ಬೆಂಗಳೂರು ಶಾಲಾ ಶಿಕ್ಷಣ ಇಲಾಖೆಯು 2024-25ನೇ ಶೈಕ್ಷಣಿಕ ಸಾಲಿನ ರಾಜ್ಯಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕ ಚಟುವಟಿಕೆಗಳ ಕ್ರಿಯಾ ಯೋನೆ/ ಮಾರ್ಗಸೂಚಿ ಅನುಷ್ಠಾನಗೊಳಿಸುವ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೊದಲನೇ ಅವಧಿಯು 2024ರ ಮೇ 29ರಿಂದ ಅಕ್ಟೋಬರ್ 2ರವರೆಗೆ ಹಾಗೂ ಎರಡನೇ ಅವಧಿಯು ಅ.21ರಿಂದ 2025ರ ಏ.10ರವರೆಗೆ ಶಾಲಾ ಕರ್ತವ್ಯದ ದಿನಗಳನ್ನು ನಿಗದಿ ಮಾಡಿದೆ. ಹಾಗೆಯೇ, ಅ.3ರಿಂದ 20ರವರೆಗೆ ದಸರಾ ರಜೆ, 2025ರ ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆಯನ್ನು ನಿಗದಿ ಮಾಡಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. 244 ಶಾಲಾ ಕರ್ತವ್ಯದ ದಿನಗಳು ಲಭ್ಯವಾಗಲಿವೆ. ಈ ವಾರ್ಷಿಕ ಮಾರ್ಗಸೂಚಿಯಲ್ಲಿ ಮಾಸಿಕ ಪಾಠ ಹಂಚಿಕೆ, ಪಠ್ಯತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ ಸೇರಿ ಇತರೆ ಯೋಜನೆಗಳನ್ನು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
Subscribe to Updates
Get the latest creative news from FooBar about art, design and business.