ಬೆಂಗಳೂರು: 2025-26ನೇ ಸಾಲಿನ ದಸರಾ ಕ್ರೀಡಾಕೂಟವನ್ನು ಸಂಘಟಿಸುವ ಕುರಿತಂತೆ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರವು ಪ್ರಕಟಿಸಲಾಗಿದೆ.
ಈ ಕುರಿತಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಇಲಾಖೆಯ ವತಿಯಿಂದ 2025-26ನೇ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷರು ಮತ್ತು ಮಹಿಳೆಯರಿಗಾಗಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಮೈಸೂರಿನಲ್ಲಿ ದಿನಾಂಕ 22-09-2025ರಿಂದ 25-09-2025ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗುವುದು. ತಾಲ್ಲೂಕು, ಜಿಲ್ಲಾ, ವಿಭಾಗ ಮಟ್ಟದ ಸ್ಪರ್ಧೆಗಳನ್ನು ಈ ಕೆಳಕಂಡ ದಿನಾಂಕಗಳ ಒಳಗಾಗಿ ಏರ್ಪಡಿಸಬೇಕಾಗಿರುತ್ತದೆ ಎಂದು ಹೇಳಿದ್ದಾರೆ.
- ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಸ್ಪರ್ಧೆಗಳನ್ನು ದಿನಾಂಕ 25-08-2025ರ ಒಳಗಾಗಿ ನಡೆಸುವುದು.
- ಜಿಲ್ಲಾ ಮಟ್ಟದ ದಸರಾ ಕ್ರೀಡಾ ಸ್ಪರ್ಧೆಗಳನ್ನು ದಿನಾಂಕ 01-09-2025ರ ಒಳಗಾಗಿ ನಡೆಸುವುದು.
- ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ದಿನಾಂಕ 10-09-2025ರ ಒಳಗಾಗಿ ನಡೆಸುವುದು.
ಬೆಂಗಳೂರು ನಗರ ವಿಭಾಗ ಹಾಗೂ ಬೆಂಗಳೂರು ಗ್ರಾಮಾಂತರ ವಿಭಾಗ, ಕಲಬುರ್ಗಿ ವಿಭಾಗ, ಮೈಸೂರು ವಿಭಾಗ ಹಾಗೂ ಬೆಳಗಾವಿ ವಿಭಾಗ ಎಂಬುದಾಗಿ 5 ವಿಭಾಗಗಳಾಗಿ ವಿಂಗಡಿಸಿ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ.
CRIME NEWS: ರಾಜ್ಯದಲ್ಲಿ ಮತ್ತೊಂದು ‘ಡಿಜಿಟಲ್ ಅರೆಸ್ಟ್’ ಕೇಸ್: ಬರೋಬ್ಬರಿ 89.90 ಲಕ್ಷ ಕಳೆದುಕೊಂಡ ವ್ಯಕ್ತಿ
ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ