ಶಿವಮೊಗ್ಗ: ಜಿಲ್ಲೆಯ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನರೇಟರ್ ಕಳ್ಳತನವಾಗಿದ್ದ ಬಗ್ಗೆ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಂತಹ ಜನರೇಟರ್ 62.5 ಕೆವಿ ಸಾಮರ್ಥ್ಯದ್ದು. ಅದು ಹಾಳಾಗಿದ್ದರ ಕಾರಣದಿಂದ ಹೊಸ ಜನರೇಟರ್ ಹಾಕಲಾಗಿತ್ತು. ಸರ್ಕಾರ ನಿಗದಿ ಪಡಿಸಿರುವಂತ ಸ್ಕ್ರಾಪ್ ಪಾಲಿಸಿ ಅನುಸಾರ ಅದರ ಬೆಲೆ ರೂ.92,000 ಎಂಬುದಾಗಿ ಆರೋಗ್ಯ ಇಲಾಖೆಯ ಪತ್ರಗಳಲ್ಲಿನ ವರದಿಗಳಿಂದ ಬಹಿರಂಗವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಳೆಯ ಜನರೇಟರ್ ಕಳ್ಳತನವಾದ ಬಗ್ಗೆ ನಿನ್ನೆ ಸುದ್ದಿಯಾಗಿತ್ತು. ಆ ಬಳಿಕ ಆಡಳಿತ ವೈದ್ಯಾಧಿಕಾರಿ ಡಾ. ಸುರೇಶ್.ಎಲ್ ಅವರು ಸಾಗರ ಪೇಟೆ ಠಾಣೆಗೆ ತೆರಳಿ ಕದ್ದೊಯ್ಯಲಾಗಿರುವಂತ ಜನರೇಟರ್ ಹುಡುಕಿಸಿ ಕೊಡುವಂತೆ, ಕಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.
ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್.ಎಲ್ ನೀಡಿರುವಂತ ದೂರಿನಲ್ಲಿ 65 ಕೆವಿ ಹಳೆಯ ಜನರೇಟರ್ ಕಾಣೆಯಾಗಿರುವುದಾಗಿ ನಮೂದಿಸಿದ್ದಾರೆ. ಆದರೇ ಕಳ್ಳರು ಕದ್ದೊಯ್ದಿರುವಂತ ಜನರೇಟರ್ ಸಾಮರ್ಥ್ಯ 62.5 ಕೆವಿಯದ್ದು ಎಂಬುದಾಗಿ ತಿಳಿದು ಬಂದಿದೆ. ಪ್ರಸ್ತುತದ ಹೊಸ ಬೆಲೆ ವಿವಿಧ ಕಂಪನಿಗಳ ಅನುಸಾರ 2 ರಿಂದ 4 ಲಕ್ಷದವರೆಗೆ ಇದೆ.
ಕದ್ದೊಯ್ದಿರುವುದು ಹಾಳಾದ ಜನರೇಟರ್
ಸಾಗರ ಉಪ ವಿಭಾಗೀಯ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬೆಂಗಳೂರು ಇವರನ್ನು ದಿನಾಂಕ 13/05/2024ರಂದು ಪತ್ರದಲ್ಲಿ ಕೋರಲಾಗಿದೆ.
ಈ ಪತ್ರಕ್ಕೆ ಸರ್ಕಾರವು ದಿನಾಂಕ 28-05-2024ರಂದು ಪ್ರತ್ಯುತ್ತರ ನೀಡಿದ್ದು, ಉಪ ವಿಭಾಗೀಯ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಾಗರ, ಇಲ್ಲಿನ ಅನುಪಯುಕ್ತ ವಸ್ತುಗಳನ್ನು ಹಾಗೂ ಅನುಪಯುಕ್ತ ಡೀಸಲ್ ಜನರೇಟರ್‌ಗಳನ್ನು ವಿಲೇವಾರಿ ಮಾಡಲು ಅಂದಾಜು ಮೊತ್ತ ರೂ.50,000=00ಗಳು ಗಳಗಿಂತ ಹೆಚ್ಚಿಗೆ ಆಗುವುದರಿಂದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ ನಿಗದಿಪಡಿಸಿರುವ ಸಾಮಾನ್ಯ ಆರ್ಥಿಕ ಅಧಿಕಾರ ಪತ್ಯಾಯೋಜನೆ ಮಿತಿ ಮೀರುವುದರಿಂದ ಅನುಪಯುಕ್ತ ವಸ್ತುಗಳನ್ನು ಹಾಗೂ ಅನುಪಯುಕ್ತ ಡೀಸಲ್ ಜನರೇಟರ್‌ಗಳನ್ನು ವಿಲೇವಾರಿ ಮಾಡಲು ಅನುಮೋದನೆಗಾಗಿ ಕೋರಿರುವುದರಿಂದ ನಿಯಮಾನುಸಾರ ಅನುಪಯುಕ್ತ ವಸ್ತುಗಳು ಹಾಗೂ ಡೀಸಲ್ ಜನರೇಟರ್‌ಗಳನ್ನು ವಿಲೇವಾರಿ ಮಾಡಲು ಆರ್ಥಿಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕದ್ದೊಯ್ದಿರುವಂತ 62.5 ಕೆವಿ ಜನರೇಟರ್ ಹಾಳಾಗಿದ್ದು ಎಂಬುದಾಗಿ ಸ್ಪಷ್ಟವಾಗುತ್ತಿದೆ.
ಸರ್ಕಾರದ ಮಾರ್ಗಸೂಚಿ ಪಾಲಿಸಿ ಟೆಂಡರ್ ಕರೆದು ಮಾರಾಟ ಮಾಡಬೇಕಿದ್ದರಿಂದ ತಡ
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 62.5 ಕೆವಿ ಸಾಮರ್ಥ್ಯದ ಜನರೇಟರ್ ಹಾಳಾಗಿದ್ದರಿಂದ ಅದನ್ನು ಬದಲಾಯಿಸಿ, ಬಿಜೆಪಿ ಸರ್ಕಾರದ ಅವಧಿಯಲ್ಲೇ 100 ಕೆವಿ ಸಾಮರ್ಥ್ಯದ ಹೊಸ ಜನರೇಟರ್ ಅಳವಡಿಸಲಾಗಿತ್ತು ಎನ್ನಲಾಗುತ್ತಿದೆ. 62.5 ಕೆವಿ ಜನರೇಟರ್ ಹಾಳಾಗಿದ್ದರಿಂದ ಸರ್ಕಾರದ ನಿಯಮಾನುಸಾರ ಟೆಂಡರ್ ಮೂಲಕ ಸ್ಕ್ರಾಪ್ ಪಾಲಿಸಿಯಂತೆ ಮಾರಾಟ ಮಾಡಲು ಆಸ್ಪತ್ರೆಯ ಹಿಂಭಾಗದಲ್ಲಿ ಇರಿಸಲಾಗಿತ್ತು. ಆದರೇ ಅದು ಕೆಲ ತಾಂತ್ರಿಕ ಕಾರಣಗಳಿಂದ ತಡವಾಗಿದೆ.
ಅಂದಹಾಗೇ ಹಳೆಯ ಜನರೇ ಮೇಲೆ ಹಲವರ ಕಣ್ಣು ಬಿದ್ದಿತ್ತಂತೆ. ನಮಗೆ ಕೊಡಿ, ನಮಗೆ ಕೊಡಿ ಎಂಬುದಾಗಿಯೂ ಕೆಲವರು ದುಂಬಾಲು ಬಿದ್ದಿದ್ದಾಗಿಯೂ ತಿಳಿದು ಬಂದಿದೆ. ತೀರಾ ಗೊತ್ತಿರುವವರೇ ಜನರೇಟರ್ ರಾಜಾರೋಷವಾಗಿ ಕೊಂಡೊಯ್ದಿರೋದಾಗಿ ಹೇಳಲಾಗುತ್ತಿದೆ. ಆ ಬಗ್ಗೆ ಪೊಲೀಸರ ತನಿಖೆಯ ನಂತ್ರ ಕದ್ದೊಯ್ದವರು ಯಾರೆಂಬುದು ಖಚಿತ ಮಾಹಿತಿ ಹೊರ ಬೀಳುವ ನಿರೀಕ್ಷೆಯಿದೆ.
ಸರ್ಕಾರದ ಸ್ಕ್ರಾಪ್ ಪಾಲಿಸಿ ಅನುಸಾರ ಹಳೆಯದಾದ ಜನರೇಟರ್ ಬೆಲೆ ಎಷ್ಟು ಗೊತ್ತಾ.?
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದಿನಾಂಕ 13-05-2025ರಂದು ಅಧಿಕೃತ ಜ್ಞಾಪನ ಪತ್ರದಲ್ಲಿ ಇಲಾಖೆಯ ವ್ಯಾಪ್ತಿಯ ಹಳೆಯ, ಬಳಕೆಯಿಲ್ಲದ ಪೀಠೋಪಕರಣಗಳು ಹಾಗೂ ಉಪಕರಣಗಳು, ಇತರೇ ವಸ್ತುಗಳನ್ನು ವಿಲೇವಾರಿ ಸಂಬಂಧ ಸ್ಕ್ರಾಪ್ ಪಾಲಿಸಿ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
ಆರೋಗ್ಯ ಇಲಾಖೆ ಪ್ರಕಟಿಸಿದಂತ ಸ್ಕ್ರಾಪ್ ಪಾಲಿಸಿ ನಿಯಮದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿನ ಜನರೇಟರ್ 5-25 ಕೆವಿ ವರೆಗೆ ರೂ.25,000 ನಿಗದಿ ಪಡಿಸಿದ್ದರೇ, 30 ರಿಂದ 35 ಕೆವಿ ಹಳೆಯ ಜನರೇಟರ್ ಬೆಲೆ ರೂ.54,000 ಆಗಿದೆ. 50 ರಿಂದ 62.5 ಕೆವಿ ಜನರೇಟರ್ ಬೆಲೆ ರೂ.92,000 ನಿಗದಿ ಪಡಿಸಲಾಗಿದೆ. 100 ರಿಂದ 125 ಕೆವಿ ಸಾಮರ್ಥ್ಯದ್ದು ರೂ.1.10 ಲಕ್ಷ, 200 ರಿಂದ 250 ಕೆವಿ ಜನರೇಟರ್ ಸ್ಕ್ರಾಪ್ ಬೆಲೆ ರೂ.1.62 ಲಕ್ಷ ನಿಗದಿ ಪಡಿಸಲಾಗಿದೆ.
ಜನರೇಟರ್ ಪತ್ತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ
ಇತ್ತ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಹಳಾಗಿದ್ದಂತ ಜನರೇಟರ್ ಕದ್ದೊಯ್ದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಳಾದ ಜನರೇಟರ್ ಕದ್ದೊಯ್ದವರನ್ನು, ಕದ್ದ ಜನರೇಟರ್ ಪತ್ತೆ ಮಾಡುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ಪೊಲೀಸರಿಂದ ಹಳಾದ ಜನರೇಟರ್ ಕದ್ದೊಯ್ದವರ ಪತ್ತೆಗೆ ತನಿಖೆ ಚುರುಕುಗೊಂಡಿದೆ. ಶೀಘ್ರವೇ ಜನರೇಟರ್ ಪೊಲೀಸರು ಪತ್ತೆ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು