ಶಿವಮೊಗ್ಗ: ತನ್ನ ವಿರುದ್ಧ ಮಾಡಲಾಗಿದ್ದಂತ ಆರೋಪಗಳಿಗೆ ಸಂಬಂಧಿಸಿದಂತೆ ತಾನು ಓದಿದ್ದು ಸಾಗರದ ಅರಳಿಕಟ್ಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಎಂಬುದಾಗಿ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಜಮೀಲ್ ಸಾಗರ್ ( ಶೇಖ್ ಸುಬಾನ್ ) ತಿರುಗೇಟನ್ನು ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನಗರಸಭೆ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆ ಎದುರು ನಿಂತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕೆಲ ವ್ಯಕ್ತಿಗಳು ಹಳೆಯ ಡೆಸ್ಕ್ ನೀಡಿ ಸಾವಿರಾರು ರೂಪಾಯಿ ಹಣವನ್ನು ಲೂಟಿ ಮಾಡಿದ್ದಾಗಿ ತಿಳಿದು ಬಂದಿದೆ. ಅದನ್ನು ನಾನು ಪ್ರಶ್ನಿಸಿದ್ದೇನೆ. ಈ ಕುರಿತಂತೆ ಇಂದು ಪತ್ರಿಕಾಗೋಷ್ಠಿ ಕೂಡ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ನೀವು ಹಳೆಯ ವಿದ್ಯಾರ್ಥಿ ಅಲ್ಲ. ನೀವು ಅರಳಿ ಕಟ್ಟೆ ಶಾಲೆಯಲ್ಲಿ ಓದಿಲ್ಲ ಎಂಬುದಾಗಿ ಪ್ರಶ್ನಿಸಿದ್ದರು ಎಂದರು.
ನಾನು ಅಲ್ಲಿಯೇ ಓದಿರೋದು. ನನ್ನ ದಾಖಲೆ ಬಹಿರಂಗ ಪಡಿಸುವುದಾಗಿ ಸಮಯಾವಕಾಶವನ್ನು ಕೇಳಿದ್ದೆನು. ಅದರಂತೆ ನಾನು ದಾಖಲೆ ಬಿಡುಗಡೆ ಮಾಡುತ್ತಿದ್ದೇನೆ. ನಾನು ಓದಿದ್ದು ಸಾಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ, ಅರಳಿಕಟ್ಟೆಯಲ್ಲೇ. ನೋಡಿ ಅಲ್ಲಿನ ಮುಖ್ಯೋಪಾಧ್ಯಾಯರೇ ನೀಡಿರುವಂತ ವ್ಯಾಸಂಗ ದೃಢೀಕರಣ ಪ್ರಮಾಣ ಪತ್ರ ಎಂಬುದಾಗಿ ಬಿಡುಗಡೆ ಮಾಡಿದರು.
ನನ್ನ ಮೂಲ ಹೆಸರು ಶೇಖ್ ಸುಬಾನ್ ಆಗಿದೆ. ಅದೇ ಹೆಸರಿನಲ್ಲಿ ಅರಳಿಕಟ್ಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗೆ 2000ದಿಂದ 2004ರವರೆಗೆ ವ್ಯಾಸಂಗ ಮಾಡಿರುತ್ತೇನೆ. ಆ ಬಳಿಕ ಸಾಗರದ ಜನ್ನತ್ ನಗರದಲ್ಲಿರುವಂತ ಕ್ರೆಸೆಂಟ್ ಪ್ರೌಢ ಶಾಲೆಯಲ್ಲಿ 8ನೇ ತರಗತಿಯನ್ನು 2004-05 ಸಾಲಿನಲ್ಲಿ ವ್ಯಾಸಂಗ ಮಾಡಿರುತ್ತೇನೆ ಎಂಬುದಾಗಿ ದಾಖಲೆ ಸಹಿತ ಬಹಿರಂಗ ಪಡಿಸಿದ್ದಾರೆ.
ನಾನು ನನ್ನ ದಾಖಲೆಯನ್ನು ಬಿಡುಗಡೆ ಮಾಡಿದ್ದೇನೆ. ನೀವು ಆ ಶಾಲೆಯ ವಿದ್ಯಾರ್ಥಿನ? ಸದಸ್ಯರಾಗಿದ್ದೀರಲ್ಲ ಈ ಬಗ್ಗೆ ಸ್ಪಷ್ಟಪಡಿಸಿ. ನನ್ನ ವಿರುದ್ಧ ಮಾಡಿರುವಂತ ಆರೋಪದ ಹೇಳಿಕೆಯನ್ನು ಹಿಂಪಡೆಯಬೇಕು. ಒಂದು ವೇಳೆ ಮಾಡದೇ ಇದ್ದರೇ ನಾನು ಕಾನೂನು ಹೋರಾಟ ಮಾಡುತ್ತೇನೆ. ಸರ್ಕಾರಿ ಶಾಲೆಗಳ ಪ್ರಗತಿಗೆ ನನ್ನ ಅಡ್ಡಿಯಿಲ್ಲ. ಎಲ್ಲರೂ ಒಟ್ಟಾಗಿ ಆ ಕೆಲಸ ಮಾಡೋಣ. ನನ್ನ ಚಕಾರವಿರುವುದು ಹಳೆಯ ಪೀಠೋಪಕರಣ ನೀಡಿದ್ದರ ಬಗ್ಗೆ ಆಗಿದೆ. ಅದರ ಬಗ್ಗೆ ಹೊರತು ಬೇರಾವುದೇ ಬಗ್ಗೆ ಇಲ್ಲ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಅಂದರೇ ಇಂತಹ ಸಂಘ ಸಂಸ್ಥೆಗಳು ಮುಂದೆ ಬಂದಾಗ ಮಾತ್ರ ಸಾಧ್ಯ. ಆದರೇ ಹಳೆಯ ಪಿಠೋಪಕರಣಗಳನ್ನು ಕೊಟ್ಟಿದ್ದು ಏಕೆ ಎಂಬುದೇ ನನ್ನ ಪ್ರಶ್ನೆಯಾಗಿದೆ ಎಂದರು.
ನಾನು ಸಂಸ್ಥೆಯ ವಿರುದ್ಧ ಹೋಗಿದ್ದೇನೆ. ನಾನು ಶಾಲೆಯ ಅಭಿವೃದ್ಧಿಯ ವಿರುದ್ಧವಿಲ್ಲ. ನಾನು ಯಾವುದೇ ವ್ಯಕ್ತಿಯ ವಿರುದ್ಧವೂ ಹೋಗಿಲ್ಲ. ಅಲ್ಲಿ ಕೊಟ್ಟಿರೋದು ಹಳೆಯ ಡೆಸ್ಕ್ ಗಳು. ನಾನು ಶಾಲೆಯನ್ನು ಲೂಟಿ ಮಾಡೋದಕ್ಕೆ ಬಿಡೋದಿಲ್ಲ. ನಾನು ನನ್ನ ದಾಖಲೆಯನ್ನು ನಿಮ್ಮ ವಿಳಾಸಕ್ಕೆ ಪೋಸ್ಟ್ ಮಾಡುತ್ತೇನೆ. ಬೇಕಾದರೇ ಪರಿಶೀಲಿಸಿ. ನಿಮಗೆ ಅನುಮಾನವಿದ್ದರೇ ಶಾಲೆಗೆ ಭೇಟಿ ನೀಡಿ. ಮುಖ್ಯೋಪಾಧ್ಯಾಯರನ್ನೇ ಕೇಳಿ. ಶಿರಾಳಕೊಪ್ಪ ಪದವಿಪೂರ್ವ ಕಾಲೇಜಿಗೂ ಹೋಗಿ. ಅಲ್ಲಿಯೂ ನಾನು ವ್ಯಾಸಂಗ ಮಾಡಿರೋದು ಇದೆ. ನಿಮ್ಮ ಆರೋಪಗಳಿಗೆ ನಾನು ಹಳೆಯ ವಿದ್ಯಾರ್ಥಿಯೋ ಅಲ್ಲವೋ ಎಂಬುದನ್ನು ಸ್ಪಷ್ಟವಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.
ದೇಶಾದ್ಯಂತ ಮತದಾನ ಅಕ್ರಮ ಬಹಿರಂಗಕ್ಕೆ ಕರ್ನಾಟಕ ನೆಲದಲ್ಲಿ ಮುನ್ನುಡಿ: ಡಿಸಿಎಂ ಡಿ.ಕೆ ಶಿವಕುಮಾರ್
SHOCKING : ರಾಜಸ್ಥಾನದಲ್ಲಿ `ರಾಕ್ಷಸಿ ಕೃತ್ಯ’ : ಬೀದಿ ನಾಯಿಗಳನ್ನು ಬೆನ್ನಟ್ಟಿ ಗುಂಡು ಹಾರಿಸಿ ಬರ್ಬರ ಹತ್ಯೆ.!