ಉತ್ತರ ಕನ್ನಡ: ಜಿಲ್ಲೆಯ ಜಿಲ್ಲಾಸ್ಪತ್ರೆಯ ಸರ್ಜನ್ ಒಬ್ಬರು ಗುತ್ತಿಗೆದಾರರೊಬ್ಬರಿಂದ 30,000 ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಉತ್ತರ ಕನ್ನಡದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತಲಕರ ಅವರೇ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ವೈದ್ಯರಾಗಿದ್ದಾರೆ. ಗುತ್ತಿಗೆದಾರ ಮೌಸೀರ್ ಅಹ್ಮದ್ ಶೇಖ್ ಎಂಬುವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಹಿಡಿದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಗುತ್ತಿಗೆದಾರ ಮೌಸೀನ್ 8 ತಿಂಗಳ ಹಿಂದೆ 3.5 ಲಕ್ಷ ಹಾಸಿಗೆ ಟೆಂಡರ್ ಪಡೆದಿದ್ದರು. ರೋಗಿಗಳ ಹಾಸಿಗೆ ಟೆಂಡರ್ 75,000 ರೂ ಕಮೀಷನ್ ಗಾಗಿ ಒತ್ತಡ ಹಾಕಿದ್ದರು. 3.5 ಲಕ್ಷ ಹಣ ಬಿಡುಗಡೆ ಮಾಡಲು 75,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ನಿನ್ನೆ 75,000 ಲಂಚದ ಹಣದಲ್ಲಿ ಗುತ್ತಿಗೆದಾರ ಮೌಸೀನ್ ಉತ್ತರ ಕನ್ನಡ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಾನಂದಗೆ 20,000 ನೀಡಿದ್ದರು. ಇಂದು ಜಿಲ್ಲಾಸ್ಪತ್ರೆಯ ತಮ್ಮ ಚೇಂಬರ್ ನಲ್ಲಿಯೇ 30,000 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.
BIG NEWS: ‘SSLC ಪರೀಕ್ಷೆ ಫಲಿತಾಂಶ’ ವೃದ್ಧಿಗೆ ಮಹತ್ವದ ಕ್ರಮ: ಎಲ್ಲಾ ಶಾಲೆಗಳು ಈ ಕ್ರಮ ಅನುಸರಿಸೋದು ಕಡ್ಡಾಯ