ಬೆಂಗಳೂರು: ಇಂದು ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ ಕರ್ನಾಟಕ ಮೂಲಕ ಕೋ ಪೈಲಟ್ ಸೇರಿದಂತೆ ಎಲ್ಲಾ 242 ಮಂದಿ ಸಾವನ್ನಪ್ಪಿದ್ದಾರೆ.
ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯಲ್ಲಿ ಏರ್ ಇಂಡಿಯಾ ವಿಮಾನ ಟೇಕ್ ಆಪ್ ಆದಂತ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಸಮೀಪದ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿಯಾಗಿ ಪತನಗೊಂಡಿದೆ.
ಈ ವಿಮಾನದಲ್ಲಿ 230 ಪ್ರಯಾಣಿಕರು, ವಿದೇಶಿಕರು, ವಿಮಾನ ಸಿಬ್ಬಂದಿಗಳು ಸೇರಿದಂತೆ 242 ಮಂದಿ ಇದ್ದರು. ಇವರಲ್ಲಿ ಕರ್ನಾಟಕದ ಕರಾವಳಿ ಮೂಲಕ ಕ್ಲೈವ್ ಕುಂದರ್ ಎಂಬುವರೂ ಕೋ ಪೈಲಟ್ ಆಗಿದ್ದರು. ಅವರು ಕೂಡ ವಿಮಾನ ದುರಂತದ ಬಳಿಕ ದುರ್ಮರಣಕ್ಕೆ ಈಡಾಗಿರುವುದಾಗಿ ತಿಳಿದು ಬಂದಿದೆ.
BREAKING : ರಾಜ್ಯದಲ್ಲಿ ‘ಜಾತಿಗಣತಿ’ ಮರು ಸಮೀಕ್ಷೆಗೆ ಸಚಿವ ಸಂಪುಟ ಅಸ್ತು