ಬೆಂಗಳೂರು: ವಿಧಾನಸೌಧದಲ್ಲಿ 300 ಗ್ರಾಂ ಚಿನ್ನ ಸಿಕ್ಕಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಬಂಗಾರ ವಿಧಾನಸೌಧದಲ್ಲಿ ಹೇಗೆ ಸಿಕ್ಕಿತು. ಯಾರಿಗೆ ಕೊಡಲು ತಂದಿದ್ದರು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. ಹಣ ಕೊಡುವುದರ ಬದಲು ಬಂಗಾರ ಕೊಡಲೆಂದು ತಂದಿದ್ದರೇ? 1.5 ಲಕ್ಷ ಹಣ ಮತ್ತು ಚಿನ್ನವÀನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಎಂದು ಕೇಳಿದರು. ಇದು ಲಂಚಾವತಾರ- ಭ್ರಷ್ಟಾಚಾರದ ಮತ್ತೊಂದು ಉದಾಹರಣೆ ಎಂದು ಟೀಕಿಸಿದರು. ಇದರಲ್ಲಿರುವ ಬೈರತಿ ಸುರೇಶ್ ಅಥವಾ ಇನ್ಯಾರೇ ಇದ್ದರೂ ತನಿಖೆ ಮಾಡಿ. ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ, ಸಚಿವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಶಾಸಕರ ವಿದೇಶ ಪ್ರವಾಸ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಯಾವ್ಯಾವ ಶಾಸಕರು ಯಾರ್ಯಾರ ತಂಡದಲ್ಲಿ ಹೋಗುತ್ತಿದ್ದಾರೆ ಎಂಬುದು ಕುತೂಹಲದ ವಿಷಯ. ಡಿ.ಕೆ.ಶಿವಕುಮಾರ್ ಕಡೆಯವರು ಯಾರ ಜೊತೆ ಯಾವ ದೇಶಕ್ಕೆ ಹೋಗುತ್ತಿದ್ದಾರೆ? ಸಿದ್ದರಾಮಯ್ಯನವರ ಕಡೆಯವರು ಯಾರ ಜೊತೆ ಯಾವ ದೇಶಕ್ಕೆ ಹೋಗುತ್ತಿದ್ದಾರೆ? ಅಲ್ಲಿ ಹೋಗಿ ಏನು ಮಾಡುತ್ತಾರೆ? ಇದೇನು ಶಾಸಕರ ಸಂಖ್ಯೆ ಮಾಡಿಕೊಳ್ಳುವ ತಂತ್ರವೇ? ಏನೆಂದು ತಿಳಿಯುತ್ತಿಲ್ಲ ಎಂದರು. ಬಜೆಟ್ ಅಧಿವೇಶನದ ನಂತರ ಯಾರು ಸಿಎಂ ಎಂಬುದು ಕುತೂಹಲದ ವಿಷಯವಾಗಿದೆ. ಇದರ ನಡುವೆ ರಾಜ್ಯದ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂದು ಆಕ್ಷೇಪಿಸಿದರು.
ವಂದೇ ಮಾತರಂ ಕುರಿತ ಆದೇಶಕ್ಕೆ ಬಿಜೆಪಿ ಸ್ವಾಗತ
ದೇಶಭಕ್ತಿ ನಿರ್ಮಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಮಹಾನ್ ಕ್ರಾಂತಿ ಗೀತೆ ಆಗಿದ್ದ ವಂದೇ ಮಾತರಂ ಗೆ ರಾಷ್ಟ್ರಗೀತೆಯಾದ ಜನಗಣದ ಸರಿಸಮಾನ ಗೌರವ ಕೊಡುವಂತೆ ಕೇಂದ್ರ ಸರಕಾರವು ಆದೇಶ ಹೊರಡಿಸಿದೆ. ವಂದೇ ಮಾತರಂ ಗೆ ಇವತ್ತು 150 ವರ್ಷ ತುಂಬಿದೆ. ವಂದೇ ಮಾತರಂ ಗೆ ಈ ಸ್ಥಾನಮಾನ ಕೊಟ್ಟಿರುವುದುÀ ಇಡೀ ದೇಶ, ಸ್ವಾತಂತ್ರ್ಯ ಹೋರಾಟಗಾರರಿಗೆ ಒಳ್ಳೆಯ ಸುದ್ದಿ ಎಂದು ವಿಶ್ಲೇಷಿಸಿದರು. ಈ ಕ್ರಮವನ್ನು ಬಿಜೆಪಿ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದರು.








