ಹಾಸನ: ಮನೆಯಲ್ಲಿ ಯಾರು ಇಲ್ಲದ ವಿಷಯ ತಿಳಿದಂತ ಕಳ್ಳರು ಬಾಗಿಲು ಮುರಿದು ಕನ್ನ ಹಾಕಿದ್ದಾರೆ. ಮನೆಯಲ್ಲಿ ಸಿಕ್ಕಂತ ಚಿನ್ನ, ಬೆಳ್ಳಿ, ನಗದು ದೋಚಿದಂತ ಕಳ್ಳರು, ಅವೆಲ್ಲವನ್ನು ಮನೆಯ ಮುಂದೆ ನಿಲ್ಲಿಸಿದ್ದಂತ ಮಾಲೀಕರ ಕಾರಿನಲ್ಲಿಯೇ ತುಂಬಿಕೊಂಡು ಪರಾರಿಯಾಗಿರುವಂತ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ವಿದ್ಯಾನಗರದ ನಿವಾಸಿ ವನಜಾಕ್ಷಿ ಎಂಬುವರು ಬೆಂಗಳೂರಿನಲ್ಲಿರುವ ಮಗನ ಮನೆಗೆ ತೆರಳಿದ್ದರು. ಕಳೆದ ಹತ್ತು ದಿನಗಳ ಹಿಂದೆ ಹೋಗಿದ್ದಂತ ಅವರು, ಮರಳಿ ಮನೆಗೆ ಬಂದಾಗ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರು ಇಲ್ಲದ ವಿಚಾರ ತಿಳಿದಂತ ಕಳ್ಳರು ಒಡವೆ, ಬೆಳ್ಳಿ, ನಗದು ದೋಚಿದ್ದಾರೆ. ಆ ಬಳಿಕ ಮನೆಯಲ್ಲಿಯೇ ಇದ್ದಂತ ಕಾರಿನ ಕೀ ತೆಗೆದುಕೊಂಡು, ಇನ್ನೊಂದು ಗೇಟ್ ನ ಬೀಗ ಒಡೆದು ಕಾರಿನಲ್ಲಿ ಕಳ್ಳತನ ಮಾಡಿದ್ದಂತ ಎಲ್ಲಾ ವಸ್ತುಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
BREAKING : ಮಾಧ್ಯಮ ಸಂಸ್ಥೆ ‘CNN’ನಿಂದ 200 ಉದ್ಯೋಗಗಳು ವಜಾ |CNN Layoffs
ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಅಮೆರಿಕಾದಿಂದ 500ಕ್ಕೂ ಹೆಚ್ಚು ‘ಅಕ್ರಮ ವಲಸಿಗರ’ ಬಂಧನ