ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜೆ. ರವಿಶಂಕರ್, ಭಾ.ಆ.ಸೇ, ಅವರು ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗಿನ ವಿಮಾನ ನಿಲ್ದಾಣ ಮೆಟ್ರೋ ಮಾರ್ಗದ ಕಾರಿಡಾರ್ ನಲ್ಲಿರುವ ವಯಾಡಕ್ಟ್ ನಿರ್ಮಾಣ, ನಿಲ್ದಾಣ ಕಟ್ಟಡಗಳು ಮತ್ತು ಮುಂಬರುವ ವಿಮಾನ ನಿಲ್ದಾಣ ಡಿಪೋ ಸೇರಿದಂತೆ ನಿರ್ಣಾಯಕ ಮೂಲಸೌಕರ್ಯ ಕಾರ್ಯಗಳ ಸ್ಥಳ ಪರಿಶೀಲನೆ ನಡೆಸಿದರು.
ಇದಲ್ಲದೆ ಇನ್ಸ್ಪೆಕ್ಷನ್ ಸಮಯದಲ್ಲಿ ಮಹತ್ವದ ಮೂಲಸೌಕರ್ಯ ಕಾಮಗಾರಿಗಳಾದ ವಿಮಾನಪಥ (ವೈಡಕ್ಟ್) ನಿರ್ಮಾಣ ಹಾಗೂ ಭಾರತೀಯ ವಾಯುಪಡೆಯ ಆವರಣದ ಸಮೀಪದಲ್ಲಿರುವ ರೈಲು ಹಾದಿ ದಾಟುವ ಸ್ಥಳಗಳು ಮತ್ತು ‘ಕಟ್-ಅಂಡ್-ಕವರ್’ ವಿಭಾಗಗಳಂತಹ ಅತೀ ಪ್ರಾಮುಖ್ಯತೆಯ ಸ್ಥಳಗಳನ್ನೂ ಪರಿಶೀಲಿಸಿದರು.
ಸಂಬಂಧಿತ ಬಿಎಂಆರ್‌ಸಿಎಲ್ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಸುರಕ್ಷತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅತ್ಯಾಧುನಿಕ ಮೂಲಸೌಕರ್ಯವನ್ನು ಒದಗಿಸವ ಮೂಲಕ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಇದು ಬೆಂಗಳೂರು ಮೆಟ್ರೋ ಯೋಜನೆಯ ಹಂತ-2ಬಿ ಯ ಪ್ರಮುಖ ಭಾಗವಾಗಿದೆ.
ವಿಮಾನ ನಿಲ್ದಾಣ ಮೆಟ್ರೋ ಮಾರ್ಗ ಉತ್ತರ ಬೆಂಗಳೂರಿಗೆ ಉತ್ತಮ ಸಂಚಾರ ಸಂಪರ್ಕವನ್ನು ನೀಡಲಿದ್ದು, ನಗರ ಮತ್ತು ವಿಮಾನ ನಿಲ್ದಾಣದ ನಡುವೆ ಸುಗಮ ಪ್ರಯಾಣವನ್ನು ಒದಗಿಸಲಿದೆ.
ಮಂಡ್ಯದ ಮದ್ದೂರಲ್ಲಿ 12ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ, ಗಾಯ
BREAKING: ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು