ಬೆಂಗಳೂರು: ದಂಪತಿಗಳಲ್ಲಿ ಸಮಾನತೆ ಬೆಳೆಸುವ ಉದ್ದೇಶದಿಂದ ಸನ್‌ಫೀಸ್ಟ್ ಮಾರಿ ಲೈಟ್‌ನ ರಾಯಬಾರಿ ಆಗಿರುವ ನಟಿ ಜ್ಯೋತಿಕಾ ದಂಪತಿಗಳು ತಮ್ಮ ಮನೆ ಮುಂಭಾಗ ಇಬ್ಬರ ಹೆಸರೂ ಹೊಂದಿರುವ “ನೇಮ್‌ಪ್ಲೇಟ್” ಹಾಕುವ ಮೂಲಕ ಎಲ್ಲಾ ದಂಪತಿಗಳಿಗೂ ತಮ್ಮ ಮನೆ ಮುಂಭಾಗ ನೇಮ್‌ಪ್ಲೇಟ್ ಹಾಕುವಂತೆ ಸಲಹೆ ನೀಡಿದ್ದಾರೆ.
ಸನ್‌ಫೀಸ್ಟ್ ಮಾರಿಲೈಟ್ ನೂತನ ಉಪಕ್ರಮ ಜಾರಿಗೆ ತಂದಿದ್ದು, ಸಂಸಾರ ಸಾಗಿಸುವ ದಂಪತಿಗಳು ತಮ್ಮ ಮನೆಯಲ್ಲಿ ನೇಮ್‌ಪ್ಲೇಟ್ ಹಾಕುವುದರಲ್ಲೂ ಸಹ ಸಮಾನತೆ ಹೊಂದಿರಬೇಕು ಎಂಬ ಸಂದೇಶ ಸಾರುವ ಉದ್ದೇಶ ಇದಾಗಿದೆ.
ಈ ಕುರಿತು ಮಾತನಾಡಿದ ITC ಫುಡ್ಸ್‌ನ ಬಿಸ್ಕತ್ತು ಮತ್ತು ಕೇಕ್‌ಗಳ ವ್ಯವಹಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಲಿ ಹ್ಯಾರಿಸ್ ಶೇರ್, ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಮೂರರಲ್ಲಿ ಎರಡಷ್ಟು ಮನೆಗಳಲ್ಲಿ ತಮ್ಮ ಮನೆಯ ನೇಮ್‌ಪ್ಲೇಟ್‌ಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಹೆಸರೂ ಇದೆ, ಉಳಿದಂತೆ ಕೇವಲ ಗಂಡನ ಹೆಸರಷ್ಟೇ ಇದೆ. ಸುಖ ಸಂಸಾರ ಸಾಗಿಸುವ ಈ ಜೀವನದಲ್ಲಿ ಗಂಡ-ಹೆಂಡತಿ ಇಬ್ಬರೂ ಸಮಾನವಾಗಿ ಜವಾಬ್ದಾರಿ ಹೊತ್ತಿರುತ್ತಾರೆ, ಮನೆ ಮುಂಭಾಗದ ನೇಮ್‌ಪ್ಲೇಟ್ ನಂತಹ ಸಣ್ಣ ವಿಷಯಗಳಲ್ಲೂ ಸಮಾನತೆ ಹೊಂದದೇ ಹೋದರೆ ಹೇಗೆ? ಹೀಗಾಗಿ ಸನ್‌ಫೀಸ್ಟ್ ಮಾರಿ ಲೈಟ್ ಇಂತಹ ಸಣ್ಣ ವಿಷಯಗಳಲ್ಲೂ ದಂಪತಿಗಳ ನಡುವೆ ಪ್ರೀತಿ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಈ ಉಪಕ್ರಮ ತಂದಿದ್ದೇವೆ. ಈ ಅಭಿಯಾನವನ್ನು ಈಗಾಗಲೇ ತಮಿಳುನಾಡಿನಲ್ಲಿ ನಡೆಸಿದ್ದು, 3 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆ ಮುಂಭಾಗದ ನೇಮ್‌ಪ್ಲೇಟ್ ಬದಲಿಸುವ ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದರು.
ನಟಿ ಜ್ಯೋತಿಕಾ ದಂಪತಿಯೂ ಇಬ್ಬರ ಹೆಸರನ್ನೂ ಮನೆಯ ನೇಮ್‌ಪ್ಲೇಟ್ ಮೇಲೆ ಬರೆಸುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು, ಜಾಹಿರಾತು ಮೂಲಕ ಸಂದೇಶ ನೀಡಿದ್ದಾರೆ.
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು
BREAKING : 2025-26ನೇ ಸಾಲಿನ `ದಸರಾ ಕ್ರೀಡಾಕೂಟ’ಕ್ಕೆ ಮುಹೂರ್ತ ಫಿಕ್ಸ್ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ