ಶಿವಮೊಗ್ಗ: ಜಿಲ್ಲೆಯ ಸುಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದು ಸಾಗರದ ಮಾರಿಕಾಂಬ ಜಾತ್ರೆ. ಇದೀಗ ಸಾಗರದ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ದಿನಾಂಕ 03-02-2026ರಿಂದ ಸಾಗರದ ಮಾರಿಕಾಂಬಾ ಜಾತ್ರಾ ಮಹೋತ್ಸವ ನೆರವೇರಲಿದೆ.
ಈ ಕುರಿತಂತೆ ಮಾರಿಕಾಂಬ ದೇವಸ್ಥಾನ ಕಮಿಟಿಯ ಸದಸ್ಯರಾದಂತ ತಾರಾಮೂರ್ತಿ ಮಾಹಿತಿ ನೀಡಿದ್ದು, ಅಕ್ಟೋಬರ್.5ರಂದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಠಾನದ ಜನರಲ್ ಬಾಡಿ ಮೀಟಿಂಗ್ ನಡೆಯಲಿದೆ. ಅದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಠಾನದ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಕ್ಟೋಬರ್.30ರ ಒಳಗಾಗಿ ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಠಾನಕ್ಕೆ ಹೊಸ ಪದಾಧಿಕಾರಿಗಳು ಆಯ್ಕೆಗೊಂಡು, ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದರು.
ಮಾರಿಕಾಂಬಾ ಜಾತ್ರೆಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗೆ ಜಾತ್ರಾ ಮಹೋತ್ಸವಕ್ಕೆ ದಿನಾಂಕ ಗೊತ್ತು ಪಡಿಸಲಾಗಿದೆ. ಚುನಾವಣಾ ಪ್ರಕ್ರಿಯೆಗೂ ಮುನ್ನವೇ ಮಾರಿಕಾಂಬಾ ಜಾತ್ರಾ ಕೈಂಕರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ದಿನಾಂಕ ಪ್ರಕಟಿಸಲಾಗಿದೆ. ಅದರಂತೆ ಜಾತ್ರಾ ಕಾರ್ಯಕ್ರಮ ತಯಾರಿ ಸೇರಿದಂತೆ ಇತರೆ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.
ಹೀಗಿದೆ ಸಾಗರ ಮಾರಿಕಾಂಬಾ ಜಾತ್ರಾ ಮಹೋತ್ಸವದ ಪ್ರಮುಖ ದಿನಾಂಕಗಳು
- ಪುಷ್ಯ ಮಾಸ ಶುಕ್ಲ ಪಕ್ಷ ದಿನಾಂಕ 23-12-2025ರ ಮಂಗವಾರ ತದಿಗೆ ಶ್ರವಣ ನಕ್ಷತ್ರದಲ್ಲಿ ಶ್ರೀ ಮಾರಿಕಾಂಬಾ ಜಾತ್ರೆಗೆ ಮರ ಕಡಿಯುವ ಕಾರ್ಯಕ್ರಮ ನಡೆಯಲಿದೆ.
- ದಿನಾಂಕ 27-01-2026ರ ಮಂಗಳವಾರ ಮಾಘ ಮಾಸ ಶುಕ್ಲ ಪಕ್ಷದ ನವಮಿಯಂದು ಶ್ರೀ ಮಾರಿಕಾಂಬಾ ಜಾತ್ರೆಗೆ ಅಂಕೆ ಹಾಕಲಾಗುತ್ತದೆ.
- ದಿನಾಂಕ 03-02-2026ರ ಮಂಗಳವಾರ ಬಿದಿಗೆ ಮಾಘ ನಕ್ಷತ್ರದಲ್ಲಿ ಶ್ರೀ ಮಾರಿಕಾಂಬಾ ತವರುಮನೆಯಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆಯಾಗಲಿದೆ.
- ದಿನಾಂಕ 04-02-2026ರ ಬುಧವಾರ ತದಿಗೆ ಹುಬ್ಬ ನಕ್ಷತ್ರದಲ್ಲಿ ದೇವಿ ಗಂಡನ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತದೆ.
- ದಿನಾಂಕ 07-02-2026ರ ಶನಿವಾರ ಷಷ್ಟಿ ಚಿತ್ತಾ ನಕ್ಷದಲ್ಲಿ ಗಾವುಗುರಿ ಹಿಡಿಯುವ ಕಾರ್ಯಕ್ರಮ ನಡೆಯಲಿದೆ.
- ದಿನಾಂಕ 11-02-2026ರ ಬುಧವಾರ ನವಮಿ ಅನುರಾಧಾ ನಕ್ಷತ್ರ ಶ್ರೀ ದೇವಿಯನ್ನು ವನಕ್ಕೆ ಬಿಡುವ ಕಾರ್ಯಕ್ರಮ ನೆರವೇರಲಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಪ್ರಧಾನಿ ಮೋದಿ ಪದವಿ ವಿವರ ಬಹಿರಂಗಪಡಿಸಬೇಕೆಂಬ ಸಿಐಸಿ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್
BIG NEWS : ಧರ್ಮಸ್ಥಳ ಕೇಸ್ ಶೇ.90ರಷ್ಟು ತನಿಖೆ ಮುಗಿದಿದೆ, ‘NIA, CBI’ ಅಗತ್ಯವಿಲ್ಲ: ಸಚಿವ ರಾಮಲಿಂಗಾರೆಡ್ಡಿ