ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಹೌದು. ಸಾಮಾನ್ಯವಾಗಿ ಮದುವೆಯಾದ ಆರಂಭದ ದಿನಗಳಲ್ಲಿ ಗಂಡ ಹೆಂಡತಿ ತುಂಬಾ ಅನ್ಯೋನ್ಯವಾಗಿರುತ್ತಾರೆ. ಮೇಡ್ ಫಾರ್ ಈಚ್ ಅದರ್ ಎನ್ನವು ಹಾಗಿರುತ್ತಾರೆ. ಆದರೆ ದಿನಕಳೆದಂತೆ ಸಂಗಾತಿಯ ಮೇಲೆ ಮೊದಲಿದ್ದ ಆಸಕ್ತಿ ಪ್ರೀತಿ ಕುಂದುತ್ತಾ ಹೋಗುತ್ತದೆ. ಈ ಕುರಿತಾಗಿ ಮತ್ತಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಈಗ ನಾವು ಹೇಳ ಹೊರಟಿರುವ ಸಂಗತಿಗಳು ಎಲ್ಲರ ದಾಂಪತ್ಯ ಜೀವನದಲ್ಲೂ ಹೀಗೆ ಆಗುತ್ತದೆ ಎಂದೇನಿಲ್ಲ. ಆದರೆ ಸಾಮಾನ್ಯವಾಗಿ ಕೆಲವರ ದಾಂಪತ್ಯ ಜೀವನದಲ್ಲಿ ಹೀಗೆ ಆಗೋದು ಗಮನಕ್ಕೆ ಬಂದಿದೆ.
ಆಂರಭದ ದಿನಗಳಲ್ಲಿ ಗಂಡ ಹೆಂಡತಿ ಯಾವಾಗಲೂ ಒಟ್ಟಿಗೆ ಇರುವುದು. ಆಫೀಸ್ ಕೆಲಸಗಳನ್ನು ಹೊರೆತು ಪಡಿಸಿ ಎಲ್ಲಿ ಹೋದರೂ ಒಟ್ಟಿಗೆ ಹೋಗುವುದು ಈ ರೀತಿಯಾಗಿದ್ದು ನಂತರ ದಿನಗಳಲ್ಲಿ ಕೆಸದ ಒತ್ತಡವೋ ಅಥವಾ ಸಮಯದ ಅಭಾವವೋ ಹೀಗೆ ಇಬ್ಬರೂ ಒಟ್ಟಿಗೆ ಓಡಾಡಲು ಆಗುವುದಿಲ್ಲ. ಇದಕ್ಕೆ ಇಬ್ಬರೂ ಬೇಸರಗೊಳ್ಳಬಾರದು, ಬದಲಾಗಿ ಸಮಯಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕು.
ಇನ್ನು ಪ್ರೀತಿಯ ಕೊರತೆಯಿಂದಾ ಹೀಗೆಲ್ಲಾ ಆಗುತ್ತದೆ ಎಂದು ಭಾವಿಸದರೆ ಅದು ತಪ್ಪು. ದೈನಂದಿನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಕೊಂಚ ಆಸಕ್ತಿ ಕಡಿಮೆಯಾಗುತ್ತದೆಯೇ ಹೊರತು ಪ್ರೀತಿ ಕಡಿಮೆಯಾಗುವುದಿಲ್ಲ.
ಮದುವೆ ಹೊಸತರದಲ್ಲಿ ಗಂಡು ಹೆಣ್ಣು ಒಬ್ಬರಿಗೊಬ್ಬರು ಆಕರ್ಷಿಸಬೇಕಾಗುತ್ತದೆ. ಹಾಗಾಗಿ ಆರಂಭದ ದಿನಗಳಲ್ಲಿ ಒಬ್ಬರಿಗೊಬ್ಬರು ಇಂಪ್ರೆಸ್ ಮಾಡಲು ಒಳ್ಳೆಯ ಬಟ್ಟೆ ತೊಡುವುದು. ಒಳ್ಳೆಯ ಹೇರ್‌ಕಟ್ ಮಾಡಿಸಿ ಟಿಪ್‌ಟಾಪ್ ಆಗಿರುವುದು. ಇನ್ನು ಹೆಣ್ಣುಮಕ್ಕಳು ಕೂಡ ಅಷ್ಟೇ ತನ್ನ ಗಂಡ ಇಷ್ಟ ಪಡುವ ರೀತಿಯಲ್ಲಿಯೇ ರೆಡಿಯಾಗಿ ಗಂಡನ ಮುಂದೆ ನಿಲ್ಲುತ್ತಾಳೆ. ಆದರೆ ಬರಬರುತ್ತಾ ಈ ಎಲ್ಲಾ ಆಕರ್ಷಣೆಗಳು ಬೇಡವೆನಿಸಿಬಿಡುತ್ತದೆ. ಎಷ್ಟೇ ಇದ್ದರೂ ಇವರು ನಮ್ಮವರು ಎಂಬುವ ಭಾವನೆ ಮೂಡಿದ ಮೇಲೆ ಮತ್ತೇ ಅವರನ್ನು ಆಕರ್ಷಿಸುವ ಮಾತೆಲ್ಲಿ.
ಮದುವೆಗೂ ಮುಂಚೆ ಬರುತ್ತಿದ್ದ ಫೋನ್ ಕಾಲ್, ಮೆಸೇಜ್‌ಗಳು ದಿನ ಕಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಸಂಗಾತಿಗಳು ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಕಾರಣ ಮದುವೆಗು ಮುನ್ನ ನೀವು ದೂರ ದೂರ ಇದ್ದು, ಹೀಗೆ ಘಳಿಗೆ ಘಳಿಗೆಗೂ ಫೋನ್, ಮೆಸೇಜ್‌ಗಳು ಬರುತ್ತಲೇ ಇರುತ್ತವೆ. ಆದರೆ ಮದುವೆ ನಂತರ ಇಬ್ಬರೂ ಒಟ್ಟಿಗೆ ಇರುವಾಗ ಫೊನ್ ಕಾಲ್, ಮೆಸೇಜ್‌ಗಳು ಸಹಜವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಕೆಲಸದ ನಿಮತ್ಯ ಫೋನ್ ಬರೋದು ಚಾಲ್ತಿಯಲ್ಲಿರುತ್ತದೆ ಅಷ್ಟೆ.