ತಿರುವನಂತಪುರಂ: ಆ ಯುವಕ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದನು. ಜೀವಾವಧಿ ಶಿಕ್ಷೆ ವಿಧಿಸಿದ್ದಂತ ಆತನನ್ನೇ ಮದುವೆಯಾಗಬೇಕು ಎಂಬುದಾಗಿ ಯುವತಿ ಹಠ ಹಿಡಿದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೇರಳ ಹೈಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಅಪರಾಧಿಗೆ ಮದುವೆಯಾಗಲು 15 ದಿನಗಳು ಪರೋಲ್ ನೀಡಿ ಆದೇಶಿಸಿದೆ.
ಪ್ರಶಾಂತ್ ಎಂಬಾತ ಕೊಲೆ ಪ್ರಕರಣದಲ್ಲಿ ವಿಯ್ಯರು ಜೈಲು ಪಾಲಾಗಿದ್ದರು. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇಂತಹ ಅಪರಾಧಿಯೊಂದಿಗೆ ಯುವತಿಯೊಬ್ಬರ ನಿಶ್ಚಯವು ಕೊಲೆ ಪ್ರಕರಣಕ್ಕೂ ಮುನ್ನ ನಿಶ್ಚಯವಾಗಿತ್ತು. ಹೀಗಾಗಿ ಪರೋಲ್ ಮೂಲಕ ಮದುವೆಗೆ ಅವಕಾಶ ನೀಡುವಂತೆ ಜೈಲು ಅಧೀಕ್ಷಕರಿಗೆ ಪ್ರಶಾಂತ್ ಅರ್ಜಿ ಸಲ್ಲಿಸಿದ್ದನು. ಆದರೇ ಈ ಅರ್ಜಿಯನ್ನು ವಜಾಗೊಳಿಸಲಾಗಿತ್ತು.
ಜೈಲು ಅಧೀಕ್ಷಕರ ನಿರ್ಧಾರ ಪ್ರಶ್ನಿಸಿ ಕೇರಳ ಹೈಕೋರ್ಟ್ ಗೆ ಅರ್ಜಿಯನ್ನು ಪ್ರಶಾಂತ್ ತಾಯಿ ಸಲ್ಲಿಸಿದ್ದರು. ಅದರಲ್ಲಿ ಜುಲೈ.13ರಂದು ಪ್ರಶಾಂತ್ ಮದುವೆ ನಿಶ್ಚಯವಾಗಿದೆ. ಯುವತಿ ಕೂಡ ಆತನೊಂದಿಗೆ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ದಯವಿಟ್ಟು ಪರೋಲ್ ಮೇಲೆ ಮದುವೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ಈ ಮನವಿ ಪರಿಗಣಿಸಿದಂತ ಕೇರಳ ಹೈಕೋರ್ಟ್ ಜುಲೈ.12ರಿಂದ 15 ದಿನಗಳ ಕಾಲ ಕೊಲೆ ಅಪರಾಧಿ ಪ್ರಶಾಂತ್ ಗೆ ಮದುವೆಗಾಗಿ ಪರೋಲ್ ಮಂಜೂರು ಮಾಡಿದೆ. ಜುಲೈ.26ರ ಸಂಜೆ 4 ಗಂಟೆಯ ಒಳಗಾಗಿ ಜೈಲಿಗೆ ಹಿಂದಿರುಗುವಂತೆ ಹೈಕೋರ್ಟ್ ಸೂಚಿಸಿದೆ.
ಅಂದಹಾಗೇ ಮದುವೆ ನಿಶ್ಚಯವಾಗಿ ಜೈಲು ಪಾಲಾಗಿದ್ದಂತ ಪ್ರಶಾಂತ್ ಅನ್ನೇ ಮದುವೆಯಾಗುವುದಾಗಿ ಯುವತಿ ಹಠಕ್ಕೆ ಬಿದ್ದಿದ್ದಳು. ಆತನನ್ನೇ ತಾನು ಪ್ರೀತಿಸುತ್ತಿದ್ದೇನೆ. ನಮ್ಮ ಮದುವೆಗೆ ಅವಕಾಶ ನೀಡುವಂತೆಯೂ ಕೋರ್ಟ್ ಗೆ ಯುವತಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಳು. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ತಿಳಿದಿದ್ದರೂ ಯುವತಿ ಮದುವೆಯಾಗೋದಕ್ಕೆ ಸಿದ್ಧವಾಗಿದ್ದಾಳೆ. ಆಕೆಯ ಧೈರ್ಯವನ್ನು ನಾವು ನಿರ್ಲಕ್ಷ್ಯಿಸುವುದಿಲ್ಲ ಎಂಬುದಾಗಿ ಹೇಳಿ 15 ದಿನಗಳ ಕಾಲ ಪೆರೋಲ್ ಮಂಜೂರು ಮಾಡಿದೆ.
BREAKING: ರಾಜ್ಯದ ‘ಮಹಾನಗರ ಪಾಲಿಕೆ ನೌಕರ’ರ ಪ್ರತಿಭಟನೆ ತಾತ್ಕಾಲಿಕವಾಗಿ ವಾಪಾಸ್
ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ