ಕೆಎನ್ಎನ್ಸಿನಿಮಾಡೆಸ್ಕ್: `ಶಭ್ಬಾಷ್’ ಚಿತ್ರ ಅತ್ಯಂತ ವೇಗವಾಗಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿದ್ದು, ಶೀಘ್ರದಲ್ಲಿ ಬೆಳ್ಳಿ ತೆರೆಗೆ ದಾಪುಗಾಲು ಇಡಲಿದೆ. ರುದ್ರಶಿವ ಯೋಜನೆಯಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಏಳು ದಿನಗಳ ಚಿತ್ರೀಕರಣ ಮುಗಿಸಿಕೊಂಡು, ಚನ್ನಗಿರಿಯ ಶಾಂತಿಸಾಗರದ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಅಲ್ಲಿನ ಪೌರಾಣಿಕ, ಐತಿಹಾಸಿಕ ಸ್ಥಳಗಳಲ್ಲಿ ಸಾಂಗವಾಗಿ ಚಿತ್ರೀಕರಣ ನೆರವೇರಿದೆ.
ಚನ್ನಗಿರಿಯ ಶಾಂತಿಸಾಗರ ಸೂಳೆಕೆರೆ ಅಂತಲೂ ಕರೆಸಿಕೊಳ್ಳುತ್ತದೆ. ಏಷ್ಯಾ ಖಂಡದಲ್ಲಿಯೇ ಎರಡನೇ ಅತೀ ದೊಡ್ಡ ಕೆರೆ ಎಂಬ ಹೆಗ್ಗಳಿಕೆಯೂ ಶಾಂತಿಸಾಗರಕ್ಕಿದೆ. ಈ ಕೆರೆಗೂ ಹನ್ನೆರಡನೇ ಶತಮಾನಕ್ಕೂ ಎಂದಿಗೂ ಸಡಿಲವಾಗದಂಥಾ ಕೊಂಡಿಗಳಿದ್ದಾವೆ. ಸ್ವರ್ಗಾವತಿ ಪಟ್ಟಣದ ದೊರೆ ವಿಕ್ರಮರಾಜನ ಸುಪುತ್ರಿ ಶಾಂತವ್ವ ತನಗಾದ ಅವಮಾನಕ್ಕೆ ಪ್ರತಿಭಟನೆಯ ಸ್ವರೂಪದಲ್ಲಿ ಈ ಬೃಹತ್ ಕೆರೆಯನ್ನು ಸೃಷ್ಟಿಸಿದಳೆಂಬ ಪ್ರತೀತಿ ಇದೆ.
ಇಲ್ಲಿಯೇ ಸರ್ ಎಂ ವಿಶ್ವೇಶ್ವರಯ್ಯ ಕಟ್ಟಿಸಿರುವ ಸೇತುವೆಯೊಂದು ಪ್ರಧಾನ ಆಕರ್ಷಣೆ. ಎರಡು ಬೆಟ್ಟಗಳನ್ನು ಸೇರಿಸಿ ಈ ಸೇತುವೆಯನ್ನು ಕಟ್ಟಿಸಲಾಗಿದೆ. ಈವತ್ತಿಗೂ ಅಚ್ಚರಿಯಾಗಿ ಕಾಣಿಸುವ ಈ ಸೇತುವೆಯ ಮೇಲೆ ಶಭ್ಬಾಷ್ ಚಿತ್ರೀಕರಣ ನಡೆಸಲಾಗಿದೆ. ಇದಲ್ಲದೇ ಈ ಭಾಗದಲ್ಲಿರುವ ಪ್ರಸಿದ್ಧ ದೇವಾಲಯ, ಹಳ್ಳಿಗಳಲ್ಲಿ ನಾಯಕ ನಾಯಕಿಯ ಪೋಷನ್ನಿನ ಚಿತ್ರೀಕರಣ ನಡೆಸಲಾಗಿದೆ. ಇಂಥಾದ್ದೊಂದು ಸುಂದರ ವಾತಾವರಣದಲ್ಲಿ ಅಚ್ಚುಕಟ್ಟಾಗಿ ಮೊದಲನೇ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಶಭ್ಬಾಷ್ ಆಕ್ಷನ್ ಡ್ರಾಮಾ ಜಾನರಿನ ಸಿನಿಮಾ.ಶಕಗಳಿಗೂ ಹೆಚ್ಚು ಕಾಲ ದಿಗ್ಗಜ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ, ಒಂದೊಳ್ಳೆ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರಂತೆ. ಶಿವಮಣಿ, ಅಯ್ಯಪ್ಪ ಶರ್ಮಾ, ಪಲ್ಲಕ್ಕಿ ರಾಧಾಕೃಷ್ಣರಂಥಾ ನಿರ್ದೇಶಕರೊಂದಿಗೆ ಕಾರ್ಯ ನಿರ್ವಹಿಸಿದ್ದ ರುದ್ರಶಿವ, ಓಂ ಸಾಯಿಪ್ರಕಾಶ್ ನಿರ್ದೇಶನದ ಗಂಗ ಎಂಬ ಚಿತ್ರದಲ್ಲಿಯೂ ಕೆಲಸ ಮಾಡಿದ್ದರು.
ರವೀಂದ್ರ ಸೊರಗಾವಿ ಹಾಗೂ ಶಮಿತಾ ಮಲ್ನಾಡ್ ಕಂಠಸಿರಿಯಲ್ಲಿ ಒಂದು ಗೀತೆ, ಇಂದೂ ನಾಗರಾಜ್ ಹಾಗೂ ವ್ಯಾಸರಾಜ್ಕಾಂ ಬಿನೇಷನ್ ನಲ್ಲಿ ಒಂದು ಹಾಡು, ವಿಜಯ್ ಪ್ರಕಾಶ್ ಮತ್ತು ಅನುರಾಧ್ ಭಟ್ ಧ್ವನಿಯಲ್ಲಿ ಮತ್ತೊಂದು ಸುಮಧುರ ಗೀತೆ, ಜೋಗಿ ಪ್ರೇಮ್, ನವೀನ್ ಸಜ್ಜು ಕೂಡ ಶಬ್ಬಾಷ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರಂತೆ.