ಬೆಂಗಳೂರು: ಎಐಸಿಸಿ ಅಧ್ಯಕ್ಷರ ಅಸ್ಪಷ್ಟ ಹೇಳಿಕೆಯ ಬಳಿಕ ರಾಜ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವ ವಿಚಾರ ಮತ್ತಷ್ಟು ತಾರಕಕ್ಕೆ ಹೋಗಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಈ ಸರಕಾರ ರಾಜ್ಯವನ್ನು ಈಗಾಗಲೇ ಸರ್ವನಾಶದ ಅಂಚಿಗೆ ತೆಗೆದುಕೊಂಡು ಹೋಗಿದೆ. ಕೇವಲ ಲೂಟಿ ಮಾಡುವುದನ್ನು ಇವತ್ತು ಸಚಿವರು ಮಾಡುತ್ತಿದ್ದಾರೆ. ಒಬ್ಬರು ಭೂಕಳ್ಳತನ ಮಾಡುತ್ತಿದ್ದರೆ, ಮತ್ತೊಬ್ಬರು ಗ್ಯಾರಂಟಿ ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅನೇಕ ಸಚಿವರು ಲೂಟಿ ಕೆಲಸದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ರಾಜ್ಯ ಪ್ರವಾಸ ಮಾಡುವ ಪರಿಸ್ಥಿತಿಯಲ್ಲಿ ಸಚಿವರು ಇಲ್ಲ. ಅವರವರ ಸ್ವಂತ ಉಸ್ತುವಾರಿ ಜಿಲ್ಲೆಗೂ ಪಿಕ್ನಿಕ್‍ನಂತೆ ಪ್ರವಾಸ ಹೋಗುತ್ತಾರೆಯೇ ಹೊರತು ಅಲ್ಲಿ ಯಾರೂ ವಾಸವಿಲ್ಲ. ಜನರು ಇವರ ಕೆಲಸ ನೋಡಿ ಕುಪಿತರಾಗಿದ್ದಾರೆ. ಈ ಸರಕಾರವು ಜನವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಇಂಥ ಜನವಿರೋಧಿ ವಿಚಾರಗಳನ್ನು ಬಿಜೆಪಿ, ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಡಲಿದೆ ಎಂದು ತಿಳಿಸಿದರು.
ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮದ್ದೂರು ಶಾಸಕ ಕೆ.ಎಂ.ಉದಯ್ ಚಾಲನೆ







