ಬೆಂಗಳೂರು: ನಗರದ ಕೆಂಗೇರಿಯ ರಿಂಗ್ ರೋಡ್ ನಲ್ಲಿರುವಂತ ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅವರನ್ನು ಸಮಾಧಿ ಮಾಡಲಾಗಿತ್ತು. ಇಂತಹ ಸ್ಥಳವನ್ನೇ ನೆಲಸಮ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಹೌದು. ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಈ ರೀತಿಯಾಗಿ ಮೂಲ ಸಮಾಧಿಯನ್ನು ನೆಲಸಮ ಮಾಡಲಾಗಿದೆ.
ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಿರುವುದರಿಂದ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಮೂಲ ಸಮಾಧಿ ಇದಾಗಿದ್ದು, ವಿಷ್ಣು ಸ್ಮಾರಕ ನಿರ್ಮಾಣದ ಬಳಿಕ ಈ ರೀತಿಯಾಗಿ ಮಾಡಬಾರದಾಗಿತ್ತು ಎಂಬುದಾಗಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
SHOCKING : ರಾಜಸ್ಥಾನದಲ್ಲಿ `ರಾಕ್ಷಸಿ ಕೃತ್ಯ’ : ಬೀದಿ ನಾಯಿಗಳನ್ನು ಬೆನ್ನಟ್ಟಿ ಗುಂಡು ಹಾರಿಸಿ ಬರ್ಬರ ಹತ್ಯೆ.!
BREAKING : 6 ಮತಗಳಲ್ಲಿ 1 ಮತ ಕಳ್ಳತನ ಮಾಡಿದ್ದಾರೆ : ರಾಹುಲ್ ಗಾಂಧಿ ಗಂಭೀರ ಆರೋಪ | WATCH VIDEO