ಶಿವಮೊಗ್ಗ: ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ನೂರಾರು, ಸಾವಿರಾರು ಜನರಿಗೆ ಕಾರ್ಯಕ್ರಮದಲ್ಲಿ ಮಾತನಾಡುವವ ಮಾತು ಕೇಳಬೇಕೆಂದ್ರೆ ಮೈಕ್ ಬಹುಮುಖ್ಯ. ಒಂದು ವೇಳೆ ಮೈಕ್ ಕೈಕೊಟ್ರೆ ಕಾರ್ಯಕ್ರಮದ ಆಯೋಜಕರ ವಿರುದ್ಧ ಗರಂ ಆಗುವವರೇ ಹೆಚ್ಚು. ಆದರೇ ಇಂದು ಸಾಗರದಲ್ಲಿ ನಡೆದಂತ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟದ ವೇಳೆಯಲ್ಲಿ ಮೈಕ್ ಕೈ ಕೊಟ್ಟರೂ ಸೌಜನ್ಯ ಮೆರೆದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮೈಕ್ ಇಲ್ಲದೇ ಗಟ್ಟಿ ಧ್ವನಿಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನೆಹರು ಮೈದಾನದಲ್ಲಿ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಈ ಉದ್ಘಾಟನೆಯ ಬಳಿಕ ಡಯಾಸ್ ಬಳಿಗೆ ತೆರಳಿ ಮಾತನಾಡೋದಕ್ಕೆ ಪ್ರಾರಂಭಿಸಿದ ವೇಳೆಯಲ್ಲಿ ಮೈಕ್ ಕೈಕೊಟ್ಟಿತು. ಸೌಂಡ್ ಸಿಸ್ಟಮ್ ಹಾಕಿದ್ದಂತವರು ಎಷ್ಟೇ ರಿಪೇರಿ ಮಾಡಿದರೂ ಮೈಕ್ ಸರಿ ಹೋಗಲೇ ಇಲ್ಲ.
ಈ ವೇಳೆ ಸಿಟ್ಟಾಗದಂತ ಶಾಸಕ ಗೋಪಾಲಕೃಷ್ಣ ಬೇಳೂರು, ಮೈಕ್ ಇಲ್ಲದೆಯೂ ಬಹುದೊಡ್ಡ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದಂತ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನೆರೆದಿದ್ದಂತ ಮಕ್ಕಳನ್ನು ಉದ್ದೇಶಿಸಿ ಮೈಕ್ ಇಲ್ಲದೇ ಗಟ್ಟಿಯಾಗಿ ಮಾತನಾಡಿದ ಅವರು, ಓದಿನ ಜೊತೆ ಮಕ್ಕಳು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ. ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪೋಷಕರು ಮಕ್ಕಳ ಮೇಲೆ ಓದಿನ ಒತ್ತಡ ಹೇರುವ ಜೊತೆಗೆ ಬಿಡುವಿನ ವೇಳೆಯಲ್ಲಿ ಅವರು ಆಟೋಟಗಳಲ್ಲೂ ಪಾಲ್ಗೊಳ್ಳುವಂತೆ ಪ್ರೇರೆಪಿಸಬೇಕು. ತಾಲ್ಲೂಕಿನಲ್ಲಿ ದೈಹಿಕ ಶಿಕ್ಷಕರ ಕೊರತೆ ಇರುವುದು ನನ್ನ ಗಮನದಲ್ಲಿದೆ. ಈಗಾಗಲೆ ರಾಜ್ಯದಲ್ಲಿ 12ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಸುಮಾರು 3ಸಾವಿರ ದೈಹಿಕ ಶಿಕ್ಷಕರೂ ಇದ್ದಾರೆ. ಶೀಘ್ರದಲ್ಲಿಯೇ ಶಿಕ್ಷಕರ ಕೊರತೆಯನ್ನು ನೀಗಿಸಲಾಗುತ್ತಿದೆ ಎಂದರು ಕ್ರೀಡಾಸ್ಪರ್ಧೆ ಸಂದರ್ಭದಲ್ಲಿ ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ನೀಡಬೇಕು. ತಾಲ್ಲೂಕಿನಲ್ಲಿ ಕ್ರೀಡೆ ಮತ್ತು ಶೈಕ್ಷಣಿಕ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಜೊಸೆಫರ ಆಂಗ್ಮ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥೆ ಸಿಸ್ಟರ್ ಲೆಮೆನ್ಸಿ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಗಣಪತಿ ಮಂಡಗಳಲೆ, ಗಣೇಶ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ರಮೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಸಿಸ್ಟರ್ ಮೆರಿನ್ ಇನ್ನಿತರರು ಹಾಜರಿದ್ದರು.
ಧರ್ಮಸ್ಥಳದ ಬುರುಡೆ ಷಡ್ಯಂತ್ರದಲ್ಲಿ ‘ಯೂಟ್ಯೂಬರ್’ಗಳ ಕೈವಾಡವಿದೆ: ಪ್ರಶಾಂತ್ ಸಂಬರಗಿ SITಗೆ ದೂರು
BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ