ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಾಂತಿಯುತ ಚರ್ಮ ಪಡೆಯಲು ಬರೀ ಫೇಸ್ ಪ್ಯಾಕ್, ಮಸಾಜ್‌ಗಳನ್ನು ಮಾಡಿಕೊಂಡರೆ ಸಾಲದು. ದೇಹಕ್ಕೆ ಕೆಲ ಪೋಷಕಾಂಶಗಳು ಅಗತ್ಯ. ದೇಹದ ಒಳಗಿನಿಂದ ನಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳಬೇಕು. ಹಾಗಿದ್ದರೆ ಮಾತ್ರ ತ್ವಚೆ ದೀರ್ಘ ಕಾಲದವರೆಗೂ ಆರೋಗ್ಯವಾಗಿರುತ್ತದೆ.
ಹೆಚ್ಚು ಹೆಚ್ಚು ನೀರು ಸೇವಿಸಿದರೆ ತ್ವಚೆ ತುಂಬಾ ಆರೋಗ್ಯವಾಗಿರುತ್ತದೆ. ದಿನವೂ ಸುಮಾರು ಐದು ಲೀಟರ್ ಕುಡಿಯಿರಿ. ನೀರು ಹೆಚ್ಚು ಸೇವಿಸಿದರೆ ತ್ವಚೆಯನ್ನು ಸದಾ ಮಾಯಿಶ್ಚರೈಸ್‌ನಲ್ಲಿರಿಸುತ್ತದೆ. ಇನ್ನು ಹೆಚ್ಚು ನೀರಿನ ಸೇವನೆ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಿ ಈ ಮೂಲಕ ಮೊಡವೆಗಳು ಆಗದಂತೆ ನೋಡಿಕೊಳ್ಳುತ್ತದೆ. ನೀರಿನ ಹೆಚ್ಚು ಸೇವನೆ ದೇಹವನ್ನು ಸದಾ ತೇವಾಂಶದಲ್ಲಿರಿಸುತ್ತದೆ.
ಬದಾಮಿ ಸೇವಿಸಿದರೆ ಚರ್ಮ ಹೊಳೆಯುವ ರೂಪ ಪಡೆದುಕೊಳ್ಳುತದೆ. ಇದರಲ್ಲಿ ಒಮೆಗಾ3 ಅಂಶವಿದ್ದು ಚರ್ಮಕ್ಕೆ ಬೇಕಾದ ಹೆಚ್ಚಿನ ಪ್ರಮಾಣದ ಕೊಬ್ಬಿನಾಮ್ಲ ನೀಡುತ್ತದೆ. ನಿತ್ಯವೂ ನೆನಸಿಟ್ಟ ಎರಡು ಬದಾಮಿ ಸೇವನೆ ತ್ವಚೆಯನ್ನು ಮೃದುವಾಗಿಸುತ್ತದೆ.
ಎಲ್ಲ ಬಗೆಯ ಹಸಿ ತರಕಾರಿ ಸೇವನೆ ದೀರ್ಘ ಕಾಲದವರೆಗೂ ದೇಹ ಹಾಗು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನಿತ್ಯವೂ ಒಂದಲ್ಲ ಒಂದು ಹಸಿ ತರಕಾರಿ ಸೇವಿಸಿದರೆ ಬೇಗ ವಯಸ್ಸಾದಂತೆ ಕಾಣುವುದಿಲ್ಲ. ನಿಮ್ಮ ಚರ್ಮ ಸದಾ ಯಂಗ್ ಆಗಿರುತ್ತದೆ.
ಡಾರ್ಕ್ ಚಾಕೊಲೇಟ್‌ನಲ್ಲಿ ಆಂಟಿ ಆಕ್ಸಿಡೆಂಟ್‌ಗಳು, ಫ್ಲಾವನಾಯ್ಡ್‌ಗಳು ಹೇರಳವಾಗಿವೆ. ಇವು ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಒತ್ತಡದಲ್ಲಿದ್ದರೆ ಸಹಜವಾಗಿ ಚರ್ಮದ ಆರೋಗ್ಯ ಬೇಗ ಹಾಳಾಗುತ್ತದೆ. ಹಾಗಾಗಿ ಡಾರ್ಕ್ ಚಾಕೋಲೇಟ್ ತಿಂದು ಒತ್ತಡ ನಿವಾರಣೆ ಮಾಡಿಕೊಂಡು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಹೆಚ್ಚು ಹಣ್ಣು ತಿನ್ನಿ. ಋತುಮಾನದ ಎಲ್ಲಾ ಹಣ್ಣುಗಳನ್ನು ತಪ್ಪದೇ ಸೇವಿಸಿ. ಸೀಸನಲ್ ಹಣ್ಣುಗಳನ್ನು ಒಂದನ್ನೂ ಮಿಸ್ ಮಾಡಿಕೊಳ್ಳಬೇಡಿ. ಹಣ್ಣುಗಳಲ್ಲಿನ ಹೆಚ್ಚಿನ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಚರ್ಮದ ಮೇಲಿನ ಸುಕ್ಕು, ಕಪ್ಪು ಕಲೆಗಳು, ಮೊಡವೆಗಳನ್ನು ನಿವಾರಣೆ ಮಾಡುವ ಹೆಚ್ಚಿನ ಶಕ್ತಿ ಹಣ್ಣುಗಳಲ್ಲಿ ಇದೆ.
ಮೊಸರಿನಲ್ಲಿ ಹೆಚ್ಚು ಕ್ಯಾಲ್ಸೊಯಂ ಹಾಗು ಪ್ರೋಟೀನ್ ಅಂಶಗಳಿವೆ. ಮೊಸರನ್ನು ಹೆಚ್ಚು ತಿನ್ನುವವರ ಮುಖದ ಚರ್ಮ ಮತ್ತು ತಲೆಕೂದಲನ್ನು ನೋಡಿ. ಮುಖದ ಚರ್ಮ ಚಿಕ್ಕ ಮಕ್ಕಳಂತೆ ಮೃದುವಾಗಿದ್ದು ಹೊಳೆಯುತ್ತಿರುತ್ತದೆ. ಹಾಗು ತಲೆ ಕೂದಲು ತುಂಬಾ ದಟ್ಟವಾಗಿ ಬೆಳೆಯುತ್ತದೆ. ಹೆಚ್ಚು ಮೊಸರು ತಿಂದರೆ ಚರ್ಮದ ಯಾವುದೇ ಕಾಯಿಲೆ ಬರುವುದಿಲ್ಲವೆಂದು ಹೇಳಲಾಗುತ್ತದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.