ಮೈಸೂರು: ನಕಲಿ ದಾಖಲಿ ಸೃಷ್ಠಿ ಆರೋಪದ ಮೇಲೆ ಮುಡಾ ಹಗರಣದ ದೂರುದಾರ, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೀಗೆ ಬಂಧನಕ್ಕೆ ಒಳಗಾಗಿರುವಂತ ನಮ್ಮ ತಂದೆ ಜೀವಕ್ಕೆ ತೊಂದರೆ ಆದ್ರೇ ಅದಕ್ಕೆ ಸರ್ಕಾರವೇ ನೇರಹೊಣೆ ಎಂಬುದಾಗಿ ಅವರ ಪುತ್ರ ಎಚ್ಚರಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬೆಂಗಳೂರಲ್ಲಿ ಸಿಸಿಬಿ ಪೊಲೀಸರಿಂದ ನಮ್ಮ ತಂದೆ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಲಾಗಿದೆ. ನಮ್ಮ ತಂದೆ ಜೀವಕ್ಕೆ ತೊಂದರೆ ಆದ್ರೆ ಸರ್ಕಾರವೇ ನೇರಹೊಣೆ ಎಂಬುದಾಗಿ ಸ್ನೇಹಮಯಿ ಕೃಷ್ಣ ಅವರ ಹಿರಿಯ ಪುತ್ರ ವಿವೇಕ್ ಹೇಳಿದ್ದಾರೆ.
ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಇಂದು ಕೇಸ್ ಇತ್ತು, ಬಂದಿದ್ದೆವು. ಕೋರ್ಟ್ ಆವರಣದಲ್ಲೇ ಸಿಸಿಬಿ ಎಂದು ಹೇಳಿ ಕರೆದೊಯ್ದಿದ್ದಾರೆ. ಮೈಸೂರಿನ ಮನೆಯಲ್ಲಿ ಪೊಲೀಸರಿಂದ ಪರಿಶೀಲನೆ ನಡೆದಿದೆ. ಸರ್ಚ್ ವಾರೆಂಟ್ ಪಡೆದು 10 ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಬಿ ಕಚೇರಿಯಲ್ಲಿ ತಂದೆ ಬಗ್ಗೆ ವಿಚಾರಿಸಿದರೇ ಗೊತ್ತಿಲ್ಲ ಅಂತಾರೆ. ಸಿಸಿಬಿ ಕಚೇರಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದರು.
ಡಿ.ಬಿ ನಟೇಶ್ ಸಂಬಂಧ ಒಂದು ಆಡಿಯೋ ಬಿಡುಗಡೆ ಮಾಡಲಾಗಿತ್ತು. ಆ ಆಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಬೇಕು. ಅದರ ಬಗ್ಗೆ ತನಿಖೆ ಮಾಡುವ ಬದಲು ನನ್ನ ತಂದೆ ಬಂಧಿಸಿದ್ದಾರೆ. ಪಾಸ್ ಓವರ್ ಆದಾಗ ಕೋರ್ಟ್ ನಿಂದ ಹೊರಬಂದು ನಿಂತಿದ್ದೆವು. ಈ ವೇಳೆ ಅಲ್ಲಿಗೆ ಬಂದಿದ್ದವರು ಸಿಸಿಬಿ ಪೊಲೀಸರೆಂದು ಕರೆದೊಯ್ದರು. ತಂದೆ ಸ್ನೇಹಮಯಿ ಕೃಷ್ಣ ಅವರನ್ನು ಇನೋವಾ ಕಾರಿನಲ್ಲಿ ಕರೆದೊಯ್ಯಿದ್ದಾರೆ. ನಮ್ಮ ತಂದೆ ಬಗ್ಗೆ ಮಾಹಿತಿ ನೀಡದಿರುವುದರಿಂದ ಆಂತಕವಿದೆ ಎಂದರು.
ಸೋಷಿಯಲ್ ಮೀಡಿಯಾದಲ್ಲಿ ದೂರುದಾರನ ಬಗ್ಗೆ ಅಪಪ್ರಚಾರ: CCBಯಿಂದ ಸ್ನೇಹಮಯಿ ಕೃಷ್ಣ ಅರೆಸ್ಟ್
ಸೋಷಿಯಲ್ ಮೀಡಿಯಾದಲ್ಲಿ ದೂರುದಾರನ ಬಗ್ಗೆ ನಕಲಿ ದಾಖಲೆ, ಧ್ವನಿ ಕ್ಲಿಪ್ ಅಪ್ ಲೋಡ್ ಮಾಡಿ ಅಪಪ್ರಚಾರ ಮಾಡಿದ್ದರ ಹಿನ್ನಲೆಯಲ್ಲಿ ಮುಡಾ ಪ್ರಕರಣದ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಸಿಸಿಬಿಯಿಂದ ಮಾಹಿತಿ ಹಂಚಿಕೊಂಡಿದ್ದು, ದೂರದಾರರಾದ ಡಿ.ಬಿ ನಟೇಶ್ ಕೆಎಎಸ್ ಹಿರಿಯ ಅಧಿಕಾರಿ ಹಾಗೂ ಈ ಹಿಂದೆ MUDA ಆಯುಕ್ತರು ನೀಡಿದ ದೂರಿನ ಮೇರೆಗೆ, ಮೈಸೂರು ನಿವಾಸಿ ಸ್ನೇಹಮಯಿ ಕೃಷ್ಣ ಎಂಬವರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ದೂರದಾರರ ಫೋಟೋ ಹಾಗೂ ನಕಲಿ ದಾಖಲೆಗಳನ್ನು ಹಾಗೂ ಧ್ವನಿ ಕ್ಲಿಪ್ ಅನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿ ದೂರದಾರರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿರುವ ಕುರಿತು ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಿನಾಂಕ:18.02.2026 ರಂದು ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ ಎಂದಿದೆ.
ತನಿಖೆ ವೇಳೆ ತನಿಖಾಧಿಕಾರಿಗಳು ದೂರದಾರರಿಂದ ಹಾಗೂ ಸಾಮಾಜಿಕ ಜಾಲತಾಣದಿಂದ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಧ್ವನಿ ಕ್ಲಿಪ್ ಕುರಿತು ತನಿಖೆ ನಡೆಸಿದ್ದಾರೆ. ಮಾನ್ಯ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಆರೋಪಿಯ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಶೋಧ ಕಾರ್ಯ ನಡೆಸಲಾಗಿದೆ. ಇದಲ್ಲದೆ, ಈ ಪ್ರಕರಣದ ಆರೋಪಿ ಸ್ನೇಹಮಯಿ ಕೃಷ್ಣ ಮೈಸೂರು ಅವರಿಗೆ ನೋಟಿಸ್ ಜಾರಿ ಮಾಡಿ ಆರೋಪಿಯನ್ನು ಠಾಣೆಗೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂಬುದಾಗಿ ಸಿಸಿಬಿ ತಿಳಿಸಿದೆ.
BREAKING: ‘ಸಫಾರಿ ಪ್ರಿಯ’ರಿಗೆ ಗುಡ್ ನ್ಯೂಸ್: ನಾಳೆಯಿಂದ ಸ್ಥಗಿತಗೊಂಡಿದ್ದ ‘ಸಫಾರಿ ಪುನರಾರಂಭ’
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದಲೇ LKG, UKG ತರಗತಿ ಆರಂಭ: ಉಚಿತ ಅಭ್ಯಾಸ ಪುಸ್ತಕ ವಿತರಣೆ








