ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಸಾರ್ವಜನಿಕ ಸ್ಥಳದಲ್ಲೇ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದಂತ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಸಂಬಂಧ ಮಹಿಳೆ ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಾಗರ ಟೌನ್ ಠಾಣೆಯಲ್ಲಿ ಬಿಎನ್ಎಸ್-2023ರ ಅಡಿಯ ಕಲಂ 3(1)(ಆರ್), 3(1)(ಎಸ್), 3(2)(ವಿಎ) ಹಾಗೂ ಎಸ್ಸಿ, ಎಸ್ಟಿ ಅಮೆಂಡ್ ಮೆಂಟ್ ಆಕ್ಟ್ 2015ರಡಿ ರವಿ ಭಟ್ಟ ಆಲಿಯಾಸ್ ರವೀಂದ್ರ ಬಿನ್ ಕೇಶವಮೂರ್ತಿ(66) ಹಾಗೂ ಸಮರ್ಥ್ ಹೆಗಡೆ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮಹಿಳೆ ನೀಡಿದ ದೂರಿನಲ್ಲಿ ಏನಿದೆ.?
ದಿನಾಂಕ:-11-04-2025 ರಂದು 9-30 ಪಿ.ಎಂ ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರು ರವೀಂದ್ರ ಭಟ್ಟ ರವರ ಹತ್ತಿರ 15,000 ರೂಗಳನ್ನು ಸಾಲವಾಗಿ ಪಡೆದುಕೊಂಡಿದ್ದು ಅದಕ್ಕೆ ಪಿರ್ಯಾದಿದಾರರಿಂದ ಖಾಲಿ ಚೆಕ್ ನ್ನು ಪಡೆದುಕೊಂಡಿದ್ದು ಪಿರ್ಯಾದಿದಾರರು ಸಾಲ ಕೊಡುವುದು ತಡವಾಗಿದ್ದರಿಂದ ಆರೋಪಿ ಪಿರ್ಯಾದಿ ಕೊಟ್ನ ಖಾಲಿ ಚೆಕ್ ಗೆ 2,20,000 ರೂಗಳನ್ನು ನಮೂದಿಸಿ ಸಾಗರ ನ್ಯಾಯಾಲಯದಲ್ಲಿ ಸಮರ್ಥ ಹೆಗಡೆ ಎಂಬ ವ್ಯಕ್ತಿಯಿಂದ ಕೇಸ್ ಹಾಕಿದ್ದು ನಂತರ ಪಿರ್ಯಾದಿದಾರರು ಆರೋಪಿಯೊಂದಿಗೆ 1,10,000 ರೂಗಳಿಗೆ ರಾಜಿಮಾಡಿಕೊಂಡು ಅ ಹಣವನ್ನು ಪಿರ್ಯಾದಿದಾರರಿಗೆ ಅನೂಕೂಲವಾಗುವಂತೆ ಪ್ರತಿ ದಿನ ರೂ 500, 600, 700, 1000 ರೂ ನಂತೆ ಪಾವತಿಸುತ್ತಾ ಬಂದಿದ್ದೇನೆ.
ಪಿರ್ಯಾದಿದಾರರು ಆರೋಪಿಗೆ ಎಲ್ಲಾ ಹಣವನ್ನು ಪಾತಿಸಿರುತ್ತಾರೆ. ಈ ನಡುವೆ ಪಿರ್ಯಾದಿದಾರರು ರಾಜಿ ಮಾಡಿಕೊಂಡ ಪ್ರಕರಣದಲ್ಲಿ ಹಣ ಕೊಟ್ಟಿಲ್ಲ ಎಂದು ಆರೋಪಿಯು ಸಮರ್ಥ ಹೆಗಡೆ ಎಂಬ ವ್ಯಕ್ತಿ ಮೂಲಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಪಿರ್ಯಾದಿದಾರರಿಗೆ ಸಮರ್ಥ ಹೆಗಡೆ ಪರಿಚಯ ಇರುವುದಿಲ್ಲ, ದಿನಾಂಕ 12-03-2025 ರಂದು ಸುಮಾರು ಸಂಜೆ 06-15 ಪಿಎಂ ಸಮಯದಲ್ಲಿ ಈ ಬಗ್ಗೆ ಪಿರ್ಯಾದಿದಾರರಿಗೆ ಕೋರ್ಟ್ ನಿಂದ ನೋಟೀಸ್ ಬಂದಿದ್ದು ಆರೋಪಿಗೆ ಹಣ ಕೊಟ್ಟಿದ್ದರು ಸಹ ಏಕೆ ಪ್ರಕರಣ ದಾಖಲಿಸಿದ್ದೀರಾ ಎಂಬುದಾಗಿ ಕೇಳುತ್ತಾರೆ.
ಈ ವೇಳೆಯಲ್ಲಿ ಆರೋಪಿಗೆ ಕೇಳಿದ್ದಕ್ಕೆ ಪಿರ್ಯಾದಿಗೆ ಸೂಳೆಮುಂಡೆ, ಬೇವರ್ಸಿ ಮುಂಡೆ ಎಂದು ಅವಾಚ್ಯ ಶಬ್ದದಿಂದ ಜಾತಿ ನಿಂದನೆ ಮಾಡಿದ್ದು ಪ್ರತಿ ದಿನ ಪಿರ್ಯಾದಿದಾರರು ಟೀ ಅಂಗಡಿ ನೆಡೆಸುವ ಬಿ ಓ ಆಪೀಸ್ ಎದುರು ಸ್ಥಳಕ್ಕೆ ಬಂದು ಬೇವರ್ಸಿ ಮುಂಡೆ ನಿನ್ನೆ ಹಣೆಬರಹ ಟೀ ಮಾರಿಕೊಂಡಿರುವುದೇ ನಿನ್ನ ಕೆಲಸ ನಿನ್ನ ಪ್ರಾಣ ತೆಗೆಯದೇ ಬಿಡುವುದಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.
ನನ್ನ ಎದುರು ಹಾಕಿಕೊಂಡು ಅದು ಹೇಗೆ ಬದುಕುತ್ತೀಯಾ ಎಂದು ನಾನು ನೋಡುತ್ತೇನೆ ನೀನು ಕೆಟ್ಟ ಹೆಂಗಸು ನೀನು ಕೊರಮ ಜಾತಿಯಲ್ಲಿ ತಪ್ಪಿ ಹುಟ್ಟಿದೀಯಾ ನೀನು ನಾನು ಕೇಳಿದ ಹಾಗೆ ದುಡ್ಡು ಕಟ್ಟದಿದ್ದರೆ ನಿನ್ನ ಕುಟುಂಬದವರ ಜೀವನ ಮಾಡಲು ಬಿಡುವುದಿಲ್ಲ, ದಿನ ಸಂಜೆ 07-00 ಗಂಟೆಗೆ ಮನೆಗೆ ಹೋಗುವಾಗ ನಿಮ್ಮ ಮೇಲೆ ಗಾಡಿ ಹಾಯಿಸಿ ಸಾಯಿಸುತ್ತೇನೆ ಅಂತಾ ಬೆದರಿಕೆ ಹಾಕಿದ್ದು ಈ ರೀತಿ ಬೈಯುವಾಗ ಪಣಿ ಮತ್ತು ಬಸವರಾಜ ಎಂಬ ವ್ಯಕ್ತಿಗಳು ಬಂದು ಆರೋಪಿಯು ಪಿರ್ಯಾದಿದಾರರಿಗೆ ಬೈಯುವುದನ್ನು ಮತ್ತು ಜಾತಿ ನಿಂದನೆ ಮಾಡುವುದನ್ನು ನಿಲ್ಲಿಸುವಂತೆ ಹೇಳಿದರು ಸಹ ಬೈಯುತ್ತಾ ಹೋಗಿತ್ತಾರೆ. ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸಾಗರ ಟೌನ್ ಠಾಣೆಯ ಪೊಲೀಸರಿಂದ ಆರೋಪಿ ಅರೆಸ್ಟ್, ಜೈಲುಪಾಲು
ಈ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿದಂತ ಸಾಗರ ಟೌನ್ ಠಾಣೆಯ ಪೊಲೀಸರು ಸಾಗರದ ಶಾಂತಿನಗರ ನಿವಾಸಿ ರವಿ ಭಟ್ಟ ಆಲಿಯಾಸ್ ರವೀಂದ್ರ ಎಂಬುವರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇಂತಹ ಆರೋಪಿಗೆ ಮೇ.19ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಮತ್ತೋರ್ವ ಆರೋಪಿ ಸಮರ್ಥ್ ಹೆಗಡೆ ಬಂಧನಕ್ಕೆ ಬಲೆ ಬೀಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಭಾರತ-ಪಾಕ್ ಕದನ ವಿರಾಮ ಒಪ್ಪಂದ ವಿಸ್ತರಣೆ: ವಿಶ್ವಾಸ ವೃದ್ಧಿ ಕ್ರಮ ಮುಂದುವರಿಸಲು ಡಿಜಿಎಂಒ ಒಪ್ಪಿಗೆ