ಮಂಡ್ಯ : ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದಿರುವ ದಲಿತ ಯುವಕನ ಸಾವಿಗೆ ಪೋಲೀಸರ ವೈಫಲ್ಯವೇ ಕಾರಣವಾಗಿದೆ ಎಂದು ಆರೋಪಿಸಿ ಮದ್ದೂರು ತಾಲೂಕು ಕಛೇರಿ ಎದುರು ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿದರು.
ಮದ್ದೂರು ಪಟ್ಟಣದ ಪುರಸಭೆ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ತಾಲೂಕು ಕಛೇರಿ ಎದುರು ಜಮಾಯಿಸಿದ ದಲಿತ ಮುಖಂಡರು ಜಿಲ್ಲಾ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ಮಾತನಾಡಿ, ಕತ್ತರಘಟ್ಟ ಗ್ರಾಮದ ಯುವಕ ಜಯಕುಮಾರ್ ಸಾವು ವಿದ್ರಾವಕ ಘಟನೆಯಾಗಿದ್ದು, ಜಮೀನಿನ ವಿಚಾರವಾಗಿ ಗಲಾಟೆಯಾಗಿತ್ತು. ಜಯಕುಮಾರ್ ಸಾಯುವ ಮುನ್ನಾ ದಿನ ಪೋಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ವಹಿಸಲಿಲ್ಲ ಹೀಗಾಗಿ ಈ ಕೃತ್ಯಕ್ಕೆ ಪೋಲಿಸರೇ ನೇರ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಸಂಬಂಧ ಪುಟ್ಟ ಪೋಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮವಾಗಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
* ಮೃತ ಜಯಕುಮಾರನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 50 ಲಕ್ಷ ರೂ ಪರಿಹಾರ ನೀಡಬೇಕು.
* ಆತನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು.
* ಕೊಲೆ ಮಾಡಿರುವ ವ್ಯಕ್ತಿಯ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಗಲ್ಲುಶಿಕ್ಷೆ ನೀಡಬೇಕು.
* ಕೊಲೆ ಆರೋಪಿ ರಕ್ಷಿಸಲು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿರುವ ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು.
* ಆತ್ಮಹತ್ಯೆ ಪ್ರಕರಣವನ್ನು ಕೈಬಿಟ್ಟು ಕೊಲೆ ಪ್ರಕರಣವನ್ನು ದಾಖಲಿಸಿ ಮೃತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಂಕರ್, ಮಾದೇಶ್, ಅಂಬರೀಷ್, ಮುತ್ತಯ್ಯ, ಬಸವರಾಜು, ವೆಂಕಟೇಶ್, ಶಿವು, ಆನಂದ್, ಅಣ್ಣೂರು ರಾಜಣ್ಣ, ರಂಗಸ್ವಾಮಿ, ಡಿ.ಕೆ.ಕೃಷ್ಣ, ನಗರಕೆರೆ ಜಗದೀಶ್, ಸಣ್ಣಮ್ಮ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಶಿವಮೊಗ್ಗ: ಪೌರ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು- ಶಾಸಕ ಗೋಪಾಲಕೃಷ್ಣ ಬೇಳೂರು
SHOCKING : ಚಾಮರಾಜನಗರ : ಕಾಂಪೌಂಡ್ ಸರಳಿಗೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!
![ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ : ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ಯಾದಗಿರಿ ಲೋಕಾಯುಕ್ತ ದಾಳಿ ಇನ್ಸ್‌ಪೆಕ್ಟರ್ ಬಂಧನ [Yadgiri Lokayukta Raid Inspector Arrested], ಗುರುಮಠಕಲ್ ಪೊಲೀಸ್ ಭ್ರಷ್ಟಾಚಾರ ಪ್ರಕರಣ [Gurmitkal Police Corruption Case], ವೀರಣ್ಣ ದೊಡ್ಡಮನಿ ಲೋಕಾಯುಕ್ತ ಟ್ರ್ಯಾಪ್ [Veeranna Doddamani Lokayukta Trap]. ಟ್ಯಾಗ್ಸ್ (Tags)](https://kannadanewsnow.com/kannada/wp-content/uploads/2026/05/ಲಂಚ-ಪಡೆಯುವಾಗ-ಲೋಕಾಯುಕ್ತ-ಬಲೆಗೆ-ಬಿದ್ದ-ಗುರುಮಠಕಲ್-300x169.jpg)





![ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ : ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ಯಾದಗಿರಿ ಲೋಕಾಯುಕ್ತ ದಾಳಿ ಇನ್ಸ್‌ಪೆಕ್ಟರ್ ಬಂಧನ [Yadgiri Lokayukta Raid Inspector Arrested], ಗುರುಮಠಕಲ್ ಪೊಲೀಸ್ ಭ್ರಷ್ಟಾಚಾರ ಪ್ರಕರಣ [Gurmitkal Police Corruption Case], ವೀರಣ್ಣ ದೊಡ್ಡಮನಿ ಲೋಕಾಯುಕ್ತ ಟ್ರ್ಯಾಪ್ [Veeranna Doddamani Lokayukta Trap]. ಟ್ಯಾಗ್ಸ್ (Tags)](https://kannadanewsnow.com/kannada/wp-content/uploads/2026/05/ಲಂಚ-ಪಡೆಯುವಾಗ-ಲೋಕಾಯುಕ್ತ-ಬಲೆಗೆ-ಬಿದ್ದ-ಗುರುಮಠಕಲ್-450x253.jpg)

![ಮಂಗಳೂರಿನಲ್ಲಿ ಘೋರ ದುರಂತ : ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಸಾವು ಕಡಬ ಗುಂಡ್ಯಹೊಳೆ ನೀರಿನಲ್ಲಿ ಮುಳುಗಿ ಸಾವು - [Kadaba Gundyahohole Drowning Death]](https://kannadanewsnow.com/kannada/wp-content/uploads/2026/05/ಕಡಬ-ಗುಂಡ್ಯಹೊಳೆ-ವಿದ್ಯಾರ್ಥಿನಿಯರ-ಮೃತದೇಹ-ಪತ್ತೆ-Kadaba-Gundyahohole-Students-Dead-Body-Found-450x253.jpg)