ಬೆಂಗಳೂರು: ಭಾರತಕ್ಕೆ ಭೇಟಿ ನೀಡಿರುವ ವಾಷಿಂಗ್ಟನ್ ಡಿಸಿ ಯ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ನಿಯೋಗದ ತಂಡವು ವಾರ್ಷಿಕ ಆರ್ಟಿಕಲ್ IV ಸಮಾಲೋಚನೆಯ ಭಾಗವಾಗಿ ಇಂದು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿತು.
ಈ ಅಂತರರಾಷ್ಟ್ರೀಯ ಹಣಕಾಸು ನಿಧಿ ನಿಯೋಗ ತಂಡವು ಸ್ಥೂಲ ಆರ್ಥಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ಸರ್ಕಾರಿ ಅಧಿಕಾರಿಗಳಿಗೆ ನೀತಿ ಸಲಹೆಗಳನ್ನು ನೀಡುತ್ತದೆ.
ರಾಜ್ಯದಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವುದು, ಹಣಕಾಸಿನ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಮಾನವ ಬಂಡವಾಳವನ್ನು ಬಲಪಡಿಸುವುದರೊಂದಿಗೆ, ಹವಾಮಾನ ಕೇಂದ್ರಿತ ನೀತಿಗಳನ್ನು ಮುಂದುವರಿಸುವ ಕುರಿತು ರಚನಾತ್ಮಕ ಸವಾಲುಗಳನ್ನು ಗುರಿಯಾಗಿರಿಸಿಕೊಂಡು ರಾಜ್ಯ ಮಟ್ಟದ ಉಪಕ್ರಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಸಹ ಹಾಜರಿದ್ದರು.
ಅಂತರರಾಷ್ಟ್ರೀಯ ಹಣಕಾಸು ನಿಧಿ ನಿಯೋಗ ತಂಡದಲ್ಲಿ ಸಹಾಯಕ ನಿರ್ದೇಶಕ ಮತ್ತು ಮಿಷನ್ ಮುಖ್ಯಸ್ಥರಾದ ಹೆರಾಲ್ಡ್ ಫಿಂಗರ್ ಅವರೊಂದಿಗೆ ಭಾರತದ ಹಿರಿಯ ನಿವಾಸಿ ಪ್ರತಿನಿಧಿ ರನಿಲ್ ಸಲ್ಗಾಡೊ, ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಹಿರಿಯ ಅರ್ಥಶಾಸ್ತ್ರಜ್ಞೆ ನುಜಿನ್ ಸುಫಾಫಿಫಟ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ ನಿಯೋಗದ (IMF) ಅರ್ಥಶಾಸ್ತ್ರಜ್ಞೆ ಗೀತಿಕಾ ಡ್ಯಾಂಗ್ ಹಾಜರಿದ್ದರು.
ಧರ್ಮಸ್ಥಳ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯಗೆ 14 ದಿನ ನ್ಯಾಯಾಂಗ ಬಂಧನ, ಜೈಲುಪಾಲು
ಸಾಗರ ತಾಲ್ಲೂಕನ್ನು ನೂತನ ಜಿಲ್ಲೆಯಾಗಿ ಮಾಡಿ: ಸಿಎಂ ಸಿದ್ಧರಾಮಯ್ಯಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ