Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದವರಿಗೆ ಆಸರೆ: ಏರ್ ಇಂಡಿಯಾ, ಇಂಡಿಗೋದಿಂದ ವಿಶೇಷ ವಿಮಾನಗಳ ಹಾರಾಟ; ಇಲ್ಲಿದೆ ಸಂಪೂರ್ಣ ಪಟ್ಟಿ!

11/03/2026 7:44 AM

ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ ‘ಎಸ್ಮಾ’ ಜಾರಿಗೊಳಿಸಿದ ಕೇಂದ್ರ ಸರ್ಕಾರ

11/03/2026 7:32 AM

ಭಾರತ ಒಂದೆರೆಡಲ್ಲ 40 ದೇಶಗಳಿಂದ ‘ಕಚ್ಚಾ ತೈಲ’ ಆಮದು ಮಾಡಿಕೊಳ್ತಿದೆ ; ಪಟ್ಟಿ ಇಲ್ಲಿದೆ.!

11/03/2026 7:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾದಂಬರಿಕಾರ ಭಾರತೀಸುತ ಅವರ ಪುತ್ರಿ, ಖ್ಯಾತ ಪತ್ರಕರ್ತೆ ಕುಸುಮಾ ಶಾನುಭಾಗ ಇನ್ನಿಲ್ಲ
KARNATAKA

ಕಾದಂಬರಿಕಾರ ಭಾರತೀಸುತ ಅವರ ಪುತ್ರಿ, ಖ್ಯಾತ ಪತ್ರಕರ್ತೆ ಕುಸುಮಾ ಶಾನುಭಾಗ ಇನ್ನಿಲ್ಲ

By kannadanewsnow0922/06/2025 7:17 PM

ಬೆಂಗಳೂರು: ಪ್ರಜಾವಾಣಿಯಲ್ಲಿದ್ದ, ಸ್ವಯಂ ನಿವೃತ್ತಿ ಪಡೆದಿದ್ದ ಕುಸುಮಾ ಶಾನಭಾಗ ಇಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ಕ್ಯಾನ್ಸರ್ ಆಗಿದ್ದಾಗ ಅದರ ವಿರುದ್ಧ ಹೋರಾಡಿ ಗೆದ್ದವರು. ಅವರ ಕುರಿತು ಪತ್ರಕರ್ತನ ಅನುಭವಗಳು ಸರಣಿಯಲ್ಲಿ ಬರೆದುದು ಇಲ್ಲಿದೆ.

ಕೆಲ ವರ್ಷಗಳ ಹಿಂದೆ ಬೆಂಗಳೂರಿನಿಂದ ಮೈಸೂರಿಗೆ ರೈಲಲ್ಲಿ ಹೊರಟಿದ್ದೆ. ನಾಲ್ಕಾರು ಪತ್ರಿಕೆಗಳನ್ನು ಓದುವುದು ನೋಡಿದ ಸಹಪ್ರಯಾಣಿಕರೊಬ್ಬರು ಪರಿಚಯಿಸಿಕೊಂಡು, ‘ಪತ್ರಕರ್ತರಾ?’ ಕೇಳಿದರು.

‘ಹೌದು’ ಎಂದೆ.

‘ಮಂಡ್ಯದವನು. ಕುಸುಮಾ ಶಾನಭಾಗ ಗೊತ್ತಾ?’ ಕೇಳಿದರು.

‘ಗೊತ್ತು ಸರ್. ಅವರ ಸಹೋದ್ಯೋಗಿ’ ಎಂದೆ.

‘ಅವರು ಪ್ರಜಾವಾಣಿಯ ಮಂಡ್ಯದ ವರದಿಗಾರರಾಗಿದ್ದರು’

‘ಗೊತ್ತು ಸರ್’ ಎಂದೆ.

‘ಪ್ರಾಮಾಣಿಕ, ದಿಟ್ಟ ಪತ್ರಕರ್ತೆ’ ಎಂದು ಮೆಚ್ಚುಗೆಯಾಡಿದರು.

‘ಕೇಳಿದ್ದೆ ಸರ್. ನಿಮಗೆ ಗೊತ್ತಿದ್ದುದು ಹೇಳಿ ದಯವಿಟ್ಟು’ ಕೇಳಿದೆ.

ಕುಸುಮಾ ಶಾನಭಾಗ ಅವರು ಮಂಡ್ಯದಲ್ಲಿ ಪ್ರಜಾವಾಣಿಯ ವರದಿಗಾರರಾಗಿದ್ದ ಸಂದರ್ಭ. ವಕೀಲರೂ ಲಂಕೇಶ್ ಪತ್ರಿಕೆಯ ವರದಿಗಾರರೂ ಆಗಿದ್ದ ಕಂಚನಹಳ್ಳಿ ಗಂಗಾಧರ ಮೂರ್ತಿ ಅವರ ಕೊಲೆಯಾಯಿತು. ಕೊಲೆಗೆ ಸಂಬಂಧಿಸಿದಂತೆ ಆರೋಪಿಯೆಂದು ಆಗ ಶಾಸಕರಾಗಿದ್ದವರಿಗೆ ಕೋಳ ಹಾಕಿ ಬಂಧಿಸಿದ ಫೋಟೋವನ್ನು ತೆಗೆದವರು ಕುಸುಮಾ ಶಾನಭಾಗ. ಆಗ ಅವರು ತಮ್ಮ ಲೂನಾದಲ್ಲಿ ಓಡಾಡುತ್ತಿದ್ದರು. ಗಲ್ಲಿಗಳನ್ನು ಸುತ್ತಿಕೊಂಡು ಹೋಗಿ ಶಾಸಕರಿಗೆ ಕೋಳ ಹಾಕಿದ ಫೋಟೋ ತೆಗೆದರು. ಅವರು ಫೋಟೋ ತೆಗೆಯಬಾರದೆಂದು ಶಾಸಕರ ಕಡೆ ಬೆನ್ನತ್ತಿದವರಿಂದ ತಪ್ಪಿಸಿಕೊಂಡಿದ್ದರು. ಶಾಸಕರನ್ನು ಬಂಧಿಸಿದ ಸುದ್ದಿ ಪ್ರಜಾವಾಣಿಯ ಮೊದಲ ಪುಟದಲ್ಲಿ ಪ್ರಕಟವಾಗಿತ್ತು. ತರುವಾಯ ಶಾಸಕರು ಆರೋಪಮುಕ್ತರಾದರು.

ಇನ್ನೊಂದು ಘಟನೆ; ಮಂಡದ ಸಕ್ಕರೆ ಕಾರ್ಖಾನೆಯವರು ಕಬ್ಬು ಅರೆಯಲು ಆರಂಭಿಸಿದ ಮೇಲೆ ಹಾಗೂ ಸಕ್ಕರೆ ಉತ್ಪಾದನೆಯಾದ ಮೇಲೆ
ಪತ್ರಿಕಾಗೋಷ್ಠಿ ಕರೆಯುತ್ತಿದ್ದರು.

ಆಗ ಸ್ಥಿರ ದೂರವಾಣಿ (ಲ್ಯಾಂಡ್ ಲೈನ್) ಕಾಲ. ದಿನದ ಸುದ್ದಿಗಳನ್ನು ಕಳಿಸಿದ ಮೇಲೆ ಕುಸುಮಾ ಅವರು ಬೆಂಗಳೂರಿನ ಮುಖ್ಯ ಕಚೇರಿಗೆ ಫೋನ್ ಮಾಡಿದರು. ಫೋನ್ ತೆಗೆದುಕೊಂಡವರು ಮರು ದಿನದ ವಿಶೇಷವೇನೆಂದು ಕೇಳಿದಾಗ ಸಂಜೆ ಸಕ್ಕರೆ ಕಾರ್ಖಾನೆಯ ಪತ್ರಿಕಾಗೋಷ್ಠಿ ಇರುವ ಕುರಿತು ತಿಳಿಸಿದ್ದಾರೆ.

ಮರುದಿನ ಬೆಳಿಗ್ಗೆ 11 ಗಂಟೆಗೆ ಒಂದಿಬ್ಬರು ಸ್ಥಳೀಯ ಪತ್ರಕರ್ತರು, ಸಕ್ಕರೆ ಕಾರ್ಖಾನೆಯವರ ಪತ್ರಿಕಾಗೋಷ್ಠಿ ರದ್ದುಪಡಿಸಿರುವುದು ಯಾಕೆಂದು ಕುಸುಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರ್ಖಾನೆಯ ಎಂ.ಡಿಯವರ ಸಹಾಯಕರು, ಕುಸುಮಾ ಅವರಿಂದ ಪತ್ರಿಕಾಗೋಷ್ಠಿ ರದ್ದಾಗಿದೆ ಎಂದು ತಿಳಿಸಿದಾಗ ಪತ್ರಕರ್ತರು ಸಿಟ್ಟಾಗಿದ್ದಾರೆ. ರದ್ದಾಗಿದ್ದಕ್ಕಿಂತ ಕಾರ್ಖಾನೆಯವರೇ ಪತ್ರಿಕಾಗೋಷ್ಠಿಯಲ್ಲಿ ಕಾಣಿಕೆಯಾಗಿ ಕೊಡುತ್ತಿದ್ದ ಒಳ್ಳೆಯ ಮದ್ಯ ಮಿಸ್ ಆಯಿತೆಂದು ಸಿಟ್ಟಿಗೆದ್ದರು. ಆಗ ಕುಸುಮಾ ಅವರು ವಿಚಾರಿಸಿದಾಗ ಗೊತ್ತಾಯಿತು. ಬೆಂಗಳೂರಿನ ಸುದ್ದಿ ಸಂಸ್ಥೆಯ ಪತ್ರಕರ್ತ ಹಾಗೂ ಹಿಂದಿನ ದಿನ ಫೋನ್ ತೆಗೆದ ಪತ್ರಕರ್ತರು ಕಾರ್ಖಾನೆಯ ಮುಖ್ಯ ಕಚೇರಿಯ ಕಾರಿನಲ್ಲಿ ಬೆಂಗಳೂರಿನಿಂದ ಮಂಡ್ಯದ ಸಕ್ಕರೆ ಕಾರ್ಖಾನೆಗೆ ಬಂದು ಹೋಗಿದ್ದು ಗೊತ್ತಾಯಿತು.

ಹೇಗೆಂದರೆ ಸುದ್ದಿ ಸಂಸ್ಥೆಯ ಪತ್ರಕರ್ತರ ತಂದೆ ಕುಸುಮಾ ಅವರ ಮನೆಗೆ ಬಂದಾಗ. ಅವರು ಫೋನ್ ತೆಗೆದ ಪತ್ರಕರ್ತರಿಗೆ ‘ನೀವ್ಯಾಕೆ ಬಂದಿರಿ?’ ಎಂದು ಕೇಳಿದಾಗ ‘ಕುಸುಮಾ ಅವರಿಗೆ ಬರೆಯಲು ಬರಲ್ಲ‌. ಅದಕ್ಕೆ ಬಂದೆ’ ಎಂದರಂತೆ! ಕುಸುಮಾ ಅವರು ಪತ್ರಿಕಾಗೋಷ್ಠಿ ವಿಷಯ ತಿಳಿಸದಿದ್ದರೆ ಅವರು ಬರುತ್ತಿರಲಿಲ್ಲ‌. ಅಲ್ಲದೆ ಕಾರ್ಖಾನೆಯ ಎಂ.ಡಿಗೆ ಫೋನ್ ಮಾಡಿ, ಪತ್ರಿಕಾಗೋಷ್ಠಿ ರದ್ದುಪಡಿಸುವುದರ ಜೊತೆಗೆ ಕಾರ್ಖಾನೆಯ ಕಾರಲ್ಲಿ ಬಂದುಹೋಗಿದ್ದಾರೆ. ಹಾಗೆ ಹೋಗುವಾಗ ತಲಾ ಐದು ಕಿಲೊ ಸಕ್ಕರೆಯನ್ನೂ ಪಡೆದುಕೊಂಡು ಹೋದರು.

ಈ ವಿಷಯವನ್ನು ಕುಸುಮಾ ಅವರು ಸಂಪಾದಕರಿಗೆ, ಸುದ್ದಿ ಸಂಪಾದಕರಿಗೆ ತಿಳಿಸಿದಾಗ ಅವರಿಗೂ ಗೊತ್ತಿರಲಿಲ್ಲ‌‌. ಅವರಿಗೆ ಮಾಹಿತಿ ನೀಡದೆ ಬಂದವರು, ಬರೆಯಲು ಬಾರದೆಂದು ಗೂಬೆ ಕೂಡಿಸಿದರು.

ಬರೆಯಲು ಬಾರದ ಪತ್ರಕರ್ತೆ ಎಂದು ಕುಸುಮಾ ಅವರು ಅನುಭವಿಸಿದ ಅವಮಾನ ಅವರನ್ನು ಸುಡುತ್ತಲೇ ಇತ್ತು. ಸಹೋದ್ಯೋಗಿಗಳ ಟೀಕೆ, ವ್ಯಂಗ್ಯ, ಕಟಕಿ ನಗು ಅವರನ್ನು ಆತ್ಮಹತ್ಯೆಯ ನಿರ್ಧಾರದವರೆಗೂ ಎಳೆದುಕೊಂಡು ಹೋಗಿತ್ತು. ಇದನ್ನು ಅವರು ತಮ್ಮ ‘ಪುಟಗಳ ನಡುವಿನ ನವಿಲುಗರಿ’ ಕೃತಿಯಲ್ಲಿ ವಿವರಿಸಿದ್ದಾರೆ.
ಮುಂದೆ ಸಕ್ಕರೆ ಒಯ್ದವರು ಸಹಸಂಪಾದಕರಾದ ನಂತರ ಕುಸುಮಾ ಅವರಿಗೆ ಕಿರುಕುಳ ನೀಡಿ, ಅವರು ಕೆಲಸ ಬಿಡುವಂತೆ ಮಾಡಿದರು!

ಪತ್ರಕರ್ತೆಯಾಗುವ ಮೊದಲು ಕುಸುಮಾ ಅವರು ಸ್ವಯಂ ಸೇವಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಅವರು ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಆಳವಾಗಿ ಅಧ್ಯಯನ ಕೈಗೊಂಡಿದ್ದರು. ಒಮ್ಮೆ ಅಧ್ಯಯನಕ್ಕೆ ಹೋದಾಗ ತಲೆಹಿಡುಕರು ಅವರನ್ನು ಎರಡನೇ ಮಹಡಿಯಿಂದ‌ ಕೆಳಗೆ ಎಸೆದಿದ್ದರು. ಆದರೂ ಅವರು ಅಧ್ಯಯನ ನಿಲ್ಲಿಸದೆ ಲೈಂಗಿಕ ಕಾರ್ಯಕರ್ತೆಯರ ಕುರಿತು ‘ಕಾಯಕ ಕಾರ್ಪಣ್ಯ’ ಕೃತಿ ರಚಿಸಿದರು. ಅವರ ‘ಮಣ್ಣಿಂದ ಎದ್ದವರು’ ಕಾದಂಬರಿಯೂ ಪ್ರಕಟವಾಗಿದೆ.

ಅಂದಹಾಗೆ ಕುಸುಮಾ ಅವರು ಕಾದಂಬರಿಕಾರ ಭಾರತೀಸುತ ಅವರ ಮಗಳು. ಭಾರತೀಸುತ ಅವರ ಖ್ಯಾತ ಕಾದಂಬರಿಗಳು; ಎಡಕಲ್ಲು ಗುಡ್ಡದ ಮೇಲೆ, ಹುಲಿಯ ಹಾಲಿನ ಮೇವು, ಗಿರಿಕನ್ಯೆ, ಬಯಲುದಾರಿ. ಇವು ಸಿನಿಮಾಗಳಾಗಿಯೂ ಪ್ರಸಿದ್ಧ. ಭಾರತೀಸುತ ಅವರ ಪುತ್ರಿ ಖ್ಯಾತ ಪತ್ರಕರ್ತ ಕುಸುಮಾ ಶಾನಭಾಗ ಅವರು ಇಂದು ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.

ಮಿಲಿಟರಿ ರಹಸ್ಯ ಕಾರ್ಯಾಚರಣೆಗಾಗಿ ‘ಮೈಕ್ರೋ ಡ್ರೋನ್’ ಅಭಿವೃದ್ಧಿ ಪಡಿಸಿದ ಚೀನಾ: ವೀಡಿಯೋ ವೈರಲ್ | Mosquito-seized Microdrone

ಬೆಂಗಳೂರಿನ BTM ಲೇಔಟ್ ನಲ್ಲಿ ನವೀಕೃತ ಪ್ರಾಥಮಿಕ ಆರೋಗ್ಯ ಕೇಂದ್ರ ಲೋಕಾರ್ಪಣೆಗೊಳಿಸಿದ ಸಚಿವ ರಾಮಲಿಂಗಾರೆಡ್ಡಿ

Share. Facebook Twitter LinkedIn WhatsApp Email

Related Posts

ಪೋಷಕರೇ ನಿಮ್ಮ ಮಕ್ಕಳನ್ನು `ಕೇಂದ್ರೀಯ ವಿದ್ಯಾಲಯ’ಕ್ಕೆ ಸೇರಿಸಬೇಕಾ? ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ

11/03/2026 7:13 AM2 Mins Read

ನಿಮ್ಮ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆಯೇ? ಚಿಂತಿಸಬೇಡಿ, ಇಲ್ಲಿವೆ ಕಾನೂನು ಪರಿಹಾರಗಳು !

11/03/2026 7:10 AM2 Mins Read

BIG NEWS : ರಾಜ್ಯದಲ್ಲಿ `SSLC’ ಪರೀಕ್ಷೆ ಮುಗಿದ ತಕ್ಷಣ `ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್’ !

11/03/2026 7:04 AM1 Min Read
Recent News

ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದವರಿಗೆ ಆಸರೆ: ಏರ್ ಇಂಡಿಯಾ, ಇಂಡಿಗೋದಿಂದ ವಿಶೇಷ ವಿಮಾನಗಳ ಹಾರಾಟ; ಇಲ್ಲಿದೆ ಸಂಪೂರ್ಣ ಪಟ್ಟಿ!

11/03/2026 7:44 AM

ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು ಫಿಕ್ಸ್ : ದೇಶಾದ್ಯಂತ ‘ಎಸ್ಮಾ’ ಜಾರಿಗೊಳಿಸಿದ ಕೇಂದ್ರ ಸರ್ಕಾರ

11/03/2026 7:32 AM

ಭಾರತ ಒಂದೆರೆಡಲ್ಲ 40 ದೇಶಗಳಿಂದ ‘ಕಚ್ಚಾ ತೈಲ’ ಆಮದು ಮಾಡಿಕೊಳ್ತಿದೆ ; ಪಟ್ಟಿ ಇಲ್ಲಿದೆ.!

11/03/2026 7:29 AM

ಇರಾನ್ ಯುದ್ಧಕ್ಕೆ ಪುಟಿನ್ ‘ಮಾಸ್ಟರ್ ಪ್ಲಾನ್’: ಟ್ರಂಪ್‌ಗೆ ಸುಲಭ ದಾರಿ ತೋರಿಸಿದ ರಷ್ಯಾ; ಸಂಘರ್ಷ ಅಂತ್ಯಕ್ಕೆ ಮುಹೂರ್ತ ಫಿಕ್ಸ್?

11/03/2026 7:29 AM
State News
KARNATAKA

ಪೋಷಕರೇ ನಿಮ್ಮ ಮಕ್ಕಳನ್ನು `ಕೇಂದ್ರೀಯ ವಿದ್ಯಾಲಯ’ಕ್ಕೆ ಸೇರಿಸಬೇಕಾ? ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ

By kannadanewsnow5711/03/2026 7:13 AM KARNATAKA 2 Mins Read

ಮಕ್ಕಳ ಶಿಕ್ಷಣಕ್ಕೆ ಅಡಚಣೆಯಾಗದಂತೆ ದೇಶಾದ್ಯಂತ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕೇಂದ್ರೀಯ ವಿದ್ಯಾಲಯ ಸಂಘಟನ್ (KVS), 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ…

ನಿಮ್ಮ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆಯೇ? ಚಿಂತಿಸಬೇಡಿ, ಇಲ್ಲಿವೆ ಕಾನೂನು ಪರಿಹಾರಗಳು !

11/03/2026 7:10 AM

BIG NEWS : ರಾಜ್ಯದಲ್ಲಿ `SSLC’ ಪರೀಕ್ಷೆ ಮುಗಿದ ತಕ್ಷಣ `ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್’ !

11/03/2026 7:04 AM

ವಯಸ್ಸಾದಂತೆ ಮೂಳೆ ಸವೆತಕ್ಕೆ ಕಾರಣವೇನು ಗೊತ್ತಾ? ಅಚ್ಚರಿ ಮಾಹಿತಿ ಬಿಚ್ಚಿಟ್ಟ ವೈದ್ಯರು!

11/03/2026 6:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.