ಬೆಂಗಳೂರು: ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಂದ ಹಾಗೇ ಐತಿಹಾಸಿಕ, ಸುಪ್ರಸಿದ್ದ ಕರಗವು ಏಪ್ರಿಲ್ 15ರಿಂದ 25ರವರೆಗೆ ನಡೆಯಲಿದೆ. ತಿಗಳರಪೇಟೆಯಲ್ಲಿನ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 25ರವರೆಗೆ ನಡೆಯುವ ಜಾತ್ರಾ ಮಹೋತ್ಸವವು ಲಕ್ಷಾಂತರ ಜನರನ್ನು ಆಕರ್ಷಿಸಲಿದೆ.
ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು: ಕಳೆದ 5 ವರ್ಷಗಳಲ್ಲಿಯೇ ಗರಿಷ್ಠ ಉಷ್ಣಾಂಶ
ನಿಮ್ಮ ಪಕ್ಷದಲ್ಲಿ 261 ರೌಡಿಗಳಿದ್ದಾರೆ: ಮೋದಿ ವಿರುದ್ಧ ಸ್ಟಾಲಿನ್ ಆರೋಪ
Israel-Hamas War: ಗಾಝಾದಲ್ಲಿ ‘ಫೆಲೆಸ್ತೀನ್’ ಸಾವಿನ ಸಂಖ್ಯೆ 32,705ಕ್ಕೆ ಏರಿಕೆ
ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಧ್ವಜಾರೋಹಣದ ಜೊತೆಗೆ ಏಪ್ರಿಲ್ 15ರ ರಾತ್ರಿ ಕರಗ ಪ್ರಾರಂಭವಾಗಲಿದೆ. ನಿತ್ಯ ಬೆಳಗ್ಗೆ ಮತ್ತು ರಾತ್ರಿ ಪೂಜೆಗಳು ಜರುಗಲಿದೆ. ಏ.20ರಂದು ಹೆಣ್ಣುಮಕ್ಕಳಿಂದ ಆರತಿ ದೀಪ ಹೊತ್ತು ತರುವ ಕಾರ್ಯಕ್ರಮವಿದೆ. 21ರಂದು ಹಸಿ ಕರಗ ಮಹೋತ್ಸವ, 22ಕ್ಕೆ ಪೊಂಗಲ್ ಸೇವೆ, 23ರ ಚೈತ್ರ ಪೂರ್ಣಿಮೆ ದಿನ ಮುಖ್ಯ ಕರಗ ಮಹೋತ್ಸವ ಜರುಗಲಿದೆ. ಏ.24ಕ್ಕೆ ಗಾವು ಹಾಗೂ 25ರಂದು ಧ್ವಜ ಅವರೋಹಣ ನಡೆಯಲಿದೆ.