ಕೇಸರಿ ಕೇವಲ ಸಿಹಿತಿಂಡಿಗೆ ಸೀಮಿತವಲ್ಲದೆ ಸೌಂದರ್ಯಕ್ಕೂ ಪರಿಣಾಮಕಾರಿಯಾಗಿದೆ. ಮುಖದ ಚರ್ಮ ತಿಳಿಯಾಗಲು, ಮೊಡವೆ ನಿವಾರಣೆಗೆ, ಕಲೆ ಹೋಗಲು, ಕೂದಲಿನ ಆರೋಗ್ಯ ಸುಧಾರಿಸಲು ಕೇಸರಿಯನ್ನು ಬಳಕೆ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ಮೊಡವೆಗೆ ನಿವಾರಣೆಗೆ ಪರಿಹಾರ ನೀಡಲು ಕೇಸರಿ ಬಳಸಬಹುದಾಗಿದೆ. ಕೇಸರಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿಇನ್ ಫ್ಲಮೇಟರಿ ಅಂಶಗಳಿಂದಾಗಿ ಉತ್ತಮ ಪರಿಣಾಮ ಕಂಡುಬರುತ್ತದೆ. ಗಾಯವನ್ನು ಗುಣಪಡಿಸುವ ಗುಣವೂ ಕೂಡ ಇದರಲ್ಲಿದೆ. ಐದಾರು ತುಳಸಿ ಎಲೆಗಳೊಂದಿಗೆ ಹತ್ತು ಕೇಸರಿ ಎಳೆಗಳನ್ನು ಸ್ವಚ್ಛವಾದ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಇದನ್ನು ಸೇರಿಸಿ ಪೇಸ್ಟ್ ಮಾಡಬೇಕು ಅಂದರೆ ಕೇಸರಿಯ ಅಂಶ ತೇವಗೊಳ್ಳಬೇಕು. ನಂತರ ಅದನ್ನು ಮೊಡವೆ ಇರುವ ಜಾಗದಲ್ಲಿ ಚೆನ್ನಾಗಿ ಲೇಪಿಸಬೇಕು.
ಪಿಗ್ಮೆಂಟೇಷನ್ ಸಮಸ್ಯೆಗೆ ಕೇಸರಿ ಬಳಕೆ ಉತ್ತಮ ಸಹಾಯಕ.
ದೇಹದ ಯಾವುದೇ ಭಾಗದಲ್ಲಿ ಕಂದುಬಣ್ಣದ ಕಲೆಗಳಾದರೆ ಮುಖದ ಮೇಲೆ ಪಿಗ್ಮೆಂಟೇಷನ್ ಉಂಟಾದರೆ ಕಪ್ಪುಕಲೆಗಳಾದರೆ ಕೇಸರಿಯನ್ನು ಬಳಕೆ ಮಾಡುವುದು ಸೂಕ್ತ. ಸ್ವಚ್ಛವಾದ ನೀರಿನಲ್ಲಿ ಕೇಸರಿಯನ್ನು ನೆನೆಸಿಟ್ಟು ಅದಕ್ಕೆ ಎರಡು ಚಮಚ ಅರಿಶಿಣ ಬೆರೆಸಿ ಮುಖದ ಕಪ್ಪುಕಲೆ ಅಥವಾ ಪಿಗ್ಮೆಂಟ್ ಉಂಟಾದ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ನಿಯಮಿತವಾಗಿ ಹಚ್ಚುದರಿಂದ ಕಲೆ ಮಾಯವಾಗುತ್ತದೆ. ಮುಖದ ಅಂದ ಹೆಚ್ಚಿಸಲು ಕೇಸರಿ ತುಂಬಾ ಒಳ್ಳೆಯದು ಚರ್ಮದ ಬಣ್ಣ ತಿಳಿಯಾಗಿಸುವ ಬಹುತೇಕ ಸೌಂದರ್ಯವರ್ಧಕಗಳಲ್ಲಿ ಕೇಸರಿಯನ್ನು ಬಳಕೆ ಮಾದುತ್ತಾರೆ.
ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಬಹಳ ಹಿಂದಿನಿಂದಲೂ ಪೂರ್ವಜರು ಕೇಸರಿಯು ಸೌಂದರ್ಯವರ್ಧಕ ಎನ್ನುವುದನ್ನು ಕಂಡುಹಿಡಿದಿದ್ದಾರೆ. ನಿಯಮಿತವಾಗಿ ಕೇಸರಿಯನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ಚರ್ಮದ ಬಣ್ಣ ಹೊಳಪಾಗುತ್ತದೆ. ಕೈಗಳಿಂದ ಕೇಸರಿ ದಳಗಳನ್ನು ಹಿಸುಕಿ ರಸ ತೆಗೆಯಬೇಕು. ಅದಕ್ಕೆ ಸ್ವಲ್ಪಗಂಧದ ಪುಡಿ ಹಾಗೂ ರೋಸ್ ವಾಟರ್ ನೊಂದಿಗೆ ಬೆರೆಸಿ ದಿನವೂ ಮುಖಕ್ಕೆ ಹಚ್ಚಿಕೊಳ್ಳಬೇಕು ಇದರಿಂದ ಉತ್ತಮ ಫಲಿತಾಂಶ ದೊರೆಯುವುದು.
ಗಾಯಗೊಂಡ ಚರ್ಮದ ಕಲೆಗೆ ಕೂಡ ಕೇಸರಿಯನ್ನು ಬಳಸಬಹುದಾಗಿದೆ.
ಮುಖ, ಕೈಕಾಲುಗಳ ಮೇಲೆ ಯಾವುದಾದರೂ ಗಾಯದ ಕಲೆ ಇರುತ್ತದೆ.
ಕೇಸರಿ ಬಳಕೆ ಮಾಡುವ ಮೂಲಕ ಆ ಕಲೆಯನ್ನು ತೆಗೆಯಬಹುದು. ನೀರಿನಲ್ಲಿ ನೆನೆಸಿಕೊಂಡ ಕೇಸರಿ ದಳಗಳೊಂದಿಗೆ ಕೆಲ ಹನಿ ಕೊಬ್ಬರಿ ಎಣ್ಣೆ ಬೆರೆಸಿ ಅದನ್ನು ಕಲೆಯಾದ ಜಾಗಕ್ಕೆ ಹಚ್ಚಿಕೊಳ್ಳಬೇಕು ಇದರಿಂದ ಕಲೆ ನಿವಾರಣೆಯಾಗುತ್ತದೆ.