ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ವಕೀಲರ ಮೇಲೆ ಹಲ್ಲೆ ಮಾಡಿದಂತ ತಪ್ಪಿತಸ್ಥ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ ಮಾಡಿದೆ. ಈ ಮೂಲಕ ವಕೀಲರ ಮೇಲೆ ಹಲ್ಲೆ ನಡೆಸಿದಂತ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಸಂಕಷ್ಟ ಎದುರಾಗಿದೆ.
ದಿನಾಂಕ 28/2/2019 ರಂದು ರಾತ್ರಿ ಸಾಗರದ ಪ್ರಖ್ಯಾತ ವಕೀಲರಾದ ರಾಜೇಶ್ ಎಸ್. ಬಿ ಅವರ ಮೇಲೆ ಸಾಗರ ಪೇಟೆಯ ಮಾರ್ಕೇಟ್ ರಸ್ತೆಯಲ್ಲಿ ಗಲಾಟೆ ತೆಗೆದು ಹಲ್ಲೆಯಲ್ಲಿ ಅಂದಿನ ಸಾಗರ ಗ್ರಾಮಾಂತರ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್, ಪೊಲೀಸ್ ಪೇದೆ ಸೈನು ನದಾಫಾ ಹಾಗೂ ಹೊಂ ಗಾರ್ಡ್ ಕೃಷ್ಣಪ್ಪ ಹಲ್ಲೆ ನಡೆಸಿದ್ದರು.
ಈ ಹಲ್ಲೆ ಘಟನೆಯ ಸಂಬಂಧ ವಕೀಲ ರಾಜೇಶ್ ಎಸ್.ಬಿ ಅವರು PCR 77/2019 ರಂತೆ ಸಾಗರದ PCJ & JMFC ನ್ಯಾಯಾಲದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ಈ ವಿಚಾರ ಸಂಬಂಧ ನ್ಯಾಯಾಲಯದ ಆದೇಶದ ಮೇರೆಗೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ FIR ಮಾಡಲಾಗಿತ್ತು. ಆ ಬಳಿಕ ಅದಕ್ಕೆ ‘ ಬಿ ವರದಿ’ಯನ್ನು ಸಲ್ಲಿಸಲಾಗಿತ್ತು.
ಆದರೆ ವಿಚಾರಣೆ ನಡೆಸಿದ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಮಾದೇಶ್ ಎಂ.ವಿ ಅವರು ಬಿ ವರದಿಯನ್ನು ತಳ್ಳಿಹಾಕಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಐ.ಪಿ.ಸಿ ಸೆಕ್ಷನ್ 193, 323, 337, 341, 342, 352, 355, 357, 504, 506, 34 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಆದೇಶಿಸಿದ್ದಾರೆ. ಪಿರ್ಯಾದುದಾರರ ಪರ ಖ್ಯಾತ ವಕೀಲರಾದ ರಮೇಶ್ ಹೆಚ್.ಬಿ. ಶಿರವಾಳ ವಾದಿಸಿದ್ದರು.
‘ನಟ ದರ್ಶನ್ ಫ್ಯಾನ್ಸ್’ ವಿರುದ್ಧ ‘ನಟಿ ರಮ್ಯಾ’ ಕಾನೂನು ಸಮರ: ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ | Actress Ramya
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ