Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಮಾನ ಪ್ರಯಾಣಿಕರಿಗೆ ಶಾಕ್: ದೇಶೀಯ ವಿಮಾನ ದರ ಮಿತಿ ತೆರವುಗೊಳಿಸಿದ ಕೇಂದ್ರ; ಟಿಕೆಟ್ ಬೆಲೆ ಗಗನಕ್ಕೇರುವ ಭೀತಿ!

22/03/2026 1:14 PM

BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

22/03/2026 1:12 PM

SHOCKING : ಮನೇಲಿ ಬೆಕ್ಕು ಸಾಕ್ಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ವೈದ್ಯೆ!

22/03/2026 1:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಲ್ಪಸಂಖ್ಯಾತರನ್ನು ಕಂಡರೆ ಭಯ ಹೆಚ್ಚಾಗಿ ರಣಹೇಡಿತನವನ್ನು ಕಾಂಗ್ರೆಸ್ ಸರ್ಕಾರ ಪ್ರದರ್ಶನ: ಛಲವಾದಿ ನಾರಾಯಣಸ್ವಾಮಿ
KARNATAKA

ಅಲ್ಪಸಂಖ್ಯಾತರನ್ನು ಕಂಡರೆ ಭಯ ಹೆಚ್ಚಾಗಿ ರಣಹೇಡಿತನವನ್ನು ಕಾಂಗ್ರೆಸ್ ಸರ್ಕಾರ ಪ್ರದರ್ಶನ: ಛಲವಾದಿ ನಾರಾಯಣಸ್ವಾಮಿ

By kannadanewsnow0913/09/2025 6:26 PM

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿಂತಿದೆ. ಒಂದು ಕಡೆ ಓಲೈಕೆ ಮತ್ತೊಂದು ಕಡೆ ಅಲ್ಪಸಂಖ್ಯಾತರನ್ನು ಕಂಡರೆ ಭಯ ಹೆಚ್ಚಾಗಿ ರಣಹೇಡಿತನವನ್ನು ಕಾಂಗ್ರೆಸ್ ಸರ್ಕಾರ ಪ್ರದರ್ಶಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಓಲೈಕೆಗಿಂತ ಹೆಚ್ಚು ಇವರಿಗೆ ಭಯ ಪ್ರಾರಂಭವಾಗಿದೆ. ಏಕೆಂದರೆ ಅಲ್ಪಸಂಖ್ಯಾತರನ್ನು ನಿಯಂತ್ರಣ ಮಾಡುವ ಶಕ್ತಿ ಈ ಸರ್ಕಾರಕ್ಕೆ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಗಣೇಶೋತ್ಸವಗಳನ್ನು ಮಾಡುವುದಕ್ಕೆ ಅವಕಾಶಕೊಡದೆ ದೊಡ್ಡ ದೊಡ್ಡ ರಾದ್ಧಾಂತಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ದೂರಿದರು.

ಹಿಂದಿನ ಪದ್ಧತಿಗಳಂತೆ ಗಣೇಶೋತ್ಸವಗಳು ಯಾವಾÀಗಲೂ ನಡೆದುಕೊಂಡು ಬರುತ್ತಿದೆ. ಎಂದೂ ಗಲಾಟೆಗಳು ಆಗಿರಲಿಲ್ಲ. ಸರ್ಕಾರ ಮತಬ್ಯಾಂಕಿನ ಕಾರಣಕ್ಕೆ ಅವರನ್ನು ಓಲೈಕೆ ಮಾಡುವ ನೆಪದಿಂದ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಕ್ಕಿಕೊಂಡಿರುವ ಅಲ್ಪಸಂಖ್ಯಾತರ ಕೇಸುಗಳನ್ನು ವಾಪಸ್ ಪಡೆದು ಅವರಿಗೆ ಶಾಂತಿದೂತ ಪಟ್ಟಕೊಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದರು. ಆ ತಕ್ಷಣವೇ ಇಡೀ ರಾಜ್ಯದಲ್ಲಿ ನೆಮ್ಮದಿ ಕೆಡಸುವ ಕೆಲಸ ಆ ಜನರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸರ್ಕಾರ ಹಿಂದುತ್ವ ವಿರೋಧಿ

ಸಂವಿಧಾನ ಇರುವುದು ಯಾರನ್ನೋ ಓಲೈಕೆ ಮಾಡುವುದಕ್ಕೆ ಮತ್ತು ಯಾರನ್ನೋ ತುಳಿಯುವುದಕ್ಕೆ ಅಲ್ಲ. ಸರ್ವರನ್ನೂ ಒಳ್ಳೆಯ ರೀತಿಯ ತೆಗೆದುಕೊಂಡು ಹೋಗುವ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ ಈ ಸರ್ಕಾರ ಹಿಂದುತ್ವ ವಿರೋಧಿ ಎಂದು ದೂರಿದರು.

ಸರ್ಕಾರ ಅಲಿಖಿತ ಕಾನೂನು ಮಾಡಿದೆ. ಎಲ್ಲ ತಾಲ್ಲೂಕು ಮತ್ತು ಜಿಲ್ಲೆಗಳಲ್ಲೂ ಗಣೇಶನ ಉತ್ಸವಕ್ಕೆ ಅವಕಾಶ ಕೋಡಬೇಡಿ ಎಂದು ಪೊಲೀಸ್ ಇಲಾಖೆಗೆ ಸುತ್ತೋಲೆ ಹೊರಡಿಸದೆ ಮಾತಿನಲ್ಲಿ ಹೇಳಿದ್ದಾರೆ ಎಂದು ದೂರಿದರು. ಅನುಮತಿ ಕೊಡದಿರುವುದಕ್ಕೆ ನೀವು ಯಾರು?; ನಿಮಗೆ ಏನು ಅಧಿಕಾರವಿದೆ ಎಂದು ಪ್ರಶ್ನಿಸಿದರು. ಹತ್ತಿಕ್ಕುವ ಕೆಲಸ ಸರ್ಕಾರ ಮಾಡುವುದು ಸರಿ ಇದೆಯೇ ಎಂದು ಕೇಳಿದರು.

ಇಂದು ಓಲೈಕೆ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಶಿವಾಜಿನಗರ ಅತ್ಯಂತ ಹಳೆಯ ಮತ್ತು ಇಡೀ ದೇಶಕ್ಕೆ ಗೊತ್ತಿರುವ ಹೆಸರು. ಆದರೆ ಮೆಟ್ರೋ ನಿಲ್ದಾಣಕ್ಕೆ ಸೈಂಟ್ ಮೇರಿ ಹೆಸರು ಇಡಲು ಹೊರಟಿದೆ ಎಂದು ಆಕ್ಷೇಪಿಸಿದರು. ಈ ವಿಚಾರವಾಗಿ ಸರ್ಕಾರ ಶಿವಾಜಿ ಎನ್ನುವವರು ಕರ್ನಾಟಕದವರು ಅಲ್ಲ ಎಂದು ಹೇಳಿಕೆ ನೀಡಿದ್ದಾರೆ; ಸೈಂಟ್ ಮೇರಿ ಯಾವ ದೇಶದವರು?; ಅವರು ಶಿವಾಜಿನಗರದವರೇ, ಕರ್ನಾಟಕದವರೇ ಎಂದು ಪ್ರಶ್ನಿಸಿದರು.

ಸರ್ಕಾರ ಜನ ಮೆಚ್ಚುವ ಕೆಲಸ ಮಾಡಬೇಕೇ ಹೊರತು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದರೆ ಸರ್ಕಾರಗಳು ಮುಂದೆ ಕೆಲಸ ಮಾಡುವುದಕ್ಕೆ ಕಷ್ಟವಾಗುತ್ತದೆ ಎಂದು ತಿಳಿಸಿದರು. ಸರ್ಕಾರ ಕೆಟ್ಟದಾರಿ ತುಳಿಯುತ್ತಿದೆ; ಅದರಿಂದ ಹೊರಬಂದು ಸಂವಿಧಾನದ ದಾರಿಯಲ್ಲಿ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

50 ಲಕ್ಷ ರೂ. ಪರಿಹಾರ ಘೋಷಣೆಗೆ ಆಗ್ರಹ

ಹಾಸನ ಜಿಲ್ಲೆಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಟ್ರಕ್ ಹರಿದು 8 ರಿಂದ 9 ಜನ ಸಾವಿಗೀಡಾಗಿರುವುದು ಹಾಗೂ ಸುಮಾರು ಜನರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಇರುವ ವಿಚಾರ ತಿಳಿದು ಬಹಳ ನೋವಾಗಿದೆ ಎಂದು ತಿಳಿಸಿದರು. ಈಗಾಗಲೇ ನಮ್ಮ ಪಕ್ಷದ ಮುಖಂಡರಾದ ಆರ್. ಅಶೋಕ್, ಸಿ.ಟಿ. ರವಿ, ಪಕ್ಷದ ನಾಯಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾರಣಾಂತರದಿಂದ ನಾನು ಹೋಗುವುದಕ್ಕೆ ಆಗಲಿಲ್ಲ ಎಂದು ತಿಳಿಸಿದರು.

ದೇಶದ ಪ್ರಧಾನ ಮಂತ್ರಿಗಳು ಕೂಡ ಹಾಸನ ಜಿಲ್ಲೆಯ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ ಮತ್ತು ಅವರ ನಿಧಿಯಿಂದ ಹಣವನ್ನು ಘೋಷಣೆ ಮಾಡಿದ್ದಾರೆ. ಇಂತಹ ಅಚಾತುರ್ಯ ನಡೆಯಬಾರದಿತ್ತು. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ 50 ಲಕ್ಷ ರೂಗಳ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ದಲಿತರ ಬದುಕನ್ನು ಹಸನು ಮಾಡಬೇಕು ಎನ್ನುವ ಭಾವನೆ ಸರ್ಕಾರಕ್ಕೆ ಇಲ್ಲ. ಮತಬ್ಯಾಂಕಿಗಾಗಿ ದಲಿತರ ಪರ ಎನ್ನುತ್ತಾರೆ. ಅಲ್ಪಸಂಖ್ಯಾತರಿಗೆ ಬಹುಮಾನ, ದಲಿತರಿಗೆ ಅವಮಾನ. ಇದು ಕಾಂಗ್ರೆಸ್ಸಿನ ಇಬ್ಬಗೆಯ ನೀತಿಯಾಗಿದೆ ಎಂದು ಆರೋಪಿಸಿದರು. ಇದರ ವಿರುದ್ಧವಾಗಿ ದಲಿತರು ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಕರೆನೀಡಿದರು.

ಮುಸ್ಲಿಂ ಕಾಲೋನಿಗಳನ್ನು ಸುಮಾರು 400 ಕೋಟಿ ರೂಗಳಲ್ಲಿ ಸುಭದ್ರಗೊಳಿಸುವುದು ಹಾಗೂ ಉತ್ತಮಗೊಳಿಸುವುದು; ದಲಿತ ಸಮುದಾಯಗಳು ವಾಸಿಸುವ ಕೊಳಚೆ ಪ್ರದೇಶಗಳ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು. ಸರ್ಕಾರ ಸಂವಿಧಾನದ ಹೆಸರಲ್ಲಿ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಿಗೆ, ಸಂವಿಧಾನಕ್ಕೆ ಮತ್ತು ದಲಿತರಿಗೆ ದೋಖಾ ಮಾಡುತ್ತಿದ್ದಾರೆ ಎಂದು ದೂರಿದರು.

ಸೋನಿಯಾ ಗಾಂಧಿ ಓಲೈಕೆಗೆ ಜಾತಿ ಜಾತಿಗೂ ಕ್ರೈಸ್ತರ ಜೋಡಣೆ

ಜಾತಿಗಣತಿ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದೇ ಆಡಳಿತ ಸರ್ಕಾರಕ್ಕೆ ಆಸ್ತಿಕ ಮತ್ತು ನಾಸ್ತಿಕರನ್ನು ಹುಡುಕುವ ಕೆಲಸ ಬೇಕೇ ಎಂದು ಪ್ರಶ್ನಿಸಿದರು. ಒಕ್ಕಲಿಗ ಕ್ರೈಸ್ತರು, ಲಿಂಗಾಯತ ಕ್ರೈಸ್ತರು, ಬ್ರಾಹ್ಮಣ ಕ್ರೈಸ್ತರು, ದಲಿತ ಕ್ರೈಸ್ತರು ಈ ರೀತಿಯ ಜಾತಿ ಇದೆಯೇ?; ಆದರೆ ಇದರ ಅರ್ಥವೇನೆಂದರೆ ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿಯವರನ್ನು ಓಲೈಕೆ ಮಾಡುವುದಕ್ಕಾಗಿ ಜಾತಿ ಜಾತಿಗೂ ಕ್ರೈಸ್ತರನ್ನು ಜೋಡಿಸುತ್ತಿದೆ ಎಂದು ಆರೋಪಿಸಿದರು.

ಯಾವ ಜಾತಿಯವರು ಕ್ರೈಸ್ತರಾಗಿ ಮತಾಂತರ ಆಗಿದ್ದರೆ ಅವರು ಕ್ರೈಸ್ತರಾಗುತ್ತಾರೆ. ಆದರೆ ಅವರು ಯಾವ ಜಾತಿಯಿಂದ ಕ್ರೈಸ್ತರಾಗಿದ್ದಾರೆ ಎಂಬುದು ನಿಮಗೆ ಏಕೆ ಬೇಕಾಗಿದೆ ಎಂದು ಪ್ರಶ್ನಿಸಿದರು. ಈ ಕಾಂಗ್ರೆಸ್ ಸರ್ಕಾರ ಮತಾಂತರವನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ನಾಸ್ತಿಕ ಮತ್ತು ಆಸ್ತಿಕ ಜನಗಣತಿಯಲ್ಲಿ ಬರಬೇಕಾಗಿಲ್ಲ. ಅದು ವ್ಯಕ್ತಿ ವ್ಯಕ್ತಿಗಳ ಮಧ್ಯದಲ್ಲಿರುವ ನಡವಳಿಕೆ. ಎಷ್ಟೋ ಜನ ನಾಸ್ತಿಕರು ಆಸ್ತಿಕರಾಗಿದ್ದಾರೆ; ಆಸ್ತಿಕರು ನಾಸ್ತಿಕರೂ ಆಗಿದ್ದಾರೆ. ತಿಳಿವಳಿಕೆ ಇಲ್ಲದ ಸಂದರ್ಭದಲ್ಲಿ ಕೆಲವರು ಯಾವುದೋ ವಿಚಾರವನ್ನು ಹೀಯಾಳಿಸುವುದು ಮತ್ತು ವಿರೋಧಿಸುವುದು ಸಹಜ. ಅದು ಅರಿವಿಗೆ ಬಂದ ಮೇಲೆ ಅವರು ಕೂಡ ಪರಿವರ್ತನೆ ಆಗುವ ಸಂದರ್ಭಗಳನ್ನು ನಾವು ಗಮನಿಸಿದ್ದೇವೆ ಎಂದು ವಿವರಿಸಿದರು.

ಈ ಸರ್ಕಾರ ಜನರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆಯೇ ಹೊರತು. ಸಮಾಜವನ್ನು ಉತ್ತಮಗೊಳಿಸಬೇಕು ಮತ್ತು ಒಳ್ಳೆಯ ರೀತಿಯಲ್ಲಿ ನಡೆಸಬೇಕು ಅನ್ನುವ ಭಾವನೆ ಈ ಸರ್ಕಾರಕ್ಕೆ ಇಲ್ಲ. ಆದ್ದರಿಂದ ಇಂದು ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ಸನ್ನು ಜನ ತಿರಸ್ಕಾರ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಈ ಕಾಂಗ್ರೆಸ್ ಪಕ್ಷವನ್ನು ಅಳಿಸಿ ಹಾಕಬೇಕು ಎಂದು ಜನ ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.

BREAKING: ಹಾಸನ ಗಣೇಶ ಮೆರವಣಿಗೆ ದುರಂತ: ಚಿಕಿತ್ಸೆ ಫಲಿಸದೇ ಮತ್ತೊಬ್ಬ ಸಾವು, ಮೃತರ ಸಂಖ್ಯೆ 10ಕ್ಕೆ ಏರಿಕೆ

ಹಾಸನ ಗಣೇಶ ಮೆರವಣಿಗೆ ದುರಂತ: ಮೃತಪಟ್ಟವರಿಗೆ ಪರಿಹಾರ ಘೋಷಿಸಿದ ಜೆಡಿಎಸ್

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

22/03/2026 1:12 PM1 Min Read

BREAKING : ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 12:09 PM1 Min Read

SHOCKING : ಸ್ವಿಮ್ಮಿಂಗ್ ಮಾಡುವಾಗಲೇ ಘೋರ ದುರಂತ : ಬೆಳಗಾವಿಲಿ ‘ಹೃದಯಾಘಾತದಿಂದ’ ಸೇನಾಧಿಕಾರಿ ಸಾವು!

22/03/2026 11:57 AM1 Min Read
Recent News

ವಿಮಾನ ಪ್ರಯಾಣಿಕರಿಗೆ ಶಾಕ್: ದೇಶೀಯ ವಿಮಾನ ದರ ಮಿತಿ ತೆರವುಗೊಳಿಸಿದ ಕೇಂದ್ರ; ಟಿಕೆಟ್ ಬೆಲೆ ಗಗನಕ್ಕೇರುವ ಭೀತಿ!

22/03/2026 1:14 PM

BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

22/03/2026 1:12 PM

SHOCKING : ಮನೇಲಿ ಬೆಕ್ಕು ಸಾಕ್ಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ ವೈದ್ಯೆ!

22/03/2026 1:05 PM

ಇರಾನ್‌ನಲ್ಲಿ ತೀವ್ರಗೊಂಡ ರಾಜಕೀಯ ಬಿಕ್ಕಟ್ಟು: ಮೊಜ್ತಬಾ ಖಮೇನಿ ಜೀವಂತವಾಗಿದ್ದರೂ ಅಧಿಕಾರ ಮುಕ್ತ: ಸರ್ವೋಚ್ಚ ನಾಯಕನ ನಿಯಂತ್ರಣಕ್ಕೆ ಕುತ್ತು?

22/03/2026 1:04 PM
State News
KARNATAKA

BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

By kannadanewsnow0522/03/2026 1:12 PM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದೆಹಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ನಾಯಿಗೆ ನೀಡುವ…

BREAKING : ಕರ್ನಾಟಕ ಉಪಚುನಾವಣೆ : ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 12:09 PM

SHOCKING : ಸ್ವಿಮ್ಮಿಂಗ್ ಮಾಡುವಾಗಲೇ ಘೋರ ದುರಂತ : ಬೆಳಗಾವಿಲಿ ‘ಹೃದಯಾಘಾತದಿಂದ’ ಸೇನಾಧಿಕಾರಿ ಸಾವು!

22/03/2026 11:57 AM

BREAKING : ಬಾಗಲಕೋಟೆಗೆ ಉಮೇಶ್ ಮೇಟಿ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಮರ್ಥಗೆ ಟಿಕೆಟ್ ಘೋಷಿಸಿದ ಕಾಂಗ್ರೆಸ್!

22/03/2026 11:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.