ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾಗರದ ಶ್ರೀಗಂಧದ ಕಲಾ ಸಂಕೀರ್ಣದ ಶಿಲ್ಪಗುರುಕುಲದ ಶಿಕ್ಷಣ ಕೊಠಡಿಗಳು, ವಸತಿ ಗೃಹಗಳು ಹಾಗೂ ಉಪಹಾರ ಗೃಹದ ದುರಸ್ತಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಕಾರ್ಯಾದೇಶವನ್ನು ಮಾಡಿ ಶಿವಮೊಗ್ಗದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.
ಸಾಗರದ ಶ್ರೀಗಂಧದ ಕಲಾ ಸಂಕೀರ್ಣದ ಶಿಲ್ಪಗುರುಕುಲದ ಉಪಹಾರ ಕೊಠಡಿಯ ದುರಸ್ಥಿಗಾಗಿ 8.60 ಲಕ್ಷ ಬಿಡುಗಡೆ ಮಾಡಿದ್ದರೇ, ಕ್ಲಾಸ್ ರೂಮ್, ರೂಮ್ ಪಾರ್ಟೀಷನ್ ಗಾಗಿ ರೂ.34.80 ಲಕ್ಷವನ್ನು, ಗೆಸ್ಟ್ ಹಾಸ್ಟೆಲ್ ಬ್ಲಾಕ್-1 ದುರಸ್ಥಿಗೆ 7.80 ಲಕ್ಷ, ಗೆಸ್ಟ್ ಹಾಸ್ಟೆಲ್ ಬ್ಲಾಕ್-2 ದುರಸ್ಥಿಗೆ 7.80 ಲಕ್ಷ ಹಾಗೂ ಗೆಸ್ಟ್ ಹಾಸ್ಟೆಲ್ ಬ್ಲಾಕ್-3 ದುರಸ್ಥಿಗೆ 6.80 ಲಕ್ಷ ಸೇರಿದಂತೆ ಒಟ್ಟು 65.80 ಲಕ್ಷ ಹಣವನ್ನು ಮಂಜೂರು ಮಾಡಲಾಗಿದೆ.
ಈ ಕಾಮಗಾರಿಯನ್ನು ಶಿವಮೊಗ್ಗದ ನಿರ್ಮಿತಿ ಕೇಂದ್ರದವರಿಗೆ ರೂ.65.80 ಲಕ್ಷಗಳಿಗೆ ವಹಿಸಲು ತಿಳಿಸಲಾಗಿದೆ. ಸದರಿ ಕಾರ್ಯಾದೇಶದ ಅನ್ವಯ ಅಂದಾಜು ಪಟ್ಟಿಯನ್ನು ನಿಗಮದಿಂದ ಅನುಮೋದಿಸಿ, ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ, ಕಾರ್ಯಾದೇಶವನ್ನು ಈ ಮೂಲಕ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: SSLC, ದ್ವಿತೀಯ PUC ಪರೀಕ್ಷೆಗಳಲ್ಲಿ ಉತ್ತೀರ್ಣತಾ ಅಂಕ ಬದಲಾವಣೆ: ಇಷ್ಟು ಬಂದ್ರೆ ಪಾಸ್, ಅಧಿಕೃತ ಆದೇಶ
ಸಾಗರದ ‘ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಹಾಲಿ ಸಮಿತಿ ವಿರುದ್ಧ ‘ನ್ಯಾಯಾಂಗ ನಿಂದನೆ’ ಅರ್ಜಿ