ಶಿವಮೊಗ್ಗ: ಮಾಜಿ ಸಚಿವ ಹರತಾಳು ಹಾಲಪ್ಪನವೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೇ ನೀವು ಬಳಸಿದ ಭಾಷೆ ನಮಗೆ ನೋವುಂಟು ಮಾಡಿದೆ. ನೀವು ಬಳಸಿದ ಪದ ನಮ್ಮ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮಾಡಿದ ಅವಮಾನ ಅಷ್ಟೇ ಅಲ್ಲ, ನಿಮ್ಮನ್ನು ಹೊಸನಗರ ಭಾಗದಿಂದ ಬೆಂಬಲಿಸಿದಂತ ಕಾರ್ಯಕರ್ತರು, ಮತದಾರರಿಗೆ ಮಾಡಿದಂತ ಅವಮಾನವಾಗಿದೆ ಎಂಬುದಾಗಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಸದಸ್ಯ ಹಾಗೂ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಕುರಿತಂತೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರೂರು, ಬಾರಂಗಿ ಹೋಬಳಿಯ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಯನ್ನು ಕೇಂದ್ರ ಸಚಿವರು ಲೋಕಾರ್ಪಣೆಗೊಳಿಸಿದ್ದು ಸಂತೋಷದ ವಿಚಾರವಾಗಿದೆ. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಂಸದ ಬಿವೈ ರಾಘವೇಂದ್ರ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಮಾತನಾಡುತ್ತಾ ಶಾಸಕರು ಬಾರದೇ ಇದ್ದ ಬಗ್ಗೆ, ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಬಿಜೆಪಿಯಿಂದ ಸ್ಪಷ್ಟನೆ ನೀಡಿದ್ದು ಸರಿಯಷ್ಟೇ. ಇದೇ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ನಮ್ಮ ಶಾಸಕರ ಬಗ್ಗೆ ಬಳಸಿದ ಭಾಷೆಯ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಾದ ನಮಗೆ ನೋವಾಗಿದೆ. ನಮ್ಮ ಶಾಸಕರ ಬಗ್ಗೆ ಹರತಾಳು ಹಾಲಪ್ಪ ಅವರು ಮಂಗ ಎನ್ನುವಂತ ಪದ ಬಳಸಿದ್ದಾರೆ. ಇದು ಶಾಸಕರಿಗಷ್ಟೇ ಅಲ್ಲ ಅವರನ್ನು ಆಯ್ಕೆ ಮಾಡಿದಂತ ಸಾಗರ-ಹೊಸನಗರ ಕ್ಷೇತ್ರ ಕಾರ್ಯಕರ್ತರಿಗೂ ಮಾಡಿದ ಅವಮಾನವಾಗಿದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರತಾಳು ಹಾಲಪ್ಪನವರೇ ನಾವು ನಿಮ್ಮನ್ನು ನಾವು ಗೌರವದಿಂದ ಕಾಣುತ್ತೇವೆ. ಸಾಗರ-ಹೊಸನಗರ ಕ್ಷೇತ್ರದ ಶಾಸಕರೂ ಆಗಿದ್ರಿ. ರಾಜ್ಯದ ಪ್ರಭಾವಿ ಸಚಿವರೂ ಆಗಿ ಕಾರ್ಯನಿರ್ವಹಿಸಿದ್ದೀರಿ. ನಾವು ನಿಮ್ಮಿಂದ ಈ ಭಾಷೆಯನ್ನು ನಿರೀಕ್ಷಿಸಿರಲಿಲ್ಲ. ನಾವು ನಿಮ್ಮಂತೆಯೇ ಮಾತನಾಡಬಹುದು. ಆದರೇ ನಮ್ಮ ಪಕ್ಷ ಇಷ್ಟು ಕೆಳ ಮಟ್ಟದ ಭಾಷೆ ಬಳಸುವುದನ್ನು ಕಲಿಸಿಲ್ಲ. ನಮಗೆ ನಿಮ್ಮ ಭಾಷೆ ನೋವುಂಟು ಮಾಡಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಬೆಂಬಲಿಗರಾಗಿ ನಮಗೆ ನೋವು ತಂದಿದೆ ಎಂದು ಹೇಳಿದ್ದಾರೆ.
ನಮ್ಮ ನಾಯಕರಿಗೆ ಅವಮಾನ ಮಾಡಿದ ರೀತಿಯಲ್ಲಿ ಮಾತನಾಡಿದ್ದನ್ನು ನಾವು ಸಹಿಸುವುದಿಲ್ಲ. ಇನ್ನೂ ಇದೇ ರೀತಿಯ ನಿಮ್ಮ ಮನಸ್ಥಿತಿ ಮುಂದುವರೆದರೇ ಬೂತ್ ಮಟ್ಟದಿಂದಲೇ ನಿಮ್ಮ ವಿರುದ್ಧ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆಯನ್ನು ನೀಡಿದರು.
ಹೊಸನಗರ ಬ್ಲಾಕ್ ಕಾಂಗ್ರೆಸ್ ಸದಸ್ಯ ಹಾಗೂ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಅವರ ಈ ವೀಡಿಯೋ ಹೇಳಿಕೆ ಈಗಾಗಲೇ ವೈರಲ್ ಆಗಿದ್ದು, ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.
ತಳ್ಳೋಗಾಡಿ ವ್ಯಾಪಾರಿಗಳಿಗೂ ತೆರಿಗೆ ಇಲಾಖೆ ಶಾಕ್: ಹೂವಿನ ವ್ಯಾಪಾರಿಗೆ 52 ಲಕ್ಷ ಕಟ್ಟುವಂತೆ ನೋಟಿಸ್
ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ‘ಕೆಲ್ವಿನೇಟರ್’ ಸ್ವಾಧೀನಪಡಿಸಿಕೊಂಡ ‘ರಿಲಯನ್ಸ್ ರಿಟೇಲ್’ | Reliance Retail