ಹುಬ್ಬಳ್ಳಿ: ಪ್ರತಿ ವರ್ಷವೂ ಗಣೇಶೋತ್ಸವದ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗುತ್ತಿದ್ದಂತ ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಗ್ರೌಂಡ್ ಎಂಬುದಾಗಿ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಉಪ ಮೇಯರ್ ಸಂತೋಷ್ ಚೌಹ್ವಾಣ್ ಅಧಿಕೃತವಾಗಿ ಘೋಷಿಸಿದ್ದಾರೆ.
ಪ್ರತಿ ವರ್ಷ ಗಣೇಶ ಹಬ್ಬ ಪ್ರಾರಂಭವಾಗುತ್ತಿದ್ದಂತೇ, ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದಕ್ಕೆ ಕಾರಣವಾಗುತ್ತಿತ್ತು. ಗಣೇಶೋತ್ಸವ ಕೂರಿಸುವ ಸಂಬಂಧ ವಿವಾದ ತೀರ್ವಗೊಳ್ಳುತ್ತಿತ್ತು. ಇದಕ್ಕೆ ಕಾರಣ ಈದ್ಗಾ ಮೈದಾನ ಎಂಬುದಾಗಿ ಹೆಸರಿದ್ದದ್ದೇ ಆಗಿತ್ತು.
ಆದರೇ ಈ ಬಾರಿ ಗಣೋಶೋತ್ಸವ ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿಯೇ ನಡೆಯುತ್ತಿದೆ. ಈ ಗಣೇಶೋತ್ಸವದ ಸಂದರ್ಭದಲ್ಲಿ ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ.
ಈಗಾಗಲೇ ಈ ಬಗ್ಗೆ ಹುಬ್ಬಳ್ಳಿ ಮಹಾನಗರ ಪಾಲೀಕೆಯಿಂದ ಠರಾವು ಪಾಸ್ ಮಾಡಲಾಗಿದೆ. ಈ ಬಳಿಕ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನವೆಂದು ಹೆಸರಿಟ್ಟಿರೋದಕ್ಕೆ ಹಿಂದೂಪರ ಸಂಘಟನೆಗಳ, ಗಜಾನನ ಉತ್ಸವ ಸಮಿತಿಯವರು ಸಂತಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ–ರಕ್ಸೌಲ್, ಹುಬ್ಬಳ್ಳಿ–ಭಗತ್-ಕಿ-ಕೋಠಿ ನಡುವೆ ವಿಶೇಷ ರೈಲುಗಳ ಸಂಚಾರ
BREAKING: UGCET, NEET 2ನೇ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ- ಕೆಇಎ