ಬೆಂಗಳೂರು: ಮಾಲೀಕರ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ವ್ಯವಸ್ಥಾಪಕನೊರ್ವನ ಬಂಧಿಸಲಾಗಿದೆ. ಅಲ್ಲದೇ ಬಂಧಿತ ಆರೋಪಿಯಿಂದ 1 ಕೆ.ಜಿ 40 ಗ್ರಾಂ ಚಿನ್ನಾಭರಣ ಮತ್ತು 1 ಕೆ.ಜಿ ಬೆಳ್ಳಿಯ ವಸ್ತು ವಶ ಸೇರಿದಂತೆ ಮೌಲ್ಯ 89.09 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 8ನೇ ಬ್ಲಾಕ್‌ನ ಸಂಗಂ ಸರ್ಕಲ್‌ನಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:26/07/2025 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಬಿಸಿನೆಸ್ ಮಾಡಿಕೊಂಡಿದ್ದು, ಅವರ ವಾಸದ ಮನೆಯ ಕೊಠಡಿಯೊಂದರಲ್ಲಿ ಕಛೇರಿಯನ್ನು ಸ್ಥಾಪಿಸಿದ್ದು, ಆ ಕಛೇರಿಯಲ್ಲಿ ಓರ್ವ ವ್ಯವಸ್ಥಾಪಕನು ಈಗ್ಗೆ 20 ವರ್ಷದಿಂದ ಬಿಸಿನೆಸ್‌ನ ವ್ಯವಹಾರದ ಕೆಲಸವನ್ನು ನಿರ್ವಹಿಸುತ್ತಿದ್ದನು. ದಿನಾಂಕ:01/01/2007 ರಿಂದ ದಿನಾಂಕ:26/07/2025 ರ ನಡುವೆ ಪಿರಾದುದಾರರ ಕೊಠಡಿಯ ಕಬೋರ್ಡ್‌ನಲ್ಲಿಟ್ಟದ್ದ ಚಿನ್ನಾಭರಣ ಹಾಗೂ ನಗದು ಕಳುವಾಗಿರುವ ಬಗ್ಗೆ ಅರಿತುಕೊಂಡು, ಕಛೇರಿಯಲ್ಲಿ ವ್ಯವಸ್ಥಾಪಕನಾಗಿರುವ ವ್ಯಕ್ತಿಯ ಮೇಲೆ ಅನುಮಾನವಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ದಿನಾಂಕ:28/07/2025 ರಂದು ಪಿಯ್ಯಾದುದಾರರ ಮನೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಪಿರಾದುದಾರರ ಮನೆಯಲ್ಲಿಯೇ ಕ 7.100/- ನಗದು ಹಾಗೂ ಕಬೋರ್ಡ್ ನಕಲಿ ಕೀ ಸಮೇತ ವಶಕ್ಕೆ ಪಡೆದುಕೊಳ್ಳ ಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಾಗಿ, ಚಿನ್ನಾಭರಣ ಹಾಗೂ ನಗದನ್ನು ಕಳುವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ದಿನಾಂಕ:29/07/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 08 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಆತನು ಸ್ನೇಹಿತರುಗಳ ಬಳಿ ಹೆಚ್ಚಿನ ಸಾಲವನ್ನು ಮಾಡಿಕೊಂಡಿದ್ದು, ಸಾಲವನ್ನು ತೀರಿಸುವ ಸಲುವಾಗಿ, ಈಗ್ಗೆ 8 ವರ್ಷಗಳ ಹಿಂದೆ ಪಿರಾದುದಾರರ ಮನೆಯಲ್ಲಿರುವ ಕಬೋರ್ಡ್ ಕೀಯನ್ನು ಪಿರಾದುದಾರರ ಗಮನಕ್ಕೆ ಬಾರದಂತೆ ತೆಗೆದುಕೊಂಡು ನಕಲಿ ಕೀಯೊಂದನ್ನು ಮಾಡಿಸಿಕೊಂಡು, ಪಿರಾದುದಾರರು ಮತ್ತು ಕುಟುಂಬದವರು ಮನೆಯಲಿಲ್ಲದ ಸಂದರ್ಭದಲ್ಲಿ ಆಗಾಗ್ಗೆ ಕಬೋರ್ಡ್‌ನ್ನು ತೆರೆದು, ಕಬೋರ್ಡ್‌ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡುತ್ತಿದ್ದುದಾಗಿ ಹಾಗೂ ಕಳವು ಮಾಡಿದ ಚಿನ್ನಾಭರಣಗಳನ್ನು ತ್ಯಾಗರಾಜನಗರದಲ್ಲಿರುವ ಜ್ಯೂವೆಲರಿ ಅಂಗಡಿ ಮತ್ತು ಮಣಪುರಂ ಫೈನಾನ್ಸ್ ಕಂಪನಿಯಲ್ಲಿ ಅಡಮಾನ/ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ ಹಾಗೂ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಬೆಳ್ಳಿಯ ವಸ್ತುವನ್ನು ಖರೀದಿಸಿದ್ದಾಗಿ ತಿಳಿಸಿರುತ್ತಾನೆ.
ಆರೋಪಿಯು ನೀಡಿದ ಮಾಹಿತಿ ಮೇರೆಗೆ ದಿನಾಂಕ:31/07/2025 ರಿಂದ 02/08/2025 ರ ಅವಧಿಯಲ್ಲಿ ತ್ಯಾಗರಾಜನಗರದ ಜ್ಯೂವೆಲರಿ ಅಂಗಡಿ ಹಾಗೂ ಮಣಪುರಂ ಫೈನಾನ್ಸ್ ಕಂಪನಿಯಲ್ಲಿ ಅಡಮಾನ/ಮಾರಾಟ ಮಾಡಿದ್ದ 1 ಕೆ.ಜಿ ಚಿನ್ನಾಭರಣ ಹಾಗೂ ಆರೋಪಿಯ ವಾಸದ ಮನೆಯಲ್ಲಿಟ್ಟಿದ್ದ 1 ಕೆ.ಜಿ. ಬೆಳ್ಳಿಯ ವಸ್ತುವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ * 89,09,000/- (ಎಂಬತ್ತೊಂಬತ್ತು ಲಕ್ಷದ ಒಂಬತ್ತು ಸಾವಿರ ರೂಪಾಯಿ).
0:05/08/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಚರಣೆಯನ್ನು ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಲೋಕೇಶ್ ಭರಮಪ್ಪ ಜಗಲಾಸ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಾರಾಯಣಸ್ವಾಮಿ. ವಿ ರವರ ನೇತೃತ್ವದಲ್ಲಿ, ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್. ಆರ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಬೆಂಗಳೂರಲ್ಲಿ ಮುಂದುವರಿದ ಬೀದಿ ನಾಯಗಳ ಅಟ್ಟಹಾಸ: ಇಬ್ಬರು ವಿದ್ಯಾರ್ಧಿನಿಯರ ಮೇಲೆ ದಾಳಿ
JOB ALERT: ನೀವು SSLC, ದ್ವಿತೀಯ PUC ಪಾಸ್ ಆಗಿದ್ದೀರಾ.? ಹಾಗಿದ್ದರೇ ಈ ಹುದ್ದೆಗೆ ಅರ್ಜಿ ಸಲ್ಲಿಸಿ