಇರಲು ಬ್ರಾಂಡಿಂಗ್ ಮಾಡಲಾಗಿದೆ ಎಂದು ಹೇಳಿದೆ.
ಇದರಿಂದ ಶುದ್ದ ಕುಡಿಯುವ ನೀರು ಸರಬರಾಜು ಮಾಡುವಂತಹ ಟ್ಯಾಂಕರ್‌ಗಳನ್ನು ಗುರುತಿಸುವುದು ಬಹಳ ಸುಲಭವಾಗಲಿದೆ. ಅಲ್ಲದೇ, ಟ್ಯಾಂಕರ್ ಮಾಲೀಕರು/ಚಾಲಕರು ಕಾವೇರಿ ಕನೆಕ್ಟ್ ಸೆಂಟರ್‌ಗಳನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿ ನೀರು ತುಂಬಿಸುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದೆ.
ಟ್ಯಾಂಕರ್‌ಗಳಿಗೆ RFID ಹಾಗೂ GPS ಟ್ರ್ಯಾಕಿಂಗ್ ಅಳವಡಿಸಿದ್ದು ಟ್ಯಾಂಕರ್ ಜಲಮಂಡಳಿಯ ನಿಗದಿತ ಕಾವೇರಿ ಕನೆಕ್ಟ್ ಸೆಂಟರ್‌ಗಳಲ್ಲೇ ನೀರು ತುಂಬಿಸಿ, ಅವುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ. ಇನ್ನೂ, ಶುದ್ದ ನೀರು ಇರುವುದು ಟ್ಯಾಂಕರ್ ಒಳಗಡೆ. ಅವುಗಳನ್ನು ಕಾಲಕಾಲಕ್ಕೆ ಸ್ವಚ್ಛ ಮಾಡಿಸಬೇಕಾದಂತಹ EPI ಕೋಟಿಂಗ್ ಮಾಡಿಸಲಾಗಿರುತ್ತದೆ ಎಂದಿದೆ.
ಪ್ರತಿಯೊಂದು ವಿಷಯದಲ್ಲೂ ಜನರ ಹಿತಾಸಕ್ತಿಯನ್ನು ಇಟ್ಟುಕೊಂಡು ಜನಪರ ಯೋಜನೆಗಳನ್ನು ರಾಜ್ಯ ಸರ್ಕಾರವು ಜಾರಿಗೊಳಿಸುತ್ತಿದೆ. ಹೀಗಾಗಿ ಕರ್ನಾಟಕ ವಿಧಾನ ಪರಿಷತ್ತು ಸದಸ್ಯರಾದ ಛಲವಾದಿ ನಾರಾಯಣಸ್ವಾಮಿಯವರು ಮಾಡಿರುವ ಟ್ವೀಟ್ ಸತ್ಯಕ್ಕೆ ದೂರವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸಿದೆ.
ಬೆಂಗಳೂರು ಜಲಮಂಡಳಿ ಯಾವುದೇ ಹೊಸ ಟ್ಯಾಂಕರ್‌ಗಳನ್ನು ಖರೀದಿಸಿಲ್ಲ. ಈಗಾಗಲೇ ಜಲಮಂಡಳಿಯಲ್ಲಿ ಇದ್ದಂತಹ 60 ಟ್ಯಾಂಕರ್‌ಗಳನ್ನು ಆರ್ಥಿಕ ಹೊರೆ ಮಾಡಿಕೊಳ್ಳದೇ ಬ್ರಾಂಡಿಂಗ್ ಮಾಡಲಾಗಿದೆ. ಉಳಿದಂತೆ ನೊಂದಣಿಯಾಗಿರುವಂತಹ 100 ಕ್ಕೂ ಹೆಚ್ಚು ಖಾಸಗಿ ಟ್ಯಾಂಕರ್‌ಗಳ ದುರುಪಯೋಗ ಆಗದೇ ಇರಲು ಬ್ರಾಂಡಿಂಗ್ ಮಾಡಲಾಗಿದೆ.
ಇದರಿಂದ ಶುದ್ದ ಕುಡಿಯುವ ನೀರು… pic.twitter.com/JP6Sxl95YP
— DIPR Karnataka (@KarnatakaVarthe) May 12, 2025
ಛಲವಾದಿ ನಾರಾಯಣಸ್ವಾಮಿ ಪೋಸ್ಟ್ ನಲ್ಲಿ ಏನಿತ್ತು.?
ತುಕ್ಕು ಹಿಡಿದ ಟ್ಯಾಂಕರ್‌ಗಳಲ್ಲಿ “ಅಶುದ್ಧ ನೀರು”? – ಕಾಂಗ್ರೆಸ್ ಸರ್ಕಾರದ 8ನೇ ಗ್ಯಾರಂಟಿ. “ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ” ಹೆಸರಿನಲ್ಲಿ ತುಕ್ಕು ಹಿಡಿದ ಹಳೆಯ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ನವೀಕರಿಸಿದಂತೆ ತೋರಿಸಿ, “ಸಂಚಾರಿ ಕಾವೇರಿ” ಎಂಬ ಯೋಜನೆಯನ್ನು ವಿಧಾನಸೌಧದಿಂದ ಆರಂಭಿಸಿದ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರವನ್ನು ಖಂಡಿಸುತ್ತೆವೆ.
“ಜನಪರ ಯೋಜನೆ” ಎಂಬ ಮಂತ್ರ ಜಪಿಸುತ್ತಲೇ, ಸರ್ಕಾರ ನಿಜವಾದ ಜನಪರತೆಯಿಂದ ದೂರವಾಗಿ, ಟ್ಯಾಂಕರ್‌ಗಳ ಮೇಲ್ಮೈ ಬಣ್ಣವನ್ನು ಬದಲಾಯಿಸುವ ಮೂಲಕ ಜನರ ಆರೋಗ್ಯಕ್ಕೆ ಬಣ್ಣದ ಲೇಪನವನ್ನು ಹಾಕುತ್ತಿದೆ. ಈ ಯೋಜನೆಯ ರೂವಾರಿಯಾದ ಮಂತ್ರಿಗಳ ಚಿಂತನೆಗೂ ಈಗಾಗಲೇ ತುಕ್ಕು ಹಿಡಿದಿದೆ ಎಂಬುದು ಸ್ಪಷ್ಟ.
ಮಾನ್ಯ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಈ ಯೋಜನೆಯನ್ನು “ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ” ಎಂದು ಹೇಳುವ ಬದಲಿಗೆ “ತುಕ್ಕು ಹಿಡಿದ ಟ್ಯಾಂಕರ್ ಗಳಲ್ಲಿ, ಮನೆ ಬಾಗಿಲಿಗೆ ಅಶುದ್ಧ ನೀರನ್ನು ತಲುಪಿಸುವ” ಯೋಜನೆ ಎಂದು ಹೇಳುವುದು ಸೂಕ್ತ. ಅದಲ್ಲದೆ ಟ್ಯಾಂಕರ್ ಗಳ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಊಹಿಸಲು ಅಸಾಧ್ಯ ಮತ್ತು ಶುದ್ಧವಾದ ಟ್ಯಾಂಕರ್ ಗಳಲ್ಲಿ ಶುದ್ಧವಾದ ನೀರನ್ನು ಕಳುಹಿಸಬೇಕಾದ ಇವರು ಅಶುದ್ಧವಾದ ಟ್ಯಾಂಕರ್ ಗಳಲ್ಲು ಇವರ ಜಾಹಿರಾತನ್ನು ಶುದ್ಧವಾಗಿ ಹಾಕಿಕೊಂಡಿರುವುದು ಹಾಸ್ಯಾಸ್ಪದ.
ತುಕ್ಕು ಹಿಡಿದ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ಅವುಗಳಲ್ಲಿ ಬಿ.ಐ.ಎಸ್ ಪ್ರಮಾಣಿತ ನೀರನ್ನು ಪೂರೈಸಲಾಗುತ್ತಿದೆ ಎಂಬ ನಾಟಕವನ್ನು ಜನರು ನಂಬಲಾರರು. ವಿಧಾನಸೌಧದ ಆವರಣದಲ್ಲೇ ಇಂತಹ ತುಕ್ಕು ಹಿಡಿದ ಟ್ಯಾಂಕರ್‌ಗಳನ್ನು ಪ್ರದರ್ಶಿಸಿದ್ದು, ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ನಿಲುವನ್ನು ಸ್ಪಷ್ಟಪಡಿಸುತ್ತದೆ.
ಈ ಯೋಜನೆಯ ಟ್ಯಾಂಕರ್‌ಗಳಿಗೆ ಮಾತ್ರ ತುಕ್ಕು ಹಿಡಿದಿಲ್ಲ, ಯೋಜನೆ ರೂಪಿಸುವ ಕಲ್ಪನೆಗೂ, ಜವಾಬ್ದಾರಿ ನಿಯೋಜನೆಗೂ, ಸಿದ್ಧರಾಮಯ್ಯ ಸರ್ಕಾರದ ಸಾರ್ವಜನಿಕ ಸೇವೆಯ ಮಾನವೀಯ ದೃಷ್ಟಿಕೋನಕ್ಕೂ ಗಂಭೀರ ತುಕ್ಕು ಹಿಡಿದಿದೆ.
ಸ್ವಚ್ಛತೆ, ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕಾದ ಸರ್ಕಾರ, ಭ್ರಷ್ಟಾಚಾರದಲ್ಲಿ ಮುಳುಗಿ ಸಾರ್ವಜನಿಕರ ಜೀವನಕ್ಕೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂಬುದಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
ತುಕ್ಕು ಹಿಡಿದ ಟ್ಯಾಂಕರ್‌ಗಳಲ್ಲಿ "ಅಶುದ್ಧ ನೀರು"? – ಕಾಂಗ್ರೆಸ್ ಸರ್ಕಾರದ 8ನೇ ಗ್ಯಾರಂಟಿ.
"ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ" ಹೆಸರಿನಲ್ಲಿ ತುಕ್ಕು ಹಿಡಿದ ಹಳೆಯ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ನವೀಕರಿಸಿದಂತೆ ತೋರಿಸಿ, “ಸಂಚಾರಿ ಕಾವೇರಿ” ಎಂಬ ಯೋಜನೆಯನ್ನು ವಿಧಾನಸೌಧದಿಂದ ಆರಂಭಿಸಿದ @INCKarnataka ಸರ್ಕಾರದ ಈ… pic.twitter.com/39lycz4Kym
— Chalavadi Narayanaswamy (@NswamyChalavadi) May 10, 2025
BREAKING: ನಾವು ಭಾರತ-ಪಾಕ್ ನಡುವೆ ‘ಪರಮಾಣು ಸಂಘರ್ಷ’ವನ್ನು ತಡೆದಿದ್ದೇವೆ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಪ್
ಇಲ್ಲಿ ಕರ್ನಾಟಕದ ಜಿಲ್ಲಾ, ತಾಲ್ಲೂಕು ವಾರು ಪ್ರವಾಸಿ ಸ್ಥಳಗಳ ಮಾಹಿತಿ ಲಭ್ಯ | Karnataka Explore