ಬೆಂಗಳೂರು: ಕರ್ನಾಟಕದಲ್ಲಿ ಮಳೆಯಿಂದಾಗಿ ಹಾನಿಯಾದಂತ ಅತಿವೃಷ್ಠಿಗೆ ಕೇಂದ್ರ ಸರ್ಕಾರದಿಂದ ಎಸ್ ಡಿ ಆರ್ ಎಫ್ ನಿಧಿಯಿಂದ 384 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಗೃಹ ಸಚಿವಾಲಯವು ಅನುಮೋದಿಸಿದೆ.
ರಾಜ್ಯದಲ್ಲಿ ನೈರುತ್ಯ ಮುಂಗಾರಿನಿಂದಾಗಿ ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ಅತಿವೃಷ್ಠಿ ಉಂಟಾಗಿತ್ತು. ಅತ್ತ ಮಹಾರಾಷ್ಟ್ರದಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಒಟ್ಟು 1,950 ಕೋಟಿಯನ್ನು ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಅಡಿಯಲ್ಲಿ ಮುಂಗಡವಾಗಿ ಬಿಡುಗಡೆ ಮಾಡೋದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅನುಮತಿ ನೀಡಿದ್ದಾರೆ.
ಅಂದಹಾಗೇ ಕೇಂದ್ರ ಸರ್ಕಾರದಿಂದ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಮಹಾರಾಷ್ಟ್ರಕ್ಕೆ 1,566.40 ಕೋಟಿ ಹಾಗೂ ಕರ್ನಾಟಕಕ್ಕೆ 384 ಕೋಟಿ ಅತಿವೃಷ್ಠಿ ಹಾನಿಗೆ ಪರಿಹಾರವನ್ನು ಮಂಜೂರು ಮಾಡಲು ಅನುಮೋದಿಸಲಾಗಿದೆ.








